1.31 ಲಕ್ಷ ಬೆಲೆ ವೈನ್- ಪ್ರಿಯಾಂಕಾಗೆ ಪತಿಯಿಂದ ವಿಶೇಷ ಗಿಫ್ಟ್

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹುಟ್ಟುಹಬ್ಬಕ್ಕೆ ಪತಿ ನಿಕ್ ಜೋನಸ್ 1.31 ಲಕ್ಷ ಬೆಲೆಬಾಳುವ ವೈನ್ ಗಿಫ್ಟ್ ನೀಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಜುಲೈ 18ರಂದು 39ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ಅವರ ಕುಟುಂಬದವರು, ಗೆಳೆಯರಿಂದ ಸಾಕಷ್ಟು ಗಿಫ್ಟ್ ಸಿಕ್ಕಿದೆ. ಇದರಲ್ಲಿ ಅವರ ಪತಿ ನೀಡಿದ ವೈನ್ ಬಾಟಲಿ ವಿಶೇಷವಾಗಿತ್ತು. ಪ್ರಿಯಾಂಕಾ ಸದ್ಯ ಲಂಡ್‍ನಲ್ಲಿದ್ದು, ನಿಕ್ ಅಮೆರಿಕದಲ್ಲಿದ್ದಾರೆ. ಪತ್ನಿಗೆ ವೀಶೆಷವಾದ ಗಿಫ್ಟ್ ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ:  ಗ್ಲಾಸ್ ಮೇಲೆ ಬರೆದು ದಿವ್ಯಾ ಶಮಂತ್‍ಗೆ ಹೇಳಿದ್ದೇನು..?

ನಿಕ್ 1982 ಶಟೊ ಮೂಟೌನ್ ರೋಥ್‍ಚೈಲ್ಡ್ ವೈನ್ ಬಾಟಲಿಯನ್ನು ಪ್ರಿಯಾಂಕಾಗೆ ನೀಡಿದ್ದಾರೆ. ಈ ಫೋಟೋವನ್ನು ಪ್ರಿಯಾಂಕಾ ಚೋಪ್ರಾ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿ ಸಂಭ್ರಮಿಸಿದ್ದಾರೆ. ಒಂದು ಗ್ಲಾಸ್‍ಗೆ ವೈನ್ ಹಾಕಲಾಗಿದೆ. ಟೇಬಲ್‍ಅನ್ನು ಹೂವು ಹಾಗೂ ಮೇಣದ ಬತ್ತಿ ಮೂಲಕ ಅಲಂಕರಿಸಲಾಗಿದೆ.

1982 ಶಟೊ ಮೂಟೌನ್ ರೋಥ್‍ಚೈಲ್ಡ್ ವೈನ್ ತುಂಬಾನೇ ದುಬಾರಿ ಹಾಗೂ ಅಪರೂಪದ ವೈನ್ ಆಗಿದೆ. ಫ್ರಾನ್ಸ್‍ನಲ್ಲಿ ಇದು ಸಿದ್ಧಗೊಳ್ಳುತ್ತದೆ. 750 ಎಂಎಲ್ ಬಾಟಲಿಯ ಈ ವೈನ್‍ಗೆ 1,31,375 ರೂಪಾಯಿ. ಇದನ್ನು ಆಯ್ದ ಹಣ್ಣುಗಳಿಂದ ಮಾತ್ರ ಸಿದ್ಧಪಡಿಸಲಾಗುತ್ತದೆ. ಇದನ್ನು ತಯಾರಿಸುವ ವಿಧಾನ ಕೂಡ ಬೇರೆ. ಹೀಗಾಗಿ, ಈ ವೈನ್ ಬೆಲೆ ಇಷ್ಟೊಂದು ದುಬಾರಿಯಾಗಿದೆ.

ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್‍ನಲ್ಲಿ ಗುರುತಿಸಿಕೊಂಡು ನಂತರ ಹಾಲಿವುಡ್‍ಗೆ ಪರಿಚಯಗೊಂಡರು. ಅಮೆರಿಕದ ಪಾಪ್ ಸಿಂಗರ್ ನಿಕ್ ಜೋನಸ್ ಅವರನ್ನು ವರಿಸಿದ ನಂತರದಲ್ಲಿ ಪ್ರಿಯಾಂಕಾ ಅಮೆರಿಕದಲ್ಲಿಯೇ ಸೆಟಲ್ ಆಗಿದ್ದಾರೆ. ಇತ್ತೀಚೆಗೆ ಅವರು ಅಮೆರಿಕದ ಪ್ರಮುಖ ನಗರ ನ್ಯೂಯಾರ್ಕ್‍ನಲ್ಲಿ ರೆಸ್ಟೋರೆಂಟ್ ಒಂದನ್ನು ಆರಂಭಿಸಿದ್ದಾರೆ. ಇದರ ಫೋಟೋಗಳನ್ನು ಅವರು ಈ ಹಿಂದೆ ಹಂಚಿಕೊಂಡಿದ್ದರು.

The post 1.31 ಲಕ್ಷ ಬೆಲೆ ವೈನ್- ಪ್ರಿಯಾಂಕಾಗೆ ಪತಿಯಿಂದ ವಿಶೇಷ ಗಿಫ್ಟ್ appeared first on Public TV.

Source: publictv.in

Source link