100ನೇ ಟೆಸ್ಟ್ ಆಡ್ತಿರುವ ವಿರಾಟ್ ಕೊಹ್ಲಿಗೆ BCCIನಿಂದ ‘ಸ್ಪೆಷಲ್ ಗಿಫ್ಟ್’.. ಬಾಲ್ಯದ ಕೋಚ್ ನೆನೆದ ಕಿಂಗ್


ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್​ ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಆಡುವ ಮೂಲಕ ವಿಶೇಷ ಸಾಧನೆ ಮಾಡುತ್ತಿರುವ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಮುಖ್ಯ ಕೋಚ್​ ದ್ರಾವಿಡ್​, ಬಿಸಿಸಿಐ ವತಿಯಿಂದ ಸನ್ಮಾನ ಮಾಡಿದರು. ನೂರನೇ ಪಂದ್ಯಗಳನ್ನ ಆಡುತ್ತಿರುವ ಕೊಹ್ಲಿಗೆ ಸನ್ಮಾನದ ಜೊತೆ ವಿಶೇಷ ಸ್ಮರಣಿಕೆಯ ಕ್ಯಾಪ್​ ಕೂಡ ನೀಡಲಾಯಿತು.

ವಿರಾಟ್‌ಗೆ ವಿಶೇಷ ಕ್ಷಣವನ್ನು ನೀಡುವ ಮೊದಲು ತಂಡದ ಕೋಚ್ ರಾಹುಲ್ ದ್ರಾವಿಡ್, ಕಿಂಗ್ ಕೊಹ್ಲಿಯ ವಿಶೇಷ ಸಾಧನೆಯನ್ನ ಕೊಂಡಾಡಿದರು. ಈ ಅದ್ಭುತ ಸಾಧನೆಯನ್ನು ಸಾಧಿಸಿದ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅಭಿನಂದನೆಗಳು. ನೀವು ಈ ಸಾಧನೆಗೆ ಅರ್ಹರು. ಕಠಿಣ ಪರಿಶ್ರಮದಿಂದ ಇದನ್ನ ಸಾಧಿಸಿದ್ದೀರಿ. ಇಂತಹ ಅನೇಕ ದೊಡ್ಡ ದೊಡ್ಡ ಸಾಧನೆಗಳಿಗೆ ನಾಂದಿಯಾಗಲಿ. ನಾವು ಡ್ರೆಸ್ಸಿಂಗ್ ರೂಮ್‌ನಲ್ಲಿ ಹೇಳಿದಂತೆ ನಿಮ್ಮ ಸಾಧನೆಯನ್ನ ಡಬಲ್ ಮಾಡಿ ಅಂತಾ ದ್ರಾವಿಡ್ ಬಣ್ಣಿಸಿದರು.

ಪ್ರಸ್ತುತ ನಾವು ಮೂರು ಫಾರ್ಮ್ಯಾಟ್‌ಗಳನ್ನು ಹೊರತುಪಡಿಸಿ, ಐಪಿಎಲ್‌ನಲ್ಲೂ ಆಡುತ್ತೇವೆ. ನನ್ನ ಟೆಸ್ಟ್ ವೃತ್ತಿಜೀವನದಿಂದ ಭವಿಷ್ಯದ ಪೀಳಿಗೆ ಏನು ಕಲಿಯಬಹುದು ಅಂದರೆ ಕ್ರಿಕೆಟ್‌ನ ಶುದ್ಧ ಸ್ವರೂಪದಲ್ಲಿ 100 ಟೆಸ್ಟ್‌ಗಳನ್ನು ಆಡುವ ಸಾಧನೆಯನ್ನು ಸಾಧಿಸಿದ್ದೇನೆ. ಈ ಬಗ್ಗೆ ನನಗೆ ಹೆಮ್ಮೆ ಇದೆ.
ವಿರಾಟ್ ಕೊಹ್ಲಿ

ಬಳಿಕ ರಾಹುಲ್ ದ್ರಾವಿಡ್​ಗೆ ಧನ್ಯವಾದ ತಿಳಿಸಿ ಮಾತನಾಡಿದ ಕೊಹ್ಲಿ, ‘‘ಧನ್ಯವಾದ ರಾಹುಲ್ ಭಾಯ್, ಇದು ನನಗೆ ವಿಶೇಷ ಕ್ಷಣ” ನನ್ನ ಜೊತೆ ಹೆಂಡತಿಯೂ ಇದ್ದಾಳೆ. ನನ್ನ ಸಹೋದರರು, ನನ್ನ ಕುಟುಂಬ ಸದಸ್ಯರು, ಬಾಲ್ಯದ ಕೋಚ್ ಕೂಡ ಮೈದಾನದಲ್ಲಿದ್ದಾರೆ. ತುಂಬಾ ಹೆಮ್ಮೆ ಇದೆ. ಸಹ ಆಟಗಾರರಿಗೂ ಧನ್ಯವಾದಗಳು, ಈ ಸಮಯದಲ್ಲಿ ನೀವೆಲ್ಲರೂ ನನ್ನನ್ನು ಬೆಂಬಲಿಸಿದ್ದೀರಿ.

ಇದು ಖಂಡಿತವಾಗಿಯೂ ತಂಡದ ಆಟ. ನಿಮ್ಮ ಸಹಕಾರವಿಲ್ಲದೆ ಈ ಪ್ರಯಾಣ ಪೂರ್ಣಗೊಳ್ಳಲ್ಲ. ನನ್ನೊಂದಿಗೆ ದೀರ್ಘಕಾಲ ಆಡುತ್ತಿರುವ ಆಟಗಾರರು, ಮೊದಲು ದೇಶವನ್ನು ಪ್ರತಿನಿಧಿಸಲು ಅವಕಾಶ ನೀಡಿದ ಬಿಸಿಸಿಐಗೂ ಧನ್ಯವಾದಗಳು. ಆ ನಂತರ ಕೆಲಸಗಳು ಸುಗಮವಾಗಿ ಸಾಗಿದವು ಅಂತಾ ವಿರಾಟ್ ಹೇಳಿದರು.

News First Live Kannada


Leave a Reply

Your email address will not be published. Required fields are marked *