$ 100 billion club: $ 100 ಬಿಲಿಯನ್​​ ಕ್ಲಬ್​ಗೆ ರಿಲಯನ್ಸ್ ಅಧ್ಯಕ್ಷ ಮುಕೇಶ್​ ಅಂಬಾನಿ ಎಂಟ್ರಿ | Reliance Industries Chairman Joins $ 100 Billion Exclusive Rich Club Here Is The Details

$ 100 billion club: $ 100 ಬಿಲಿಯನ್​​ ಕ್ಲಬ್​ಗೆ ರಿಲಯನ್ಸ್ ಅಧ್ಯಕ್ಷ ಮುಕೇಶ್​ ಅಂಬಾನಿ ಎಂಟ್ರಿ

ಮುಕೇಶ್ ಅಂಬಾನಿ (ಸಂಗ್ರಹ ಚಿತ್ರ)

ಏಷ್ಯಾದ ಅತ್ಯಂತ ಸಿರಿವಂತ ಎನಿಸಿಕೊಂಡಿರುವ ಮುಕೇಶ್ ಅಂಬಾನಿ ಈಗ ಜೆಫ್ ಬೆಜೋಸ್ ಮತ್ತು ಎಲಾನ್ ಮಸ್ಕ್ ಅವರೊಂದಿಗೆ ವಿಶಿಷ್ಟವಾದ ಸಾಧನೆ ಮಾಡಿದ ಶ್ರೀಮಂತರ ಕ್ಲಬ್​ಗೆ ಸೇರ್ಪಡೆ ಆಗಿದ್ದಾರೆ. ಅಂದ ಹಾಗೆ ಕನಿಷ್ಠ 100 ಬಿಲಿಯನ್ ಡಾಲರ್​ ಸಂಪತ್ತು ಇರುವವರ ಪಟ್ಟಿಗೆ ಮುಕೇಶ್ ಅಂಬಾನಿ ಕೂಡ ಸೇರಿಕೊಂಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷರೂ ಆಗಿರುವ ಮುಕೇಶ್​ ಅಂಬಾನಿ, ವಿಶೇಷ ಸಾಧನೆ ಮಾಡಿದ 11 ಜನರ ಅಪರೂಪದ ಗುಂಪನ್ನು ಪ್ರವೇಶಿಸಿದ್ದಾರೆ. ಮುಕೇಶ್​ ಅಂಬಾನಿ ನೇತೃತ್ವದ ಸಮೂಹದ ಸ್ಟಾಕ್​ಗಳು ಶುಕ್ರವಾರ ದಾಖಲೆ ಎತ್ತರಕ್ಕೆ ಏರಿದವು. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಈ ವರ್ಷ ಅವರ ಸಂಪತ್ತು 23.8 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಿದ ನಂತರ ಈಗ 100.6 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ತೈಲದಿಂದ ರಾಸಾಯನಿಕಗಳ ವ್ಯವಹಾರದವರೆಗೆ ದೇಶದ ಪಶ್ಚಿಮ ಕರಾವಳಿಯಲ್ಲಿ 1.24 ಮಿಲಿಯನ್ ಬ್ಯಾರೆಲ್ ಸಾಮರ್ಥ್ಯದ- ಜಾಮ್​ನಗರ್ ರಿಫೈನಿಂಗ್ ಸಮುಚ್ಚಯ ಸೇರಿದಂತೆ ಶೇಕಡಾ 20ರಷ್ಟು ಪಾಲನ್ನು ಸೌದಿ ಅರಾಮ್ಕೊದಿಂದ ಖರೀದಿಸಲಿದೆ ಎಂದು ಮುಕೇಶ್ ಅಂಬಾನಿ ಅವರು ಮುಂಬೈನಲ್ಲಿ ನಡೆದ ಕಂಪೆನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹೇಳಿದ್ದರು. 2005ರಲ್ಲಿ ತನ್ನ ದಿವಂಗತ ತಂದೆಯ ಸಾಮ್ರಾಜ್ಯದ ತೈಲ-ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್ ವ್ಯವಹಾರಗಳನ್ನು ಆನುವಂಶಿಕವಾಗಿ ಪಡೆದ ನಂತರ, 64 ವರ್ಷದ ಅಂಬಾನಿ ರೀಟೇಲ್, ಟೆಕ್ನಾಲಜಿ ಮತ್ತು ಇ-ಕಾಮರ್ಸ್ ಬೃಹತ್​ ಕಂಪೆನಿಯಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ. 2016ರಲ್ಲಿ ಸೇವೆಗಳನ್ನು ಆರಂಭಿಸಿದ ಅವರ ದೂರಸಂಪರ್ಕ ಘಟಕವಾದ ಜಿಯೋ ಈಗ ಭಾರತೀಯ ಮಾರುಕಟ್ಟೆಯಲ್ಲಿ ಪ್ರಬಲ ಸಂಸ್ಥೆಯಾಗಿದೆ. ಅವರ ರೀಟೇಲ್ ಮತ್ತು ತಂತ್ರಜ್ಞಾನದ ಉದ್ಯಮಗಳು ಕಳೆದ ವರ್ಷ ಫೇಸ್‌ಬುಕ್ ಇಂಕ್ ಮತ್ತು ಗೂಗಲ್‌ ತನಕ ಹಾಗೂ ಕೆಕೆಆರ್​ ಮತ್ತು ಕೋನಿಂದ ಸಿಲ್ವರ್ ಲೇಕ್​ವರೆಗೆ ಹೂಡಿಕೆದಾರರಿಗೆ ಷೇರುಗಳನ್ನು ಮಾರಾಟ ಮಾಡಿ, ಸುಮಾರು 2700 ಕೋಟಿ ಅಮೆರಿಕನ್ ಡಾಲರ್ ಸಂಗ್ರಹಿಸಿದವು.

10 ಶತಕೋಟಿ ಯುಎಸ್​ಡಿ ಗ್ರೀನ್​​ ಎನರ್ಜಿಯಲ್ಲಿ ಹೂಡಿಕೆ
ಮೂರು ವರ್ಷಗಳಲ್ಲಿ ಮಹತ್ವಾಕಾಂಕ್ಷೆಯ ಗ್ರೀನ್ ಎನರ್ಜಿಯಲ್ಲಿ ಸುಮಾರು 10 ಶತಕೋಟಿ ಯುಎಸ್​ಡಿ ಯೋಜಿತ ಹೂಡಿಕೆ ಬಗ್ಗೆ ಮುಕೇಶ್​ ಅಂಬಾನಿ ತಿಳಿಸಿದರು. ಮತ್ತು ಕಳೆದ ತಿಂಗಳು ಅಂಬಾನಿ ತಿಳಿಸಿರುವಂತೆ, ತಮ್ಮ ಕಂಪೆನಿಯು ಅಗ್ಗದ ಹಸಿರು ಹೈಡ್ರೋಜನ್ ಉತ್ಪಾದನೆಯನ್ನು “ಆಕ್ರಮಣಕಾರಿಯಾಗಿ” ಮುಂದುವರಿಸುವುದಾಗಿ ಹೇಳಿದ್ದರು. ಈ ಯೋಜನೆಯು ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ವಿಶ್ವದ ಮೂರನೇ ಅತಿದೊಡ್ಡ ತೈಲ ಗ್ರಾಹಕರಿಂದ ಇಂಧನ ಆಮದುಗಳನ್ನು ಕಡಿತಗೊಳಿಸಲು ಸಹಾಯ ಮಾಡುತ್ತದೆ. ಸ್ವಚ್ಛ ಇಂಧನಕ್ಕಾಗಿ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯೊಂದಿಗೆ ಸಮೀಕರಣಗೊಳ್ಳುತ್ತದೆ.

ಅಂಬಾನಿ ಘೋಷಣೆಯು ಭವಿಷ್ಯವನ್ನು ಸುಗಮಗೊಳಿಸಲು ತೈಲದಿಂದ ಸಿಮೆಂಟ್​ ತನಕ ಎಲ್ಲವನ್ನು ಮೀರಿ ನೋಡಬೇಕು ಎಂದು ಒಪ್ಪಿಕೊಂಡರೆ, ಫಾಸಿಲ್ ಫ್ಯುಯೆಲ್ ಈಗಲೂ ರಿಲಯನ್ಸ್‌ನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ವಾರ್ಷಿಕ ಆದಾಯದಲ್ಲಿ 73 ಶತಕೋಟಿ ಡಾಲರ್​ನ ಶೇ 60ರಷ್ಟಿದೆ. ತೈಲದಿಂದ ರಾಸಾಯನಿಕಗಳ ವ್ಯವಹಾರವು ಈಗ ಪ್ರತ್ಯೇಕ ಘಟಕವಾಗಿದೆ ಮತ್ತು ಸೌದಿ ಅರೇಬಿಯನ್ ಆಯಿಲ್ ಕಂಪೆನಿಯನ್ನು ಹೂಡಿಕೆದಾರರನ್ನಾಗಿ ಮಾಡಲು ಮಾತುಕತೆ ನಡೆಯುತ್ತಿದೆ. “ಹೊಸ ಉದಯೋನ್ಮುಖ ತಂತ್ರಜ್ಞಾನಗಳೊಂದಿಗೆ ಹೊಸ ಉದ್ಯಮಗಳನ್ನು ಸೃಷ್ಟಿಸುವಲ್ಲಿ ಮುಕೇಶ್ ಅಂಬಾನಿ ಮುಂಚೂಣಿಯಲ್ಲಿದ್ದಾರೆ,” ಎಂದು ಮುಂಬೈನ ಟಿಸಿಜಿ ಅಸೆಟ್ ಮ್ಯಾನೇಜ್‌ಮೆಂಟ್ ಕಂಪೆನಿಯ ಮುಖ್ಯ ಹೂಡಿಕೆ ಅಧಿಕಾರಿ ಚಕ್ರಿ ಲೋಕಪ್ರಿಯ ಹೇಳಿದ್ದಾರೆ.

2005ರಲ್ಲಿ ಕೋಕಿಲಾಬೆನ್​ರಿಂದ ಸಮಸ್ಯೆ ಪರಿಹಾರ
ರಿಲಯನ್ಸ್ ಯಶೋಗಾಥೆಯು 1960ರ ಉತ್ತರಾರ್ಧದಲ್ಲಿ ಆರಂಭವಾಗುತ್ತದೆ. ಆಗ ಯೆಮನ್​ನಲ್ಲಿ ಗ್ಯಾಸ್ ಸ್ಟೇಷನ್ ಅಟೆಂಡೆಂಟ್ ಆಗಿ ವೃತ್ತಿ ಆರಂಭಿಸಿದ ಧೀರೂಭಾಯಿ ಅಂಬಾನಿ ತನ್ನ ಪಾಲಿಯೆಸ್ಟರ್ ವ್ಯವಹಾರವನ್ನು ವಿಶಾಲವಾದ ಸಾಮ್ರಾಜ್ಯವಾಗಿ ಕಟ್ಟಲು ಆರಂಭಿಸಿದರು. 2002ರಲ್ಲಿ ಪಾರ್ಶ್ವವಾಯುವಿನಿಂದ ವಿಲ್​ ಮಾಡದೆ ಮರಣ ಹೊಂದಿದಾಗ ಅವರ ಇಬ್ಬರು ಮಕ್ಕಳಾದ ಮುಕೇಶ್ ಮತ್ತು ಅನಿಲ್ ಮಧ್ಯೆ ಉತ್ತರಾಧಿಕಾರಕ್ಕಾಗಿ ವೈಷಮ್ಯ ಉಂಟಾಯಿತು. ಇದನ್ನು ಅಂತಿಮವಾಗಿ ತಾಯಿ ಕೋಕಿಲಾಬೆನ್ 2005ರಲ್ಲಿ ಪರಿಹರಿಸಿದರು. ಆ ಒಪ್ಪಂದದ ಅಡಿಯಲ್ಲಿ ಮುಕೇಶ್ ಪ್ರಮುಖ ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್ ವ್ಯವಹಾರಗಳ ನಿಯಂತ್ರಣವನ್ನು ಪಡೆದರು. ಆದರೆ ಅವರ ಕಿರಿಯ ಸಹೋದರ ವಿದ್ಯುತ್ ಉತ್ಪಾದನೆ, ಹಣಕಾಸು ಸೇವೆಗಳು ಮತ್ತು ದೂರಸಂಪರ್ಕ ಸೇವೆಗಳಂತಹ ಹೊಸ ಕ್ಷೇತ್ರಗಳನ್ನು ಪಡೆದರು. ಅನಿಲ್- ಒಂದು ಕಾಲಕ್ಕೆ ಶತಕೋಟ್ಯಧಿಪತಿ – ಕಳೆದ ವರ್ಷ ಲಂಡನ್ ನ್ಯಾಯಾಲಯಕ್ಕೆ ತನ್ನ ನಿವ್ವಳ ಮೌಲ್ಯ “ಶೂನ್ಯ” ಎಂದು ಹೇಳಿದ್ದರು.

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಬಿಲಿಯನೇರ್‌ಗಳು ಕೆಲವು ದೊಡ್ಡ ಗಳಿಕೆದಾರರಾಗಿದ್ದಾರೆ. ಏಕೆಂದರೆ, ಈ ವರ್ಷ ಏಷ್ಯಾದ ಪ್ರಮುಖ ಷೇರು ಮಾರುಕಟ್ಟೆಯಾದ ಭಾರತದಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆಗಳ (ಐಪಿಒ) ಏರಿಕೆಯಿಂದ ಉತ್ತೇಜನ ಪಡೆಯುತ್ತದೆ. ಕಲ್ಲಿದ್ದಲು-ಶಕ್ತಿ ಮತ್ತು ನವೀಕರಿಸಬಹುದಾದ ಇಂಧನ ಸಮೂಹದ ಅದಾನಿ ಗ್ರೂಪ್‌ನ ಸಂಸ್ಥಾಪಕ ಗೌತಮ್ ಅದಾನಿ ಈ ವರ್ಷ ತಮ್ಮ ಸಂಪತ್ತಿಗೆ 39.5 ಬಿಲಿಯನ್ ಅಮೆರಿಕನ್ ಡಾಲರ್‌ಗಳನ್ನು ಸೇರಿಸಿದ್ದಾರೆ. ಆದರೆ ದೇಶದ ಮೂರನೇ ಶ್ರೀಮಂತ ವ್ಯಕ್ತಿ, ತಂತ್ರಜ್ಞಾನ ಉದ್ಯಮಿ ಅಜೀಮ್ ಪ್ರೇಮ್‌ಜಿ ಅವರ ಸಂಪತ್ತು 12.8 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: Top 10 Richest Indians: ಫೋರ್ಬ್ಸ್​ ಇಂಡಿಯಾ ಭಾರತದ ಅತಿ ಶ್ರೀಮಂತರ ಟಾಪ್​ 10 ಪಟ್ಟಿ ಇಲ್ಲಿದೆ; ಯಾರಿಗೆ ಯಾವ ಸ್ಥಾನ?

TV9 Kannada

Leave a comment

Your email address will not be published. Required fields are marked *