ನವದೆಹಲಿ: ಸಿಎಂ ಅಮರಿಂದರ್ ಸಿಂಗ್​​ ನೇತೃತ್ವದ ಪಂಜಾಬ್​ ಸರ್ಕಾರ ಕೊರೊನಾ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಅಧಿಕ ದರಕ್ಕೆ ಮಾರಾಟ ಮಾಡುತ್ತಿದೆ ಎಂದು ಶಿರೋಮಣಿ ಅಕಾಲಿದಳ ಪಕ್ಷದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಗಂಭೀರ ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸುಖ್ಬೀರ್ ಬಾದಲ್​, ಕೇಂದ್ರ ಸರ್ಕಾರದಿಂದ ಪಂಜಾಬ್ ಸರ್ಕಾರಕ್ಕೆ 400 ರೂಪಾಯಿಗಳಿಗೆ ಲಸಿಕೆ ದೊರೆಯುತ್ತಿದೆ. ಈ ಲಸಿಕೆಗಳನ್ನು ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ 1,060 ರೂಪಾಯಿ ಮಾಡುತ್ತಿದೆ. ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಬೆಲೆ ಲಸಿಕೆಗಳನ್ನು ಜನರಿಗೆ ಮಾರಾಟ ಮಾಡುತ್ತಿದೆ ಎಂದು ವಿವರಿಸಿದ್ದಾರೆ.

ಲಸಿಕೆಯನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರೂ ಆಪ್​ ಪಕ್ಷದ ನಾಯಕರು ಮೌನವಾಗಿದ್ದಾರೆ. ಆದರೆ ಸರ್ಕಾರ ತನ್ನ ನಡೆಯನ್ನು ಬದಲಿಸಿಕೊಳ್ಳದಿದ್ದರೆ ಹೈಕೋರ್ಟ್​​ಗೆ ಮನವಿ ಸಲ್ಲಿಕೆ ಮಾಡುತ್ತೇವೆ. ಈ ಬಗ್ಗೆ ತನಿಖೆ ನಡೆಸಲು ಸರ್ಕಾರವನ್ನು ಒತ್ತಾಯ ಮಾಡುತ್ತೇವೆ ಎಂದರು.

ಪಂಜಾಬ್ ಸರ್ಕಾರ ಕೊರೊನಾ ಲಸಿಕೆಗಳನ್ನು ಮೂರರಿಂದ ನಾಲ್ಕು ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದೆ. ಒಬ್ಬ ವ್ಯಕ್ತಿ ಎರಡು ಡೋಸ್​ ಲಸಿಕೆ ಪಡೆದುಕೊಳ್ಳು 3,120 ರೂಪಾಯಿ ಏಕೆ ಪಾವತಿ ಮಾಡಬೇಕು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಆರೋಪದ ಬೆನ್ನಲ್ಲೇ ಅಕಾಲಿದಳ ಕೂಡ ಗಂಭೀರ ಆರೋಪ ಮಾಡಿದೆ.

ಇತ್ತ ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಇದುವರೆಗೂ 22 ಕೋಟಿ ಲಸಿಕೆಗಳನ್ನು ಪೂರೈಕೆ ಮಾಡಿದೆ. ಮೊದಲು ವ್ಯಾಕ್ಸಿನೇಷನ್​​ ವಿಕೇಂದ್ರೀಕರಣಕ್ಕೆ ಒತ್ತಾಯಿಸಿದ್ದ ಪಂಜಾಬ್ ಸರ್ಕಾರ ಈಗ ಕೇಂದ್ರೀಕರಿಸಲು ಹೇಳುತ್ತಿದೆ. ಅಲ್ಲದೇ ರಾಹುಲ್​ ಗಾಂಧಿ ವ್ಯಾಕ್ಸಿನ್​ ಬಗ್ಗೆ ಉಪನ್ಯಾಸ ನೀಡೋ ಮೊದಲು ಕಾಂಗ್ರೆಸ್​ ಪಕ್ಷದ ರಾಜ್ಯವನ್ನು ನೋಡಿಕೊಳ್ಳಬೇಕು. ಪಂಜಾಬ್ ಸರ್ಕಾರಕ್ಕೆ ಕೋವ್ಯಾಕ್ಸಿನ್​​ಗೆ ಲಸಿಕೆಯನ್ನು ಪ್ರತಿ ಡೋಸ್​ಗೆ 400 ರೂಪಾಯಂತೆ 1.40 ಲಕ್ಷ ಲಸಿಕೆ ನೀಡಿದೆ. ಆದರೆ ಅದನ್ನು ಅವರು 20 ಖಾಸಗಿ ಆಸ್ಪತ್ರೆಗಳಿಗೆ 1,000 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

The post ₹400 ಬೆಲೆಯ ವ್ಯಾಕ್ಸಿನ್​ನ್ನ 1,060ಕ್ಕೆ ಮಾರಾಟ.. ಪಂಜಾಬ್ ಸರ್ಕಾರದ ವಿರುದ್ಧ ಗಂಭೀರ ಆರೋಪ appeared first on News First Kannada.

Source: newsfirstlive.com

Source link