ಬಳ್ಳಾರಿ:  ಉಪಹಾರ ಹಾಗೂ ಟೀ ಕೊಡಿಸಲು ಯುವಕರು ಹುಚ್ಚಾಟದ ಬೆಟ್ಟಿಂಗ್ ನಡೆಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಎರಡು ಟ್ರಾಕ್ಟರ್‌ಗಳ ಹಿಂಬದಿ ಜೋಡಿಸಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಜಗ್ಗಾಟ ಮಾಡಿದ ಯುವಕರು ಈ ಚಾಲೆಂಜ್​ನಲ್ಲಿ ಗೆದ್ದರೆ ಒಂದು ಕಪ್ ಟೀ ಹಾಗೂ ಒಂದು ಪ್ಲೇಟ್ ಟಿಫನ್‌‍ ಕೊಡಿಸಬೇಕು ಅಂತ  ದುಸ್ಸಾಹಸಕ್ಕೆ ಮುಂದಾಗಿದ್ದರು. ಬಳ್ಳಾರಿ ಜಿಲ್ಲೆಯ ಕರ್ಚೇಡು ಗ್ರಾಮದಲ್ಲಿ ಘಟನೆ ನಡೆದಿದ್ದು, ಜನನಿಬಿಡ ಮುಖ್ಯರಸ್ತೆಯಲ್ಲೇ ಯುವಕರಿಂದ ಈ ಡೇಂಜರಸ್ ಪಂದ್ಯ ನಡೆಯುತ್ತಿತ್ತು. ಎರಡೂ ಟ್ರ್ಯಾಕ್ಟರ್​​ಗಳ ಹೈಡ್ರೋಲಿಕ್​ಗಳನ್ನ ಜಾಯಿಂಟ್ ಮಾಡಿ, ಬಲಾಬಲ ಪ್ರದರ್ಶನ ಮಾಡುತ್ತಿದ್ದರು. ಯುವಕರ ಹುಚ್ಚು ಸಾಹಸ ನೋಡಿ ಕೆಲವರು ಶಿಳ್ಳೆ ಚಪ್ಪಾಳೆ ಹೊಡೆಯುತ್ತಿದ್ರು. ಸ್ವಲ್ಪ ಯಾಮಾರಿದ್ರೂ ಟ್ರ್ಯಾಕ್ಟರ್​ ಚಾಲನೆ ಮಾಡುತ್ತಿದ್ದ ಯುವಕರಿಗೆ ಅಪಾಯ ಉಂಟಾಗುವ ಸಾಧ್ಯತೆ ಇತ್ತು.

ಈ ಹಿನ್ನೆಲೆ ಕೊನೆಗೆ ಗ್ರಾಮದ ಹಿರಿಯರು ಈ ಟ್ರಾಕ್ಟರ್ ಡ್ರೈವರ್​ಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಕೇವಲ ಟೀ, ಟಿಫನ್ ಮಾಡಲು ಇದೆಂತಹ ದುಸ್ಸಾಹಸ? ಅಂತ ಬೈದು ಬುದ್ಧಿ ಹೇಳಿದ್ದಾರೆ. ಊರಿನ ಹಿರಿಯರ ಮಧ್ಯಪ್ರವೇಶದ ಹಿನ್ನೆಲೆ ಯುವಕರು ಪಂದ್ಯವನ್ನ ಅರ್ಧಕ್ಕೆ ನಿಲ್ಲಿಸಿ ಸುಮ್ಮನಾದ್ರು. ಹೀಗಾಗಿ ಸಂಭವಿಸಬಹುದಾಗಿದ್ದ ಅಪಾಯ ತಪ್ಪಿದೆ.

The post 1 ಕಪ್ ಟೀ-ಟಿಫನ್​​ಗಾಗಿ ಚಾಲೆಂಜ್ ಮಾಡಿ ದುಸ್ಸಾಹಸ.. ಮುಖ್ಯರಸ್ತೆಯಲ್ಲಿ ಯುವಕರ ಡೇಂಜರಸ್ ಪಂದ್ಯ appeared first on News First Kannada.

Source: newsfirstlive.com

Source link