ಲಂಡನ್​: ಬಾಲಿವುಡ್ ಬಾದ್​ ಶಾ ಎಷ್ಟು ಪಾಶ್​ ಆಗಿದ್ದಾರೋ, ಅವರ ಮಕ್ಕಳು​ ಕೂಡ ಅಷ್ಟೇ ಪಾಶ್. ತಾವು ಆಡೋ ಮಾತಲ್ಲೂ ರಿಚ್​ನೆಸ್​, ಹಾಕೋ ಬಟ್ಟೆಯಲ್ಲೂ ರಿಚ್​ನೆಸ್​. ಯಾಕಂದ್ರೆ ಕಿಂಗ್​ ಖಾನ್​​ರ ಗತ್ತು ಗಮ್ಮತ್ತು ಅಷ್ಟಿದೆ. ಇತ್ತೀಚಿಗೆ, ಶಾರುಖ್​ ಖಾನ್​ರ ಮಗಳು ಸುಹಾನಾ ಖಾನ್​ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗ್ತಿದ್ದಾರೆ. ಅದ್ರಲ್ಲೂ ‘ಕ್ಯಾಟ್​​ ಲೇಡಿ’ ಅನ್ನೋ ಹೆಸರಲ್ಲಿ.

ಯಾಕೆ ‘ಕ್ಯಾಟ್​ ಲೇಡಿ’?
ನಿನ್ನೆ ಸುಹಾನಾ ಖಾನ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ, ಒಂದು ಫೋಟೋವನ್ನ ಅಪ್​ಲೋಡ್​ ಮಾಡಿದ್ದಾರೆ. ಅದ್ರಲ್ಲಿ, ಸುಹಾನ ಸೆಲ್ಫಿ ಕ್ಲಿಕ್ಕಿಸಿಕೊಳ್ತಿದ್ದಾಗಲೇ, ಒಂದು ಕಪ್ಪು ಬಣ್ಣದ ಬೆಕ್ಕನ್ನ ಸೆರೆಹಿಡಿದಿದ್ದಾರೆ. ಹೀಗಾಗಿ ಅದಕ್ಕೆ ಕ್ಯಾಪ್ಶನ್​  ಆಗಿ ‘ಕ್ಯಾಟ್​​ ಲೇಡಿ’ ಅಂತ ಹಾಕಿದ್ದಾರೆ.

ಬೂದು ಬಣ್ಣದ ಜಾಗರ್ಸ್​ ಹಾಗೂ ಬೇಜ್ ಬಣ್ಣದ ಕ್ರಾಪ್ ಟಾಪ್ ತೊಟ್ಟಿರೋ ಸುಹಾನಾ, ತೆರೆದ ಕೂದಲಿನ ಮೇಲೆ ನೀಲಿ ಬಣ್ಣದ ಕ್ಯಾನ್ವಾಸ್ ಕ್ಯಾಪ್ ಹಾಕಿದ್ದಾರೆ. ಅದೂ ಲಕ್ಷುರಿ​​ ಬ್ರ್ಯಾಂಡ್​ ಗೂಚಿ ಕ್ಯಾಪ್​, ಆ ನೀಲಿ ಬಣ್ಣದ ಕ್ಯಾಪ್ ಬೆಲೆ​ ಅಬ್ಬಬ್ಬ ಅಂದ್ರು 40 ಸಾವಿರ ರೂಪಾಯಿ

ಆ ಕ್ಯಾಪ್​ನ ಜೊತೆ ಫೋಟೋ ತೆಗೆಯುವಾಗ್ಲೇ, ಕಪ್ಪು ಬೆಕ್ಕು ಅಡ್ಡ ಬಂದಿದೆ, ಈ ವೇಳೆ ಅದನ್ನ ಕ್ಲಿಕ್ಕಿಸಿ ಅದಕ್ಕೆ ಸುಹಾನಾ ‘ಕ್ಯಾಟ್​ ಲೇಡಿ’ ಅಂತ ಬರೆದುಕೊಂಡಿದ್ದಾರೆ.

 

The post ₹40 ಸಾವಿರದ ಗೂಚಿ ಕ್ಯಾಪ್ ತೊಟ್ಟ ಸೂಪರ್​ ಸ್ಟಾರ್ ಮಗಳು.. ಕ್ಯಾಟ್ ಲೇಡಿ ಆಗಿದ್ದೇಕೆ? appeared first on News First Kannada.

Source: newsfirstlive.com

Source link