ಬೆಂಗಳೂರು: ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ನಟ ಸಂಚಾರಿ ವಿಜಯ್ ಅವರ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳಿಗೆ, ಸಿನಿ ರಂಗದ ಆಪ್ತರಿಗೆ, ಸಾರ್ವಜನಿಕರಿಗೆ ನಗರದ ರವೀಂದ್ರ ಕಾಲಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆಯಿಂದ ಹಲವು ಗಣ್ಯರು ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟಿದ್ದಾರೆ.

ನ್ಯೂಸ್​ಫಸ್ಟ್​​ನೊಂದಿಗೆ ಮಾತನಾಡಿದ ರಂಗಾಯಣ ರಘು, ಚಿಕ್ಕ ವಯಸ್ಸಿನಲ್ಲೇ ವಿಜಯ್ ದೊಡ್ಡ ಸಾಧನೆ ಮಾಡಿದ್ದ. ಆತನಿಗೆ ಕೆಲಸದಲ್ಲಿ ಬಹಳ ಶ್ರದ್ಧೆ ಇತ್ತು ಎಂದು ನೆನಪಿಸಿಕೊಂಡರು.  2009ರಿಂದ ಸಂಚಾರಿ ಥಿಯೇಟರ್​​ನಲ್ಲಿ ಕೆಲಸ ಆರಂಭಿಸಿದ ದಿನದಿಂದ ನನಗೆ ವಿಜಯ್ ಗೊತ್ತು. ಸುಮಾರು 10ನೇ ವಯಸ್ಸಿನಿಂದಲೇ ಅವರು ದೇವರೊಂದಿಗೆ ಬದುಕನ್ನು ಕಸಿದುಕೊಂಡು ಬಂದರು. ತಮ್ಮ ಕಷ್ಟಗಳನ್ನು ಸಹೋದರರೊಂದಿಗೆ ಹಂಚಿಕೊಂಡು ಬಂದಿದ್ದಾನೆ. ಈ ಗಲಾಟೆಯಲ್ಲಿ ದೇವರೊಂದಿಗೆ ವಿಜಯ್ ಗೆಲುವು ಪಡೆದುಕೊಂಡಿದ್ದಾನೆ. ದೇವರಿಗೆ ಅಂಗಾಂಗಳನ್ನು ದಾನ ಮಾಡಿ ಮತ್ತೆ ಗೆಲುವು ಪಡೆದುಕೊಂಡಿದ್ದಾನೆ ಎಂದರು.

ಕನ್ನಡ ಚಿತ್ರರಂಗ ಹಾಗೂ ಅವರ ಕುಟುಂಬಕ್ಕೆ ಭಾರೀ ನಷ್ಟವೇ ಆಗಿದೆ. ಅವರು ಮೂರು ಜನ ಅಣ್ಣ-ತಮ್ಮಂದಿರು ಕಷ್ಟಪಟ್ಟು ಬಂದಿದ್ದಾರೆ. ನನಗಿಂತ ಹೆಚ್ಚಾಗಿ ನನ್ನ ಪತ್ನಿಗೆ ವಿಜಯ್ ಬಗ್ಗೆ ಹೆಚ್ಚು ಗೊತ್ತು. ಸಂಚಾರಿ ತಂಡವನ್ನು ನನ್ನ ಪತ್ನಿಯೇ ನಡೆಸಿಕೊಂಡು ಬರುತ್ತಿದ್ದರು. ಹಲವು ಬಾರೀ ಫೋನ್​ ಮಾಡಿ ಮಾತನಾಡಿದ್ದೇನೆ. ಕಷ್ಟದಲ್ಲಿ ಇರುವವರಿಗೆ ಆತ ಸಹಾಯ ಮಾಡುವುದರಲ್ಲೂ ಮುಂದು. ತಾನು ಮಾಡಿದನ್ನು ಲೆಕ್ಕಾ ಇಟ್ಟು ಮಾಡುತ್ತಿರಲಿಲ್ಲ. ಆತನಿಗೆ ಪ್ರಾರಂಭದಿಂದಲೇ ಈ ಗುಣ ಇತ್ತು ಎಂದು ನೆನೆದು ಭಾವುಕರಾದರು.

ಅಂದ್ಹಾಗೆ ವಿಜಯ್ ಕಾಲೇಜಿನಲ್ಲಿದ್ದಾಗಲೇ ಸಾಕಷ್ಟು ಹವ್ಯಾಸಿ ರಂಗಭೂಮಿ ತಂಡಗಳನ್ನು ಸೇರಲು ಪ್ರಯತ್ನ ನಡೆಸಿದ್ದರು. ಇಂಥ ವೇಳೆಯಲ್ಲೇ ಅವರಿಗೆ ಸಂಚಾರಿ ರಂಗತಂಡದ ಹೆಬ್ಬಾಗಿಲು ತೆರೆದುಕೊಳ್ತು. ರಂಗಾಯಣ ರಘು ಅವರ ಪತ್ನಿ, ತಾವೇ ಸ್ವತಃ ಅದ್ಭುತ ಕಲಾವಿದೆಯಾಗಿರೋ ಮಂಗಳಾ ಅವರು ವಿಜಯ್​ಗೆ ತಾಯಿಯಂತೆ ಕಲೆಯ ಪಟ್ಟುಗಳನ್ನು ಕಲಿಸಿಕೊಟ್ಟರು. ಕಲ್ಲಾಗಿ ಬಂದ ವಿಜಯ್​​​ರನ್ನು ಶಿಲೆಯನ್ನಾಗಿ ಮಾರ್ಪಡಿಸುವಲ್ಲಿ ಸಾಕಷ್ಟು ಸಹಕಾರ ನೀಡಿದ್ರು. 10 ವರ್ಷಗಳ ಕಾಲ ಸತತವಾಗಿ ಈ ತಂಡದೊಂದಿಗೆ ಸಕ್ರಿಯವಾಗಿದ್ದ ವಿಜಯ್​​ಗೆ, ಸಂಚಾರಿ ತಂಡ ಒಂದು ಐಡೆಂಟಿಟಿಯನ್ನೂ ತಂದುಕೊಡ್ತು. ಅಷ್ಟು ಮಾತ್ರವಲ್ಲ ವಿಜಯ್​ ಕುಮಾರ್ ಅವರನ್ನ ಸಂಚಾರಿ ವಿಜಯ್​​ರನ್ನಾಗಿ ಮಾರ್ಪಡಿಸಿತು.

ಹಿರಿಯ ನಟ ರಂಗಾಯಣ ರಘು, ಡಿಂಗ್ರಿ ನಾಗರಾಜ್ ಹಾಗೂ ಡಾಲಿ ಧನಂಜಯ್, ರಾಜೇಶ್ ನಟರಂಗ ಸೇರಿದಂತೆ ಹಲವು ಕಲಾವಿದರು ಪಾರ್ಥೀವ ಶರೀರಕ್ಕೆ ಅಂತಿಮ‌ ನಮನ ಸಲ್ಲಿಸಿದರು.

The post ’10ನೇ ವಯಸ್ಸಿನಿಂದಲೇ ವಿಜಯ್​ ದೇವರೊಂದಿಗೆ ಜಗಳ ಮಾಡ್ಕೊಂಡು ಬಂದಿದ್ದಾನೆ’- ಕಣ್ಣೀರಿಟ್ಟ ರಂಗಾಯಣ ರಘು appeared first on News First Kannada.

Source: newsfirstlive.com

Source link