ಬೆಂಗಳೂರು: ವೇಗವಾಗಿ ಹರಡುತ್ತಿರುವ ಕೊರೊನಾ ಸೋಂಕನ್ನ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ರಾಜ್ಯದಲ್ಲಿ ಕ್ಲೋಸ್​ಡೌನ್ ಜಾರಿ ಮಾಡಲಾಗಿದೆ. ಆದ್ರೆ ಅದಕ್ಕೆ ಜನರು ಸಹಕಾರ ನೀಡದಿದ್ರೆ ಏನೇ ನಿಯಮ ತಂದ್ರೂ ಪ್ರಯೋಜನವಾಗಲ್ಲ.

ಕ್ಲೋಸ್​ಡೌನ್​ ಅನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸರೊಂದಿಗೆ ಸಹಕರಿಸಿ ಅಂತ ಕರ್ನಾಟಕ ಪೊಲೀಸ್​ ಮಹಾ ನಿರ್ದೇಶಕ ಪ್ರವೀಣ್ ಸೂದ್​ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಇಂದು ಟ್ವೀಟ್​ ಮಾಡಿರುವ ಸೂದ್, ಲಾಕ್​ಡೌನ್​ ಅನ್ನು ಗಂಭೀರವಾಗಿ ಪರಿಗಣಿಸೋಣ. ಇದು ನಮ್ಮ ಒಳ್ಳೆಯದಕ್ಕೆ ಹಾಗೂ ಬಹುಶಃ ಕೊನೇ ಉಪಾಯವಾಗಿ ತಂದಿರೋದು ಎಂದು ಹೇಳಿದ್ದಾರೆ.

ಸಣ್ಣಪುಟ್ಟ ಕಾರಣಗಳಿಗೆ ಅನಗತ್ಯವಾಗಿ ಓಡಾಡ್ತಿದ್ದವರಿಂದ 1000ಕ್ಕೂ ಅಧಿಕ ವಾಹನಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಿಮ್ಮ ಗಾಡಿ ಇಲ್ಲದೆ ನೀವು ಮನೆಗೆ ಹೋಗಲು ಬಯಸಲ್ಲ ಅಂತ ನನಗೆ ಗೊತ್ತು. ಪೊಲೀಸರೊಂದಿಗೆ ಸಹಕರಿಸಿ, ಮನೆಯಲ್ಲಿರಿ, ಕೊರೊನಾ ಚೈನ್ ಮುರಿಯಲು ನೆರವಾಗಿ ಅಂತ ಅವರು ಕೇಳಿಕೊಂಡಿದ್ದಾರೆ.

ನ್ಯೂಸ್​ಫಸ್ಟ್​ ಕಳಕಳಿ
ಕೊರೊನಾದಿಂದ ರಕ್ಷಿಸಿಕೊಳ್ಳಲು ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ. ಮಾಸ್ಕ್ ಧರಿಸಿ, ಸೋಶಿಯಲ್ ಡಿಸ್ಟನ್ಸ್ ಕಾಪಾಡಿ. ಕೈ ತೊಳೆಯುತ್ತಿರಿ. ಮತ್ತು ಮೇ 1 ರಿಂದ 18ರ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಅರ್ಹರಾಗಿದ್ದು ರೆಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ https://www.cowin.gov.in/  ಇಲ್ಲಿಗೆ ಭೇಟಿ ಕೊಟ್ಟು ನೊಂದಣಿ ಮಾಡಿಕೊಳ್ಳಿ. ಮತ್ತೊಂದು ಮುಖ್ಯ ಸಂಗತಿ ಗಮನಿಸಿ CoWin ಆ್ಯಪ್ ಸಾರ್ವಜನಿಕರಿಗೆ ಅಲ್ಲ. ಹೀಗಾಗಿ ಕಡ್ಡಾಯವಾಗಿ ವೆಬ್​ಸೈಟ್​ನಲ್ಲಿಯೇ ನೊಂದಾಯಿಸಿಕೊಳ್ಳಬೇಕು.

The post 1000 ವಾಹನಗಳು ಸೀಜ್: ಗಾಡಿ ಇಲ್ದೆ ಮನೆಗೆ ಹೋಗಬಯಸಲ್ಲ ಅಂದ್ರೆ ಹೇಳಿದ್ ಕೇಳಿ -ಡಿಜಿಪಿ appeared first on News First Kannada.

Source: newsfirstlive.com

Source link