1ರಿಂದ 5ನೇ ತರಗತಿ ಶಾಲೆ ಆರಂಭ ಭವಿಷ್ಯ ಇಂದು ನಿರ್ಧಾರ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ | CM Basavaraj Bommai hold meeting to decide opening 1st to 5th standard school in karnataka

1ರಿಂದ 5ನೇ ತರಗತಿ ಶಾಲೆ ಆರಂಭ ಭವಿಷ್ಯ ಇಂದು ನಿರ್ಧಾರ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ

ಸಾಂಕೇತಿಕ ಚಿತ್ರ

ಬೆಂಗಳೂರು: ಕೊರೊನಾ… ಕೊರೊನಾ… ಜಗತ್ತಿಗೇ ಟೆನ್ಷನ್ ಕೊಟ್ಟಿದ್ದ ಮಹಾಮಾರಿ ಮಕ್ಕಳ ಭವಿಷ್ಯಕ್ಕೂ ಕುತ್ತು ತಂದಿತ್ತು. 2ನೇ ಅವತಾರದ ಬಳಿಕ ಅಬ್ಬರವೇನೋ ಕಡಿಮೆಯಾಗಿತ್ತು. ಇದೇ ವೇಳೆ ಭಯದಿಂದಲೇ ಶಾಲೆ ಕಾಲೇಜು ಆರಂಭ ಮಾಡಲಾಗಿತ್ತು. ಇದೀಗ ಶಿಕ್ಷಣ ಇಲಾಖೆ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ.

1-5ನೇ ತರಗತಿ ಓಪನ್ ಭವಿಷ್ಯ ಇಂದು ನಿರ್ಧಾರ?
ಕೊರೊನಾ ಮಹಾಮಾರಿ ಬಹುತೇಕರ ಬದುಕನ್ನೇ ಬರ್ಬಾದ್ ಮಾಡಿದೆ. ವ್ಯಾಪಾರ, ವಹಿವಾಟು, ಉದ್ಯೋಗ ಎಲ್ಲವನ್ನೂ ಕಿತ್ತುಕೊಂಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಶಾಲಾ ಮಕ್ಕಳ ಅಮೂಲ್ಯ ಎರಡು ವರ್ಷಗಳನ್ನ ವೇಸ್ಟ್ ಮಾಡಿದೆ. ಮಕ್ಕಳ ಭವಿಷ್ಯ ರೂಪಿಸೋ ನಿಟ್ಟಿನಲ್ಲಿ ಆನ್ಲೈನ್ ಕ್ಲಾಸ್ ನಡೆಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಡುವೆ ಕೊರೊನಾ 3ನೇ ಅಲೆ ಭೀತಿಯಿಂದ ಪ್ರೈಮರಿ ಸ್ಕೂಲ್ ಓಪನ್ಗೆ ಈವರೆಗೆ ನಿರ್ಧಾರ ಕೈಗೊಂಡಿರಲಿಲ್ಲ. ಆದ್ರೆ 2ನೇ ಅಲೆ ಬಳಿಕ ಕೊರೊನಾ ಅಬ್ಬರ ಕಡಿಮೆಯಾದ ಬೆನ್ನಲ್ಲೇ ಪ್ರಾಥಮಿಕ ಶಾಲೆ ಓಪನ್ಗೆ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಹೀಗಾಗಿ 1ರಿಂದ 5 ತರಗತಿ ಶಾಲೆಗಳ ಆರಂಭದ ಭವಿಷ್ಯ ಇವತ್ತು ನಿರ್ಧಾರವಾಗುವ ಸಾಧ್ಯತೆ ದಟ್ಟವಾಗಿದೆ. ಇಂದು ಸಿಎಂ ಜೊತೆ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮೀಟಿಂಗ್ ನಡೆಯಲಿದ್ದು, ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

‘ಪ್ರೈಮರಿ’ ಗೈಡ್ಲೈನ್ಸ್
ಪ್ರೈಮೆರಿಗೆ ಶೇಕಡಾ 50 ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಅವಕಾಶ ನೀಡೋ ಸಾಧ್ಯತೆ ಇದೆ. ಸೋಮವಾರದಿಂದ ಶುಕ್ರವಾರದವರೆಗೂ ಮಾತ್ರ ಶಾಲೆ ಓಪನ್ ಮಾಡಲಿದ್ದು, ಇನ್ನುಳಿದ 2ದಿನ ಶಾಲೆ ಕೊಠಡಿಗಳ ಸ್ವಚ್ಛತಾ ಕಾರ್ಯಕ್ಕೆ ಮೀಸಲಿಡಲಾಗಿದೆ. ಇನ್ನು ಮಕ್ಕಳಿಗೆ ಒಂದು ದಿನ ತರಗತಿ ಒಂದು ದಿನ ರಜೆ ಅಂದ್ರೆ ದಿನ ಬಿಟ್ಟು ದಿನ ತರಗತಿ ನಡೆಯಲಿದೆ.ಆದ್ರೆ ಪಾಸಿಟಿವಿಟಿ ದರ ಶೇಕಡ 1ಕ್ಕಿಂತ ಕಡಿಮೆ ಇರುವ ಜಿಲ್ಲೆ, ತಾಲೂಕು ವಲಯಗಳಲ್ಲಿ ಮಾತ್ರ ಶಾಲೆ ಆರಂಭ ಮಾಡೋ ಸಾಧ್ಯತೆ ಇದೆ. ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ. ಅನುಮತಿ ಪತ್ರದಲ್ಲಿ ವಿದ್ಯಾರ್ಥಿಗೆ ಕೋವಿಡ್ ಇಲ್ಲದೆ ಇರೋದನ್ನ ಪೋಷಕರು ಧೃಢಿಕರಿಸಬೇಕು. ಹಾಗೇ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ.ಆನ್ಲೈನ್, ಆಫ್ಲೈನ್ ಎರಡೂ ತರಗತಿಗೂ ಅವಕಾಶ ನೀಡೋ ಸಾಧ್ಯತೆ ಇದೆ. 15 ರಿಂದ 20 ಮಕ್ಕಳ ತಂಡ ರಚಿಸಿ ಪಾಠ ಮಾಡಲು ಸಿದ್ಧತೆ ನಡೆಸಲಾಗಿದೆ.

ಪ್ರಾಥಮಿಕ ಶಾಲೆಗಳ ಪುನಾರಂಭಕ್ಕೆ ಪೂರ್ವಸಿದ್ಧತೆ ಎನ್ನುವಂತೆ 2 ವರ್ಷಗಳಿಂದ ಬಂದ್ ಆಗಿದ್ದ ಬಿಸಿಯೂಟ ಯೋಜನೆ ಅಕ್ಟೋಬರ್ 21ರಿಂದ ಆರಂಭವಾಗುತ್ತಿದೆ. ಸರ್ಕಾರ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭಕ್ಕೆ ಅವಕಾಶ ಕೊಟ್ಟರೆ, ಬಿಸಿಯೂಟ ಸೇವನೆಗೂ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್ ನೀಡುತ್ತೆ. ಇನ್ನು ಕೋವಿಡ್ ತಾಂತ್ರಿಕಾ ಸಲಹಾ ಸಮಿತಿ ಸಹ ಮೊದಲ ಹಂತದಲ್ಲಿ 3, 4 ಮತ್ತು 5ನೇ ತರಗತಿ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡೋ ಸಾಧ್ಯತೆ ಇದೆ.

ಒಟ್ನಲ್ಲಿ 2 ವರ್ಷಗಳಿಂದ ಕ್ಲೋಸ್ ಆಗಿದ್ದ ಪ್ರೈಮರಿ ಶಾಲೆಗಳ ಬಾಗಿಲು ಸದ್ಯದಲ್ಲೇ ಓಪನ್ ಆಗ್ತಿದೆ. ಇವತ್ತಿನ ಕೋವಿಡ್ ಟೆಕ್ನಿಕಲ್ ಕಮಿಟಿ ಹಾಗೂ ಸಿಎಂ ಜೊತೆಗೆ ಸಭೆ ಬಳಿಕ ಶಾಲಾರಂಭದ ದಿನಾಂಕ ಹೊರಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಇನ್ನೆರಡು ದಿನಗಳಲ್ಲಿ ಶಾಲೆ ಆರಂಭಿಸುವ ಬಗ್ಗೆ ನಿರ್ಧಾರ: ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿಕೆ

TV9 Kannada

Leave a comment

Your email address will not be published. Required fields are marked *