0888888888: ಈ ಫೋನ್ ನಂಬರ್ ಬ್ಯಾನ್ ಆಗಲು ಅಸಲಿ ಕಾರಣ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರ! | Here is the reason why this mobile number 0888888888 has been suspended


0888888888: ಈ ಫೋನ್ ನಂಬರ್ ಬ್ಯಾನ್ ಆಗಲು ಅಸಲಿ ಕಾರಣ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರ!

Mobile number Blocked

ಇದುವರೆಗೆ ನೀವು ಅತ್ಯಂತ ಭಯನಕವಾದ ಮನೆ, ಕಾಡು ಅಥವಾ ಬೇರೆ ಸ್ಥಳಗಳ ಬಗ್ಗೆ ಕೇಳಿರಬಹುದು. ಅಲ್ಲೆನಿದೆ ಎಂದು ಧೈರ್ಯದಿಂದ ಮುನ್ನುಗ್ಗಿ ಹೋದವರು ಹೇಳ ಹೆಸರಿಲ್ಲದಂತಾದವರ ಬಗ್ಗೆಯೂ ಕೇಳಿರಬಹುದು. ಆದರೆ ಭಯಾನಕ ಫೋನ್ ಸಂಖ್ಯೆಯನ್ನು ನೀವು ಎಂದಾದರೂ ಕೇಳಿದ್ದೀರಾ?. ಹೌದು, ಭಯ ಹುಟ್ಟಿಸುವ ಮೊಬೈಲ್ ನಂಬರ್ (Mobile Number) ಕೂಡ ಒಂದು ಇದೆ ಎಂದರೆ ನೀವು ನಂಬಲೇಬೇಕು. ನಾವು ಹೇಳುತ್ತಿರುವ ಈ ಮೊಬೈಲ್ ನಂಬರ್ ಪಡೆದಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ಇದನ್ನು ತಿಳಿದು ನಿಮಗೂ ಕೂಡ ಆಶ್ಚರ್ಯವಾಗಬಹುದು, ಆದರೂ ಇದು ನಿಜ. ಆ ಭಯಾನಕ ಮೊಬೈಲ್ ನಂಬರ್ 0888888888.

ಬಲ್ಗೇರಿಯಾದಲ್ಲಿ ಈ ನಂಬರ್ ಮೊದಲು ಬಳಕೆಯಲ್ಲಿತ್ತಂತೆ. ಬಲ್ಗೇರಿಯಾದ ಮೊಬಿಟೆಲ್ ಕಂಪನಿಯ ಸಿಇಒ ಮೊದಲು ಈ ಮೊಬೈಲ್ ನಂಬರ್ ಅನ್ನು ಖರೀದಿಸಿದ್ದರು. ಇದನ್ನು ಬಳಳುಸುತ್ತಿದ್ದ ವ್ಲಾಡಿಮಿರ್ ಗೆಸಾನೋವ್ 2001ರಲ್ಲಿ ಸಾವನ್ನಪ್ಪಿದ್ದರು. ಕ್ಯಾನ್ಸರ್ ಬಂದು ಸಾವನ್ನಪ್ಪಿದ್ದಾನೆ ಎಂದು ಸುದ್ದಿಯಾಯಿತು. ಆದರೆ ಮೊಬೈಲ್ ನಂಬರ್ ಸಾವಿಗೆ ಕಾರಣವೆಂದು ಮಾಧ್ಯಮಗಳು ವರದಿ ಮಾಡಿದ್ದವು.

ಇದಾದ ನಂತರ ಈ ಸಂಖ್ಯೆಯನ್ನು ದಿಮಿತ್ರಿವ್ ಹೆಸರಿನ ಕುಖ್ಯಾತ ಡ್ರಗ್ ಡೀಲರ್ ಖರೀದಿ ಮಾಡಿದ್ದರು. 2003ರಲ್ಲಿ ಅವರನ್ನು ಹೊಡೆದು ಸಾಯಿಸಲಾಯಿತು. ಸಾವಿನ ವೇಳೆ ಈ ಸಂಖ್ಯೆ ದಿಮಿತ್ರಿವ್ ಬಳಿಯೇ ಇತ್ತು. ನಂತರ ಪ್ರಸಿದ್ಧ ವ್ಯಾಪಾರಿಯೊಬ್ಬರ ಕೈಗೆ ಈ ನಂಬರ್ ಬಂದಿತ್ತು. ಆ ವ್ಯಾಪಾರಿ ಕೂಡ ತುಂಬಾ ದಿನ ಬದುಕಲಿಲ್ಲವಂತೆ.

ಇದುವರೆಗೆ ಯಾವ ವ್ಯಕ್ತಿ ಈ ಮೊಬೈಲ್ ಸಂಖ್ಯೆಯನ್ನು ಬಳಸಿದ್ದಾರೆಯೋ, ಸಾವು ಅವರನ್ನು ಹುಡುಕಿಕೊಂಡು ಅಟ್ಟಾಡಿಸಿದೆ. ಅಂದರೆ, ಈ ಮೊಬೈಲ್ ಸಂಖ್ಯೆ ಬಳಸಿರುವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಘಟನೆಗಳು ಒಂದೆರಡು ದಿನಗಳಿಂದ ನಡೆಯುತ್ತಿಲ್ಲ ಮತ್ತು ಕಳೆದ 10 ವರ್ಷಗಳಿಂದ ಈ ಘಟನೆಗಳು ನಡೆಯುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ಈ ಅಪಾಯಕಾರಿ ಮೊಬೈಲ್ ನಂಬರ್ ಚರ್ಚೆಗಳು ನಡೆಯುತ್ತಿವೆ.

ಕಳೆದ 15 ವರ್ಷಗಳಲ್ಲಿ ಇಂತಹ ಒಟ್ಟು ಮೂರು ಘಟನೆಗಳು ಸಂಭವಿಸಿವೆ. ಇದುವರೆಗೆ ಈ ಮೂವರು ಜನರು ಈ ಮೊಬೈಲ್ ಸಂಖ್ಯೆಯನ್ನು ಖರೀದಿಸಿದ್ದಾರೆ ಹಾಗೂ ಖರೀದಿಸಿದ ಮೂವರು ಕೂಡ ಸಾವನ್ನಪ್ಪಿದ್ದಾರೆ. ಮೂರು ಮಂದಿ ಸಾವನ್ನಪ್ಪಿದ ಮೇಲೆ ಮೊಬೈಲ್ ಸಂಖ್ಯೆಯನ್ನು ನಿಷೇಧ ಮಾಡಲಾಯಿತು. 2005ರ ನಂತರ ಈ ಮೊಬೈಲ್ ಸಂಖ್ಯೆಯನ್ನು ಯಾರಿಗೂ ನೀಡದೆ ಬ್ಯಾನ್ ಮಾಡಲಾಗಿದೆ.

Motorola Edge 30 Ultra: ಮೋಟೋರೊಲಾ ಕಂಪನಿಗೆ ಬಿಗ್ ಶಾಕ್: ರಿಲೀಸ್​ಗೂ ಮುನ್ನ ಎಡ್ಜ್ 30 ಅಲ್ಟ್ರಾ ಫೋನಿನ ಮಾಹಿತಿ ಲೀಕ್

Best Smartphones: 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಬೊಂಬಾಟ್ ಸ್ಮಾರ್ಟ್​ಫೋನ್​ಗಳು ಇಲ್ಲಿವೆ ನೋಡಿ

(Here is the reason why this mobile number 0888888888 has been suspended)

TV9 Kannada


Leave a Reply

Your email address will not be published. Required fields are marked *