ಬೆಂಗಳೂರು:  ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಕಾಳಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರುತ್ತಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಅರುಣ್ ಕುಮಾರ್ ಮತ್ತು ಸೈಯದ್ ಸಾಕೀಬ್ ಬಂಧಿತರು.

ಕೊರೊನಾ ಹಿನ್ನೆಲೆ ಆಕ್ಸಿಜನ್ ಅಭಾವ ಹೆಚ್ಚಿದೆ. ಆರೋಪಿಗಳು ಇದನ್ನೇ  ಬಂಡವಾಳ ಮಾಡಿಕೊಂಡು ಸರ್ಕಾರ ನಿಗದಿಪಡಿಸಿರುವ ಬೆಲೆಗಿಂತ ಹತ್ತುಪಟ್ಟು ಹೆಚ್ಚು ಬೆಲೆಗೆ ಆಕ್ಸಿಜನ್ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಯಲಹಂಕ ಮಾರ್ಗವಾಗಿ ಬೊಮ್ಮನಹಳ್ಳಿಯಿಂದ ದೊಡ್ಡಬಳ್ಳಾಪುರಕ್ಕೆ ಆಕ್ಸಿಜನ್ ಸಿಲಿಂಡರ್​ಗಳನ್ನ ಸಾಗಿಸುತ್ತಿದ್ದರು. 700 ರೂಪಾಯಿ ಬೆಲೆಯ 60 ಲೀಟರ್​ ಸಿಲಿಂಡರ್ ಅನ್ನು 5 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು ಅಂತ ತಿಳಿದುಬಂದಿದೆ.

ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಆಕ್ಸಿನ್ ಮಾರಾಟ ಮಾಡುತ್ತಿದ್ದಾಗಲೇ ಸಿಸಿಬಿ ರೆಡ್​​ ಹ್ಯಾಂಡ್​ ಆಗಿ ಆರೋಪಿಗಳನ್ನ ಸೆರೆಹಿಡಿದೆ. ಬಂಧಿತರಿಂದ 5 ಜಂಬೋ ಮೆಡಿಕಲ್ ಆಕ್ಸಿಜನ್ ಸಿಲಿಂಡರ್ ಗಳು ಮತ್ತು 2 ಕಾರ್​ಗಳನ್ನ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ₹700 ಬೆಲೆಯ ಆಕ್ಸಿಜನ್ ಸಿಲಿಂಡರ್​ಗಳನ್ನ ₹5,000ಕ್ಕೆ ಮಾರುತ್ತಿದ್ದ ಖದೀಮರು ಅರೆಸ್ಟ್​ appeared first on News First Kannada.

Source: newsfirstlive.com

Source link