ಅಮೃತಸರ: ಪಂಜಾಬ್​​ನಲ್ಲಿ ವಿದ್ಯುತ್​ ಸಮಸ್ಯೆ ತಲೆದೋರಿದ್ದು, ಈ ಕುರಿತು ಇತ್ತೀಚೆಗೆ ಸ್ವಪಕ್ಷದ ಸಿಎಂ ಅಮರಿಂದರ್ ಸಿಂಗ್ ಆಡಳಿತ ವಿರುದ್ಧ ಫೈರ್ ಆಗಿದ್ದರು. ವಿದ್ಯುತ್ ಸಮಸ್ಯೆಗಳ ವಿರುದ್ಧ ತೀವ್ರ ಟೀಕೆಗಳನ್ನ ಮಾಡಿದ್ದ ಸಿಧು, ತಮ್ಮ ಮನೆಯ ವಿದ್ಯುತ್ ಬಿಲ್​​ಅನ್ನು ಕಟ್ಟದೆ ಬಾಕಿ ಉಳಿಸಿಕೊಂಡಿರುವುದು ಸದ್ಯ ತೀವ್ರ ವಿಮರ್ಶೆಗೆ ಕಾರಣವಾಗಿದೆ.

ಅಮೃತಸರದಲ್ಲಿರುವ ಸಿಧು ಮನೆಯ ವಿದ್ಯುತ್ ಬಿಲ್​​ ಬಾಕಿ ಉಳಿಸಿಕೊಂಡಿರುವ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ವಿಪಕ್ಷಗಳು ಆಗ್ರಹ ಮಾಡಿವೆ. ಸಿಧು 8,67,540 ರೂಪಾಯಿ ಬಿಲ್​ ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದು, ಜೂನ್ 2 ಬಿಲ್ ಪಾವತಿ ಕಡೆಯ ದಿನಾಂಕವಾಗಿತ್ತು. ಆದರೂ ಇದುವರೆಗೂ ಸಿಧು ತಮ್ಮ ಮನೆಯ ವಿದ್ಯುತ್ ಬಿಲ್​ ಪಾವತಿ ಮಾಡಿಲ್ಲ. ಆದರೆ ಈ ಬಗ್ಗೆ ತೀವ್ರ ಟೀಕೆಗಳು ಕೇಳಿ ಬರುತ್ತಿದ್ದರೂ ಇದುವರೆಗೂ ಸಿಧು ಮಾತ್ರ ಯಾವುದೇ ಪ್ರತಿಕ್ರಿಯೆನ್ನು ನೀಡಿಲ್ಲ.

ಇನ್ನು ಇತ್ತೀಚೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ವಿಶೇಷ ಘೋಷಣೆ ಮಾಡಿ, ಪಂಜಾಬ್​​​ನಲ್ಲಿ ಆಪ್ ಸರ್ಕಾರ ಅಧಿಕಾರಕ್ಕೆ ಬಂದರೇ 300 ಯೂನಿಟ್​ ಕರೆಂಟ್​​ಅನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದ್ದು ವಿಶೇಷವಾಗಿತ್ತು.

2019ರಲ್ಲಿ ಸಿಧು ರಾಜೀನಾಮೆಗೆ ನೀಡಲು ಮುಂದಾದ ವೇಳೆ ಇಂಧನ ಇಲಾಖೆಯನ್ನು ಅವರಿಗೆ ನೀಡಲು ಮುಂದಾಗಿದ್ದರು. ಇನ್ನು ಪಂಜಾಬ್​ ಸ್ಟೇಟ್​ ಪವರ್ ಕಾರ್ಪೊರೇಷನ್ ನೀಡಿರುವ ಮಾಹಿತಿಯ ಅನ್ವಯ ಸಿಧು 8,67,540 ರೂಪಾಯಿ ಬಾಕಿ ಉಳಿಸಿಕೊಂಡಿದ್ದರು. ಇನ್ನು ವಿದ್ಯುತ್ ಬಿಲ್​ ಹಿಂದಿನ ಘಟನೆಗಳನ್ನು ನೋಡುವುದಾದರೇ ಸಿಧು ಬರೋಬ್ಬರಿ 17 ಲಕ್ಷ ರೂಪಾಯಿಗಳ ವಿದ್ಯುತ್ ಬಿಲ್​​ಅನ್ನು ಪಾವತಿ ಮಾಡಬೇಕಾಗಿತ್ತು. ಆದರೆ ಮಾರ್ಚ್​​ನಲ್ಲಿ 10 ಲಕ್ಷ ರೂಪಾಯಿಗಳನ್ನು ಸಿಧು ಪಾವತಿ ಮಾಡಿದ್ದರು. ಸದ್ಯ ಅವರ ಬಿಲ್ ಮೊತ್ತ ಸರಿ ಸುಮಾರು 9 ಲಕ್ಷ ರೂಪಾಯಿಗೆ ತಲುಪಿದೆ ಮಾಹಿತಿ ನೀಡಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪವರ್ ಡಿಪಾರ್ಟ್​​ಮೆಂಟ್​ನ ಮುಖ್ಯ ಎಂಜಿನಿಯರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

The post ₹8 ಲಕ್ಷ ವಿದ್ಯುತ್ ಬಿಲ್​ ಬಾಕಿ ಉಳಿಸಿಕೊಂಡ ಸಿಧು- ಕ್ರಮಕ್ಕೆ ಮುಂದಾದ ಪಂಜಾಬ್ ಸರ್ಕಾರ appeared first on News First Kannada.

Source: newsfirstlive.com

Source link