ಬೆಂಗಳೂರು: ನಗರದ ಪೀಪಲ್ ಟ್ರೀ ಖಾಸಗಿ ಆಸ್ಪತ್ರೆ, ದುಡ್ಡು ಕೊಟ್ರೆ ಮಾತ್ರ ಮೃತದೇಹ ಹಸ್ತಾಂತರ ಮಾಡ್ತೀವಿ ಅಂತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಆಡಳಿತ ಮಂಡಳಿ ವಿರುದ್ಧ  ಮಾಜಿ ಕಾರ್ಪೊರೇಟರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಗೊರಗುಂಟೆ ಪಾಳ್ಯದ ಬಳಿ ಇರುವ ಪೀಪಲ್ ಟ್ರೀ ಖಾಸಗಿ ಆಸ್ಪತ್ರೆ ಮುಂದೆ ಯಶವಂತಪುರ ಮಾಜಿ ಕಾರ್ಪೋರೇಟರ್ ಜಿ.ಕೆ ವೆಂಕಟೇಶ್ ಹಾಗೂ ಮತ್ತಿರರು ಪ್ರತಿಭಟನೆ ನಡೆಸಿದ್ರು.

ರೋಗಿಗಳಿಗೆ ಸರಿಯಾಗಿ ಆಕ್ಸಿಜನ್ ನೀಡುತ್ತಿಲ್ಲ. ಹೀಗಾಗಿ ಕೊರೊನಾ ರೋಗಿಗಳು ಸಾಯುತ್ತಿದ್ದಾರೆ. ಅಗತ್ಯಕ್ಕಿಂತಲೂ ಕಡಿಮೆ ಆಕ್ಸಿಜನ್ ನೀಡಿರುವುದರಿಂದ ರೋಗಿ ಸಾವನ್ನಪ್ಪಿದ್ದಾನೆ. ₹6 ಲಕ್ಷ ಬಿಲ್ ಪಾವತಿಸದಿದ್ದರೆ ಮೃತದೇಹ ನೀಡುವುದಿಲ್ಲ ಎನ್ನುತ್ತಿದ್ದಾರೆ ಅಂತ ಪ್ರತಿಭಟನಾಕಾರರು ಹೇಳಿದ್ರು. ಇಂಥಹ ಆಸ್ಪತ್ರೆ ನಮ್ಮ ಕ್ಷೇತ್ರದಲ್ಲಿ ಅಗತ್ಯವಿಲ್ಲ. ಕೂಡಲೇ ಆಸ್ಪತ್ರೆ ಪರವಾನಗಿ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

The post ₹6 ಲಕ್ಷ ಕೊಟ್ರೆ ಮಾತ್ರ ಮೃತದೇಹ ಹಸ್ತಾಂತರ: ಖಾಸಗಿ ಆಸ್ಪತ್ರೆ ವಿರುದ್ಧ ಮಾಜಿ ಕಾರ್ಪೊರೇಟರ್ ಪ್ರತಿಭಟನೆ appeared first on News First Kannada.

Source: News First Kannada
Read More