KKR ವಿರುದ್ಧ ಅಮಿತ್​ ಮಿಶ್ರಾ ಅಲಭ್ಯತೆಯಿಂದ ಡೆಲ್ಲಿ ಪರ ಕಣಕ್ಕಿಳಿದ ಲಲಿತ್​​ ಯಾದವ್, ಗೇಮ್​ ಚೇಂಜಿಂಗ್​ ಪರ್ಫಾರ್​​ಮೆನ್ಸ್​ ನೀಡಿದ್ರು. ಈ ಪಂದ್ಯದಲ್ಲಿ ಮಾರ್ಗನ್​, ನರೈನ್​ನನ್ನು ಒಂದೇ ಓವರ್​ನಲ್ಲಿ ಪೆವಿಲಿಯನ್​ಗಟ್ಟುವಲ್ಲಿ ಲಲಿತ್ ಸಕ್ಸಸ್​ ಕಂಡರು. ಅದರಲ್ಲೂ 100 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ್ದು ಎಲ್ಲರ ಗಮನ ಸೆಳೆದಿತ್ತು.

ಈ ಸಕ್ಸಸ್​ ಬಗ್ಗೆ ಲಲಿತ್ ಯಾದವ್ ಮಾತನಾಡಿದ್ದು ಆಕ್ರಮಣಕಾರಿ ಬೌಲಿಂಗ್​ ಮಾಡುವುದು ನನ್ನ ತಂತ್ರವಾಗಿತ್ತು. ಅದನ್ನ ಪ್ರಯೋಗಿಸಿದಾಗ ಅದು ವರ್ಕೌಟ್​ ಆಯ್ತು ಎಂದು ಹೇಳಿದ್ದಾರೆ. ಅಲ್ಲದೇ ಪಂದ್ಯದಲ್ಲಿ ನಾವು ರುಸೇಲ್​​​ ಬ್ಯಾಟಿಂಗ್ ವೇಳೆ ಸ್ಪಿನ್​ ಬೌಲಿಂಗ್​​ಗೆ ಅವಕಾಶ ನೀಡಬಾರದು ಎಂದು ಗೇಮ್​ ಪ್ಲಾನ್ ಮಾಡಿ ಇಶಾಂತ್, ರಬಾಡಾ ಮತ್ತು ಅವೇಶ್​​ ಬೌಲಿಂಗ್​​​​ನಲ್ಲಿ ಬೌನ್ಸರ್​​​​ ಮತ್ತು ಯಾರ್ಕರ್​ ಎಸೆತಗಳನ್ನೇ ಎಸೆಯಲು ಮುಂದಾಗಿದ್ದೆವು ಎಂದು ಲಲಿತ್​ ತಮ್ಮ ಗ್ಲೇಮ್ ಪ್ಲಾನ್​ ಬಿಚ್ಚಿಟ್ಟಿದ್ದಾರೆ.

ನ್ಯೂಸ್​ಫಸ್ಟ್​ ಕಳಕಳಿ
ಕೊರೊನಾದಿಂದ ರಕ್ಷಿಸಿಕೊಳ್ಳಲು ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ. ಮಾಸ್ಕ್ ಧರಿಸಿ, ಸೋಶಿಯಲ್ ಡಿಸ್ಟನ್ಸ್ ಕಾಪಾಡಿ. ಕೈ ತೊಳೆಯುತ್ತಿರಿ. ಮತ್ತು ಮೇ 1 ರಿಂದ 18ರ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಅರ್ಹರಾಗಿದ್ದು ರೆಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ https://www.cowin.gov.in/  ಇಲ್ಲಿಗೆ ಭೇಟಿ ಕೊಟ್ಟು ನೊಂದಣಿ ಮಾಡಿಕೊಳ್ಳಿ. ಮತ್ತೊಂದು ಮುಖ್ಯ ಸಂಗತಿ ಗಮನಿಸಿ CoWin ಆ್ಯಪ್ ಸಾರ್ವಜನಿಕರಿಗೆ ಅಲ್ಲ. ಹೀಗಾಗಿ ಕಡ್ಡಾಯವಾಗಿ ವೆಬ್​ಸೈಟ್​ನಲ್ಲಿಯೇ ನೊಂದಾಯಿಸಿಕೊಳ್ಳಬೇಕು.

The post 100 ಕಿ.ಮೀ ವೇಗದಲ್ಲಿ ಲಲಿತ್​ ಬೌಲಿಂಗ್​​.! ಕಾರಣ ಏನ್​ ಗೊತ್ತಾ..? appeared first on News First Kannada.

Source: newsfirstlive.com

Source link