1 ರೂಪಾಯಿ ನಾಣ್ಯ ಮಾರಾಟಕ್ಕಿಟ್ಟು ₹1 ಲಕ್ಷ ಕಳೆದುಕೊಂಡ ಶಿಕ್ಷಕಿ

1 ರೂಪಾಯಿ ನಾಣ್ಯ ಮಾರಾಟಕ್ಕಿಟ್ಟು ₹1 ಲಕ್ಷ ಕಳೆದುಕೊಂಡ ಶಿಕ್ಷಕಿ

ಬೆಂಗಳೂರು: 1 ರೂಪಾಯಿ ನಾಣ್ಯವನ್ನು ಓಎಲ್ಎಕ್ಸ್ ನಲ್ಲಿ ಮಾರಾಟಕ್ಕಿಟ್ಟ ಶಿಕ್ಷಕಿಯೊಬ್ಬರು 1 ಲಕ್ಷ ರೂಪಾಯಿ ಕಳೆದುಕೊಂಡು ವಂಚನೆಗೆ ಒಳಗಾಗಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಸರ್ಜಾಪುರ ರಸ್ತೆ ವಿಪ್ರೋ ಗೇಟ್​ನ 38 ವರ್ಷದ ಶಿಕ್ಷಕಿ ವಂಚನೆಗೊಳಗಾಗಿದ್ದಾರೆ. ಒಂದು ಕೋಟಿ ರೂಪಾಯಿ ಕೊಡುತ್ತೇನೆಂದು ನಂಬಿಸಿದ್ದ ವಂಚಕ, 1 ಲಕ್ಷ ರೂಪಾಯಿಯನ್ನು ತನ್ನ ಖಾತೆಗೆ ಹಾಕಿಸಿಕೊಂಡು ಮೋಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ನಡೆದಿದ್ದೇನು..?
ಜೂ.15 ರಂದು ಓಎಲ್ಎಕ್ಸ್ ನಲ್ಲಿ ಶಿಕ್ಷಕಿ ಓಎಲ್​​​​​ಎಕ್ಸ್​​​ನಲ್ಲಿ 1947ರ ಇಸವಿಯ ನಾಣ್ಯವನ್ನು ಮಾರಾಟಕ್ಕಿಟ್ಟು, ತಮ್ಮ ಮೊಬೈಲ್ ಸಂಖ್ಯೆಯನ್ನು ಪೊರ್ಟಲ್​​​ನಲ್ಲಿ ಹಂಚಿಕೊಂಡಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಶಿಕ್ಷಕಿಯ ಮೊಬೈಲ್ ನಂಬರ್​​ಗೆ ಕರೆ ಮಾಡಿ, 1 ರೂಪಾಯಿ ನಾಣ್ಯಕ್ಕೆ 1 ಕೋಟಿ ರೂಪಾಯಿ ಕೊಡುತ್ತೇನೆ ಎಂದು ನಂಬಿಸಿದ್ದ ಎನ್ನಲಾಗಿದೆ. ಅಲ್ಲದೇ ಶಿಕ್ಷಕಿಯ ವಾಟ್ಸಾಪ್​ಗೆ ಹಣ ಕಳುಹಿಸಿರುವ ನಕಲಿ ಸ್ಕ್ರೀನ್ ಶಾಟ್ ಕಳಿಸಿದ್ದಾನೆ.

ವಾಟ್ಸಾಪ್​​ ಮೂಲಕ ಬಂದ ನಕಲಿ ಸ್ಕ್ರೀನ್ ಶಾಟ್​​​ ನೋಡಿದ ಶಿಕ್ಷಕಿ, ಹಣ ಬಂದಿಲ್ಲ ಎಂದು ಆ ಅಪರಿಚಿತ ವ್ಯಕ್ತಿಗೆ ಕರೆ ಮಾಡಿ ಹೇಳಿದ್ದರು. ಈ ವೇಳೆ ಒಂದು ಕೋಟಿ ರೂಪಾಯಿ ದೊಡ್ಡ ಮೊತ್ತದ ಹಣ. ಆದ್ದರಿಂದ ಖಾತೆಗೆ ಹಣ ಬರಬೇಕಾದರೆ ಕೆಲವೊಂದು ಶುಲ್ಕ ಕಟ್ಟಬೇಕು ಎಂದು ಆತ ಹೇಳಿದ್ದ. ಆರ್​​ಬಿಐ ಶುಲ್ಕ, ತೆರಿಗೆ ಹೀಗೆ ನಾನಾ‌ ನೆಪ ಹೇಳಿ ಹಂತ ಹಂತವಾಗಿ ಮಹಿಳೆಯಿಂದ 1 ಲಕ್ಷ ರೂಪಾಯಿ ಹಣವನ್ನು ವಂಚಕ ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ.

ಆದರೆ ₹1 ಲಕ್ಷ ಕಳುಹಿಸಿದ ಮೇಲೂ ಅಕೌಂಟ್​​ಗೆ ಹಣ ಬಾರದಿದ್ದಾಗ ಮತ್ತೊಮ್ಮೆ ಅಪರಿಚಿತ ವ್ಯಕ್ತಿಗೆ ಮಾಡಿದ್ದು, ಈ ವೇಳೆಯೂ ಆತ ಹೆಚ್ಚುವರಿ ಹಣ ಕೇಳಿದ್ದಾನೆ. ಇದರಿಂದ ಅನುಮಾನಗೊಂಡ ಶಿಕ್ಷಕಿ ಕೊನೆಗೆ ಮೋಸ ಹೋಗಿರುವುದು ಅರಿವಾಗಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

The post 1 ರೂಪಾಯಿ ನಾಣ್ಯ ಮಾರಾಟಕ್ಕಿಟ್ಟು ₹1 ಲಕ್ಷ ಕಳೆದುಕೊಂಡ ಶಿಕ್ಷಕಿ appeared first on News First Kannada.

Source: newsfirstlive.com

Source link