ಬೆಂಗಳೂರು: ಆಸ್ಪತ್ರೆಯಲ್ಲಿ ಅಕ್ರಮವಾಗಿ ರೆಮ್ಡಿಸಿವಿರ್​ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಆನೇಕಲ್​ ತಾಲ್ಲೂಕಿನ ಜಿಗಣಿಯ ಸುಹಾಸ್​ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಇಬ್ಬರು ವೈದ್ಯರನ್ನ ಪೊಲೀಸರು ಬಂಧಿಸಿದ್ದಾರೆ. ಅರ್ಮಾನ್​ ಅಲಿ ಹಾಗೂ ರಕ್ಷಿತ್​ ಬಂಧಿತ ವೈದ್ಯರು.

ಕೃತಕವಾಗಿ ಅಭಾವ ಸೃಷ್ಠಿಸಿ, ಒಂದು ಡೋಸ್​ಗೆ 15 ಸಾವಿರ ರೂಪಾಯಿಯಂತೆ ರೆಮ್ಡಿಸಿವಿರ್ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಆಸ್ಪತ್ರೆಯ ಮಾಲೀಕ ಡಾ. ಜಗದೀಶ್​ ಹಿರೇಮಠ್​ ವಿರುದ್ಧ ಕೇಳಿ ಬಂದಿದೆ. ಸುಹಾಸ್​ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಸಾಕಷ್ಟು ರೋಗಿಗಳು ಜೀವ ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಡಾ. ಜಗದೀಶ್​ ಹಿರೇಮಠ್​

ಈ ಬಗ್ಗೆ ತಮಗೆ ದೊರೆತ ಖಚಿತ ಮಾಹಿತಿ ಆಧರಿಸಿ ಜಿಗಣಿ ಪೋಲಿಸ್​ ಠಾಣೆಯ ಕ್ರೈಂ ತಂಡ ಆಸ್ಪತ್ರೆಗೆ ಮಫ್ತಿಯಲ್ಲಿ ಭೇಟಿ ನೀಡಿತ್ತು. ತಮಗೆ 2 ಇಂಜೆಕ್ಷನ್​ ಬೇಕೆಂದು ಕೇಳಿದಾಗ ಅದಕ್ಕೆ 30,000 ರೂಪಾಯಿ ನೀಡುವಂತೆ ವೈದ್ಯರು ಕೇಳಿದರು ಎನ್ನಲಾಗಿದೆ. ಹಣ ಪಡೆಯುತ್ತಿದ್ದ ವೇಳೆ ಪೊಲೀಸರು ರೆಡ್ ​ಹ್ಯಾಂಡ್​ ಆಗಿ ಆರೋಪಿಗಳನ್ನ ಬಂಧಿಸಿದ್ದಾರೆ. ಸದ್ಯ ಈ ಸಂಬಂಧ ಜಿಗಣಿ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post 1 ಡೋಸ್ ರೆಮ್ಡಿಸಿವಿರ್​ 15 ಸಾವಿರಕ್ಕೆ​ ಮಾರಾಟ; ಸುಹಾಸ್​ ಆಸ್ಪತ್ರೆಯ ಇಬ್ಬರು ವೈದ್ಯರು ಅರೆಸ್ಟ್ appeared first on News First Kannada.

Source: News First Kannada
Read More