ಬೆಳಗಾವಿ: ನಿನ್ನೆಯ ಹೇಳಿಕೆಗೆ ನಾನು ಈಗಲೂ ಬದ್ಧ ಅಂತ ಮತ್ತೆ ರಾಜೀನಾಮೆ ವಿಚಾರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೋಳಿ ಪ್ರತಿಕ್ರಿಯೆ ನೀಡಿದ್ದಾರೆ.

ಆರ್‌ಎಸ್‌ಎಸ್ ಮುಖಂಡ ಅರವಿಂದ ದೇಶಪಾಂಡೆ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವ್ರು, ಪಕ್ಷದ ಕಾರ್ಯಕರ್ತ ಒಬ್ಬರ ತಂದೆ ತೀರಿ ಹೋಗಿದ್ರು.. ಅವರ ಭೇಟಿಗಾಗಿ ಅಥಣಿಗೆ ಬಂದಿರುವೆ. ಬೇರೆ ಯಾವುದೇ ರಾಜಕೀಯ ವಿಚಾರ ಇದರಲ್ಲಿ ಇಲ್ಲ. ನಿನ್ನೆ ಹೇಳಿಕೆ ನೀಡಿದ್ದೇನೆ ಮತ್ತೆ ಪುನಃ ಅದನ್ನ ಉಚ್ಛಾರ ಮಾಡಲ್ಲ, ನಿನ್ನೆಯ ಹೇಳಿಕೆಗೆ ನಾನು ಈಗಲು ಬದ್ಧ ಇದ್ದೇನೆ. ನನ್ನ ಹಿರಿಯರು ಖಾರವಾಗಿಯೇ ನನಗೆ ತಾಕೀತು ಮಾಡಿದ್ದಾರೆ. ಇನ್ನು ಹತ್ತು ದಿನಗಳಲ್ಲಿ ರಾಜಕೀಯ ತೀರ್ಮಾನಗಳನ್ನ ಬಹಿರಂಗ ಪಡಸುತ್ತೇನೆ ಅಂತ  ಜಿಲ್ಲೆಯ ಅಥಣಿ ಪಟ್ಟಣದಲ್ಲಿ ರಮೇಶ್ ಜಾರಕಿಹೋಳಿ ಹೇಳಿಕೆ ನೀಡಿದ್ದಾರೆ.

 

The post 10 ದಿನಗಳಲ್ಲಿ ನನ್ನ ರಾಜಕೀಯ ತೀರ್ಮಾನ ಬಹಿರಂಗಪಡಿಸ್ತೇನೆ: ರಮೇಶ್​ ಜಾರಕಿಹೋಳಿ appeared first on News First Kannada.

Source: newsfirstlive.com

Source link