ಮಂಗಳೂರು: ನಿಷೇಧಿತ ಮಾದಕವಸ್ತು ಎಂ.ಡಿ.ಎಂ.ಎಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಉಪ್ಪಳ ಗೇಟ್ ನಿವಾಸಿಗಳಾದ ಮಹಮ್ಮದ್ ಮುನಾಫ್, ಮಹಮ್ಮದ್ ಮುಝಾಂಬಿಲ್, ಅಹಮ್ಮದ್ ಮಸೂಕ್ ಬಂಧಿತ ಆರೋಪಿಗಳಾಗಿದ್ದಾರೆ. ಮಂಗಳೂರು ಮೂಲಕ ಕೇರಳ ರಾಜ್ಯಕ್ಕೆ ಸಾಗಾಟ ಮಾಡುವ ಸಂದರ್ಭ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಕೋಣಾಜೆ ಪೊಲೀಸರು ಕೊಣಾಜೆ ಬಳಿಯ ಗಣೇಶ್ ಮಹಲ್ ಎಂಬಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಫೇಸ್‍ಬುಕ್ ಖಾತೆ 2 ವರ್ಷ ಬ್ಯಾನ್

ಕಾರಿನಲ್ಲಿ ಡ್ರಗ್ಸ್ ಸಾಗಾಟ ಮಾಡುತ್ತಿರೋದು ಪತ್ತೆಯಾಗಿದೆ. ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು 10 ಲಕ್ಷದ 20 ಸಾವಿರ ಮೌಲ್ಯದ 170 ಗ್ರಾಂ ಎಂ.ಡಿ.ಎಂ.ಎ ಸಿಂಥೆಟಿಕ್ ಡ್ರಗ್, ಸಾಗಾಟಕ್ಕೆ ಉಪಯೋಗಿಸಿದ ಕಾರು, ನಾಲ್ಕು ಮೊಬೈಲ್ ಸೇರಿದಂತೆ ಒಟ್ಟು 17 ಲಕ್ಷ, 37 ಸಾವಿರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಬೆಂಗಳೂರಿಗರಿಗೆ ಸಿಹಿಸುದ್ದಿ ಶೇ.4ಕ್ಕೆ ಇಳಿದ ಪಾಸಿಟಿವಿಟಿ ರೇಟ್

ಮಂಗಳೂರು ನಗರದಲ್ಲಿ ಇದೇ ಪ್ರಥಮ ಬಾರಿಗೆ ದೊಡ್ಡ ಮೊತ್ತದ ಎಂ.ಡಿ.ಎಂ.ಎ ವಶಪಡಿಸಿಕೊಳ್ಳಲಾಗಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post 10 ಲಕ್ಷ ಮೌಲ್ಯದ ಎಂ.ಡಿ.ಎಂ.ಎ ಡ್ರಗ್ಸ್ ವಶ-ಮೂವರ ಬಂಧನ appeared first on Public TV.

Source: publictv.in

Source link