1000 ವರ್ಷಗಳಲ್ಲೇ ಚೀನಾದಲ್ಲಿ ದೊಡ್ಡ ಮಳೆ; ಭೀಕರ ಪ್ರವಾಹ, 12 ಮಂದಿ ಸಾವು

1000 ವರ್ಷಗಳಲ್ಲೇ ಚೀನಾದಲ್ಲಿ ದೊಡ್ಡ ಮಳೆ; ಭೀಕರ ಪ್ರವಾಹ, 12 ಮಂದಿ ಸಾವು

ಬೀಜಿಂಗ್​​: ಚೀನಾದ ಕೇಂದ್ರ ಭಾಗದಲ್ಲಿರುವ ಝೆಂಗ್ಜಾವುನಲ್ಲಿ ಸುರಿದ ಭಾರೀ ಪ್ರಮಾಣದ ಮಳೆ ಕಳೆದ ಸಾವಿರ ವರ್ಷಗಳ ಇತಿಹಾಸದಲ್ಲೇ ಅತೀ ದೊಡ್ಡ ಮಳೆ ಎಂದು ದಾಖಲಾಗಿದೆ. ಇದರ ಪರಿಣಾಮ ಪ್ರವಾಹ ಎದುರಾಗಿದ್ದು, ಸಬ್‌ವೇ ಒಂದಕ್ಕೆ ನೀರು ನುಗ್ಗಿ 12 ಮಂದಿ ಬಲಿಯಾಗಿದ್ದಾರೆ.

ಕಳೆದ 24 ಗಂಟೆಗಳಿಂದ ಎಡಬಿಡದೆ ಸುರಿಯುತ್ತಿರುವ ಈ ಮಳೆಯೂ ಝೆಂಗ್ಜಾವು ನಗರದ ಮೆಟ್ರೋ ರೈಲಿನೊಳಗೆ ನುಗ್ಗಿದೆ. ಇದರಿಂದ ಮೆಟ್ರೋ ರೈಲಿನಲ್ಲಿದ್ದ ಪ್ರಯಾಣಿಕರು ಹೊರಬರಲಾಗದೆ ಪರದಾಡಿದ್ದಾರೆ. ಸಬ್​​ವೇನಲ್ಲಿ ನಡೆದ ಈ ದುರಂತದಲ್ಲಿ 12 ಮಂದಿ ಮೃತಪಟ್ಟಿದ್ದು, ಐವರು ಪ್ರಯಾಣಿಕರು ತೀವ್ರ ಗಾಯಗೊಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಚೀನಾ ಸೈನಿಕರು ನೂರಾರು ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

ಸೈನಿಕರ ಕಾರ್ಯಕ್ಕೆ ಮೆಚ್ಚುಗೆ

ಇನ್ನು, ಸಬ್​​ವೇ ದುರಂತದಲ್ಲಿ ಸಿಲುಕಿದ್ದ ನೂರಾರು ಮಂದಿಯನ್ನು ಸೈನಿಕರು ರಕ್ಷಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿವೆ. ಮೆಟ್ರೋ ರೈಲಿನಿಂದ ಹೊರಬರಲಾಗದೆ ಪ್ರಯಾಣಿಕರು ಹೊದ್ದಾಡುತ್ತಿದ್ದಾಗ ನುಗ್ಗಿ ರಕ್ಷಿಸಿದ ಸೈನಿಕರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಅಪಾಯದ ಸ್ಥಿತಿಯಲ್ಲಿ ಲ್ಯೊಯಾಂಗ್​​ ಡ್ಯಾಂ

ಇನ್ನು, ಹೆನಾನ್ ಸೇರಿದಂತೆ 12ಕ್ಕೂ ಹೆಚ್ಚಿನ ನಗರಗಳಲ್ಲಿ ಮಳೆ ಅಬ್ಬರ ಜೋರಾಗಿದೆ. ಮನೆಗಳಿಗೆ ನೀರು ನುಗಿದ್ದ ಪರಿಣಾಮ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ವಿಮಾನ ಹಾರಾಟ ರದ್ದಾಗಿದೆ. ಮುಖ್ಯ ರಸ್ತೆಗಳು ಜಲಾವೃತಗೊಂಡಿವೆ. ಲ್ಯೊಯಾಂಗ್ ನಗರದ ಅಣೆಕಟ್ಟು ಭರ್ತಿಯಾಗಿ ಅಪಾಯದ ಸ್ಥಿತಿಯಲ್ಲಿದೆ. ಇದು ಯಾವಾಗ ಬೇಕಾದರೂ ಒಡೆಯಬಹುದು ಎಂದು ಸೇನೆ ಎಚ್ಚರಿಸಿದೆ.

ಸಾವಿರ ವರ್ಷಗಳಲ್ಲೇ ದೊಡ್ಡ ಮಳೆ

ಕಳೆದ ಸಾವಿರ ವರ್ಷಗಳಲ್ಲೇ ಇಷ್ಟು ಪ್ರಮಾಣದ ಮಳೆ ಸುರಿದಿರಲಿಲ್ಲ. ಪ್ರತಿ ವರ್ಷ ಸರಾಸರಿ ಮಳೆ ಆಗುತ್ತಿತ್ತು. ಆಗಲೂ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿತ್ತಾದರೂ ಇಷ್ಟು ಪ್ರಮಾಣದ ಅನಾಹುತ ಎಂದೂ ಸಂಭವಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

The post 1000 ವರ್ಷಗಳಲ್ಲೇ ಚೀನಾದಲ್ಲಿ ದೊಡ್ಡ ಮಳೆ; ಭೀಕರ ಪ್ರವಾಹ, 12 ಮಂದಿ ಸಾವು appeared first on News First Kannada.

Source: newsfirstlive.com

Source link