‘100’ ಪರ್ಸೆಂಟ್ ಮನೋರಂಜನೆ ಕೊಟ್ರಾ ರಮೇಶ್? ‘ಕನ್ನಡದ ತ್ಯಾಗರಾಜ’ ನಟನೆಗೆ ಏನಂದ್ರು ಗಣೇಶ್?


ರಾಜ್ಯದಲ್ಲಿ ವರ್ಷಧಾರೆಯ ಜೊತೆಗೆ ಸಿನಿಮಾ ಮಳೆ ಆಗಿದೆ. ಒಂದಲ್ಲ ಅಂತ ಮೂರು ಸಿನಿಮಾಗಳು ಪ್ರೇಕ್ಷಕರ ಅಂಗಳ ಸೇರಿವೆ. ಅದರಲ್ಲಿ ರಮೇಶ್​ ಅರವಿಂದ್ ನಟಿಸಿ ನಿರ್ದೇಶನ ಮಾಡಿರುವ‘100’​ ಸಿನಿಮಾ ಕೂಡ ರಿಲೀಸ್​ ಆಗಿದೆ.

ಇಂದಿನ ಯುವಜನತೆ ಸೋಷಿಯಲ್​ ಮೀಡಿಯಾದಲ್ಲೆ ಊಟ ನಿದ್ರೆ ಎಲ್ಲಾವು ಮಾಡ್ತಾರೆ. ಅತಿಯಾದ್ರೆ ಅಮೃತವು ವಿಷ ಅನ್ನೊ ಮಾತಿನಂತೆ; ಸೋಷಿಯಲ್​ ಮೀಡಿಯಾ ಅನ್ನೋ ಸಮುದ್ರದಲ್ಲಿ ಅತೀಯಾಗಿ ಈಜಿದ್ರೆ ಮುಳುಗೋದು ನಾವೇ ಅನ್ನೋದನ್ನ ಇಂದಿನ ಯುವ ಪೀಳಿಗೆ ಗೊತ್ತಾಗ್ತಿಲ್ಲ. ಸೋಷಿಯಲ್​ ಮೀಡಿಯಾಗೆ ಆಡಿಕ್ಟ್​ ಆದ್ರೆ ಆಗೋ ಅನಾಹುತವನ್ನೇ 100 ಚಿತ್ರದ ಮೂಲಕ ಹೇಳಿದ್ದಾರೆ ರಮೇಶ್​ ಅರವಿಂದ್​.

ಯೆಸ್​.. ಸೈಬರ್​ ಕ್ರೈಂ ಸುತ್ತ ಸುತ್ತುವ ಕುತೂಹಲಕಾರಿ ವಸ್ತುವನ್ನಿಟ್ಟುಕೊಂಡು 100 ಚಿತ್ರದ ಮೂಲಕ ಒಂದು ಮೆಸೇಜ್​ ಕೊಟ್ಟಿದ್ದಾರೆ ರಮೇಶ್ ಅರವಿಂದ್​.. ಲಾಂಗು, ಮಚ್ಚು, ಐಟಂ ಸಾಂಗು ಇವೆಲ್ಲ ಹೊರತು ಪಡಿಸಿ ಹೊಸತನದಲ್ಲಿ ಮೂಡಿ ಬಂದಿದೆ 100 ಸಿನಿಮಾ.. ಚಿತ್ರದಲ್ಲಿ ರಮೇಶ್​ ಅರವಿಂದ್​, ರಚಿತಾ, ಪೂರ್ಣ ಪಾತ್ರಗಳು ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿವೆ.

ಇಂದು 100 ಚಿತ್ರ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಿದ್ದು, ಸಿನಿಮಾ ನೋಡಿದವರು 100 ಅನ್ನು 100 ಪರ್ಸೆಂಟ್​ ಮೆಚ್ಚಿದ್ದಾರೆ.. ಅಲ್ಲದೆ 100 ಚಿತ್ರವನ್ನು ನೋಡಿರುವ ಸೆಲೆಬ್ರಿಟಿಗಳು ಕೂಡ 100 ಚಿತ್ರದ ಬಗ್ಗೆ ಒಳ್ಳೆ ರಿವ್ಯೂ ಕೊಟ್ಟಿದ್ದಾರೆ.. ಗೋಲ್ಡನ್​ ಸ್ಟಾರ್​ ಗಣೇಶ್, ವಿಕಟ ಕವಿ ಯೋಗರಾಜ್​ ಭಟ್ 100 ಸಿನಿಮಾ ನೋಡಿ ಖುಷ್​ ಆಗಿದ್ದಾರೆ.

100 ಚಿತ್ರದಲ್ಲಿ ರಮೇಶ್​ ಅರವಿಂದ್​ 25ರ ಯುವಕರು ನಾಚುವಂತೆ ಯಂಗ್​ ಅಂಡ್​ ಎನರ್ಜಿಟಿಕ್​ ಆಗಿ ಕಾಣಿಸಿದ್ದಾರೆ.. ಅದೇ ರೀತಿ ಚಿತ್ರದ ನಾಯಕಿ ಪೂರ್ಣ ಇಡೀ ಸಿನಿಮಾ ಮುದ್ದಾಗಿ ಕಾಣಿಸಿದ್ದು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗ್ತಾರೆ.. ಅಲ್ಲದೆ ಚಿತ್ರದಲ್ಲಿ ರಚಿತಾ ರಾಮ್​ ರಮೇಶ್​ ಅರವಿಂದ್​ ತಂಗಿ ಪಾತ್ರದಲ್ಲಿ ಕಾಣಿಸಿದ್ದು,, ಅತೀಯಾಗಿ ಸೋಷಿಯಲ್​ ಮೀಡಿಯ ಬಳಸುವ ಯುವಜನಾಂಗವನ್ನು ಪ್ರತಿನಿಧಿಸಿದ್ದಾರೆ.

ಚಿತ್ರದಲ್ಲಿ ಹ್ಯಾಕರ್​ ಹರ್ಷ ಪಾತ್ರಧಾರಿಯಾಗಿ ನವ ನಟ ವಿಷ್ಣುವಾಗಿ ನಟಿಸಿಸದ್ದಾರೆ. ಪ್ರತಿ ಸೀನ್​ನಲ್ಲೂ ಭರ್ಜರಿಯಾಗಿ ಪರ್ಫಾಮ್​ ಮಾಡಿರುವ ವಿಷ್ಣು ಗಮನ ಸೆಳೆದಿದ್ದಾರೆ.. ಜೊತೆಗೆ ಸ್ಯಾಂಡಲ್​ವುಡ್​ನಲ್ಲಿ ಮಿಂಚುವ ಭರವಸೆ ಮೂಡಿಸಿದ್ದಾರೆ.

ಅದೇನೆ ಇರಲಿ ಪ್ರಸ್ತುತ ನಮ್ಮ ನಡುವೆ ಪ್ರತಿನಿತ್ಯ ನಡೆಯುತ್ತಿರುವ ಸೈಬರ್​ ಕ್ರೈಂ ಅನಾಹುತದ ಬಗ್ಗೆ ಅಚ್ಚುಕಟ್ಟಾಗಿ ರಮೇಶ್​ ಅರವಿಂದ್​ ಹೇಳಿದ್ದಾರೆ.. ಅಲ್ಲದೆ 100 ಫ್ಯಾಮಿಲಿ ಸಮೇತ ನೋಡುವಂತ ಸಿನಿಮಾವಾಗಿದ್ದು, ನಿರ್ಮಾಪಕರ ಮುಖದಲ್ಲಿ ನಗುತರಿಸಿದೆ.

The post ‘100’ ಪರ್ಸೆಂಟ್ ಮನೋರಂಜನೆ ಕೊಟ್ರಾ ರಮೇಶ್? ‘ಕನ್ನಡದ ತ್ಯಾಗರಾಜ’ ನಟನೆಗೆ ಏನಂದ್ರು ಗಣೇಶ್? appeared first on News First Kannada.

News First Live Kannada


Leave a Reply

Your email address will not be published. Required fields are marked *