1 ಗಂಟೆ 25 ನಿಮಿಷಗಳ ಕಾಲ ಅಮೆರಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕಮಲಾ ಹ್ಯಾರಿಸ್


ನವದೆಹಲಿ: ಜೋ ಬೈಡನ್​ಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಉಪಾಧ್ಯೆಕ್ಷೆ ಕಮಲಾ ಹ್ಯಾರಿಸ್ ಅಲ್ಪಾವಧಿಗೆ ಅಮೆರಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಶುಕ್ರವಾರ ಶ್ವೇತಭವನ ತಿಳಿಸಿದೆ. ಒಂದು ಗಂಟೆ 25 ನಿಮಿಷಗಳ ಕಾಲ ಅಧ್ಯಕ್ಷೀಯ ಅಧಿಕಾರವನ್ನ ಕಮಲಾ ಹ್ಯಾರಿಸ್ ಹೊಂದಿದ್ದರು ಎಂದು ತಿಳಿಸಿದೆ.

ಬೆಳಗ್ಗೆ 10.10ಕ್ಕೆ (1510 GMT) ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಬಗ್ಗೆ ಅಧಿಕೃತ ಪತ್ರವನ್ನ ಕಳುಹಿಸಲಾಗಿತ್ತು. ಅಧ್ಯಕ್ಷರು ಬೆಳಗ್ಗೆ 11:35ಕ್ಕೆ ತಮ್ಮ ಕರ್ತವ್ಯಗಳನ್ನು ಪುನರಾರಂಭಿಸಿದ್ದಾರೆ ಎಂದು ವೈಟ್ ಹೌಸ್ ತಿಳಿಸಿದೆ.

ಹಂಗಾಮಿ ಅಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಕರ್ತವ್ಯ ನಿಭಾಯಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೊಲೊನೋಸ್ಕೋಪಿಗಾಗಿ ಅರಿವಳಿಕೆಗೆ ಒಳಗಾಗಿದ್ದರು. ಈ ವೇಳೆ ಅಧ್ಯಕ್ಷೀಯ ಅಧಿಕಾರವನ್ನು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ವರ್ಗಾಯಿಸಲಾಗಿತ್ತು. ವಾಷಿಂಗ್ಟನ್ ಡಿಸಿಯಲ್ಲಿರುವ ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ಆಸ್ಪತ್ರೆಯಲ್ಲಿ ಬೈಡನ್ ಚಿಕಿತ್ಸೆ ಪಡೆದುಕೊಂಡಿದ್ದಾರೆ.

News First Live Kannada


Leave a Reply

Your email address will not be published. Required fields are marked *