ಶಿಕ್ಷಕರ ನೇಮಕಾತಿ ಹಗರಣದಲ್ಲಿ 10 ವರ್ಷ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದ್ದ ಹರಿಯಾಣ ಮಾಜಿ ಸಿಎಂ ಓಂ ಪ್ರಕಾಶ್ ಚೌತಲಾ ಶಿಕ್ಷೆಯನ್ನು ಪೂರ್ಣಗೊಳಿಸಿ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

86 ವರ್ಷದ ಓಂ ಪ್ರಕಾಶ್​ ಚೌತಲಾ ಅವರು ಸದ್ಯ ಪೆರೋಲ್​​​ ಮೇರೆಗೆ ಜೈಲಿನಿಂದ ಹೊರಗೆ ಇದ್ದರು. ಈಗಾಗಲೇ ಅವರು ಶಿಕ್ಷೆಯ ಪ್ರಮಾಣಲ್ಲಿ 9 ವರ್ಷ 9 ತಿಂಗಳು ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದು, ಸದ್ಯ ಅವರು ಬಿಡುಗಡೆಯಾಗಲು ಅರ್ಹರಾಗಿದ್ದರು. ಈ ಹಿನ್ನೆಲೆಯಲ್ಲಿ ಅಗತ್ಯ ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿ ಅವರು ಬಿಡುಗಡೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

2013ರಲ್ಲಿ ಅವರು ಶಿಕ್ಷಕರ ನೇಮಕಾತಿ ಹಗರಣದಲ್ಲಿ ಜೈಲು ಸೇರಿದ್ದರು. ಇಂದು ಬೆಳಗ್ಗೆ ತಿಹಾರ್ ಜೈಲಿಗೆ ಆಗಮಿಸಿ ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಇಂಡಿಯನ್​ ನ್ಯಾಷನಲ್​​ ಲೋಕ್​​ ದಳ ಪಕ್ಷ ನಾಯಕರಾಗಿರುವ ಓಂ ಪ್ರಕಾಶ್ ಚೌತಲಾ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ದೆಹಲಿ ಕಾರಾಗೃಹ ಡಿ.ಜಿ ಮಾಹಿತಿ ನೀಡಿದ್ದಾರೆ.

ಜೈಲಿನಿಂದ ಬಿಡುಗಡೆಯಾಗಿ ಗುರುಗ್ರಾಮದಲ್ಲಿರುವ ತಮ್ಮ ನಿವಾಸಕ್ಕೆ ವಾಪಸ್​ ಆಗಿದ್ದ ಓಂ ಪ್ರಕಾಶ್​ ಚೌತಲಾ ಅವರಿಗೆ ಮೊಮ್ಮಗ ಕರಣ್​ ಚೌತಲಾ ಸೇರಿದಂತೆ ಪಕ್ಷದ ಕಾರ್ಯಕರ್ತರು ದೆಹಲಿ ಗಡಿಯಲ್ಲೇ ಹೂ ಮಳೆ ಸುರಿಸಿ ಸ್ವಾಗತ ಕೋರಿದ್ದಾರೆ. 2000 ಇಸವಿಯಲ್ಲಿ ಹರಿಯಾಣದ 3,206 ಹಿರಿಯ ಶಿಕ್ಷಕರ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಸಿದ್ದು, ತನಿಖೆಯಲ್ಲಿ ಸಾಬೀತಾಗಿತ್ತು. ಪ್ರಕರಣದಲ್ಲಿ ಓಂ ಪ್ರಕಾಶ್​ ಚೌತಲಾ, ಅವರ ಮಗ ಅಜಯ್​​ ಚೌತಲಾ ಸೇರಿದಂತೆ 53 ಮಂದಿಗೆ ಶಿಕ್ಷೆಯಾಗಿತ್ತು. 2013ರ ಜನವರಿಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯ 55 ಮಂದಿಗೆ ಪ್ರಕರಣದಲ್ಲಿ ಶಿಕ್ಷೆ ಪ್ರಕಟಿಸಿತ್ತು. ಅಂದಹಾಗೇ, ಓಂ ಪ್ರಕಾಶ್​ ಚೌತಲಾ ಅವರು ಜೈಲಿನಲ್ಲಿದ್ದರೂ ಇಂಡಿಯನ್​ ನ್ಯಾಷನಲ್​​ ಲೋಕ್​​ ದಳ ಪಕ್ಷದ ಮುಖ್ಯಸ್ಥರಾಗಿ ಮುಂದುವರಿದಿದ್ದರು.

The post 10 ವರ್ಷ ಜೈಲು ಶಿಕ್ಷೆ ಮುಗಿಸಿ ತಿಹಾರ್ ಜೈಲಿನಿಂದ ಹೊರಬಂದ ಮಾಜಿ ಸಿಎಂಗೆ ಭರ್ಜರಿ ಸ್ವಾಗತ appeared first on News First Kannada.

Source: newsfirstlive.com

Source link