105 ಪ್ರಕರಣಗಳಲ್ಲಿ ಅಪರಾಧ ಸಾಬೀತು.. ಕಿಲಾಡಿ ಸರಗಳ್ಳನಿಗೆ 3 ವರ್ಷ ಜೈಲು ಶಿಕ್ಷೆ

105 ಪ್ರಕರಣಗಳಲ್ಲಿ ಅಪರಾಧ ಸಾಬೀತು.. ಕಿಲಾಡಿ ಸರಗಳ್ಳನಿಗೆ 3 ವರ್ಷ ಜೈಲು ಶಿಕ್ಷೆ

ಬೆಂಗಳೂರು: ಬರೋಬ್ಬರಿ 105 ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖತರ್ನಾಕ್ ಕಿಲಾಡಿಗೆ 41ನೇ ಎಸಿಎಂಎಂ ನ್ಯಾಯಾಲಯ 3 ವರ್ಷ ಜೈಲು ಹಾಗೂ 10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಅಚ್ಚುತ್ ಕುಮಾರ್ ಗಣಿ ಅಲಿಯಾಸ್ ಕೋಳಿವಾಡ ಶಿಕ್ಷೆಗೆ ಗುರಿಯಾದ ಅಪರಾಧಿ. ವಿವಿಧ ಸರಗಳ್ಳತನ ಪ್ರಕರಣದಲ್ಲಿ ಈತ ಪ್ರಮುಖವಾಗಿ ಬೇಕಾಗಿದ್ದ. ಬೆಂಗಳೂರಲ್ಲಿ ಬೈಕ್ ಏರಿ ಹೊರಡುತ್ತಿದ್ದ ಈತ, ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಿದ್ದ.

ಪಲ್ಸರ್ ಬೈಕ್​ ಏರಿ ಬರುತ್ತಿದ್ದ ಅಸಾಮಿ, ಮಹಿಳೆಯರು, ವೃದ್ಧರನ್ನ ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚುತ್ತಿದ್ದ. ಒಮ್ಮೆ ಏಳೆಂಟು ಕೃತ್ಯಗಳನ್ನ ನಡೆಸಿ, ಬೇರೆ ರಾಜ್ಯಗಳಿಗೆ ಪಲಾಯನ ಮಾಡ್ತಿದ್ದ. ಬೇರೆ ರಾಜ್ಯಗಳಿಗೆ ಟ್ರಿಪ್ ಹೊಡೆದು, ಕೊಳ್ಳೆಹೊಡೆದ ದುಡ್ಡು ಖಾಲಿಯಾದಾಗ ಮತ್ತೆ ಬೆಂಗಳೂರಿಗೆ ಬರುತ್ತಿದ್ದ.

ಬಂಧನ ಹೇಗಾಯ್ತು?
ಜ್ಞಾನಭಾರತಿ ಪೊಲೀಸ್ ಠಾಣೆಯ ಪೇದೆಯೊಬ್ಬರು ಈತನನ್ನ ಬಂಧಿಸಿ ಕರೆತಂದಿದ್ದರು. ಇನ್ಸ್​​ಪೆಕ್ಟರ್ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ ಬರೋಬ್ಬರಿ 105 ಪ್ರಕರಣ ಬೆಳಕಿಗೆ ಬಂದಿದೆ. ವಿಜಯನಗರ, ಅನ್ನಪೂರ್ಣೇಶ್ವರಿ ನಗರ, ಜ್ಞಾನಭಾರತಿ ಸೇರಿ ಹಲವು ಠಾಣೆಗಳಲ್ಲಿ ಕೇಸ್ ಬುಕ್ ಆಗಿತ್ತು. ಸದ್ಯ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

The post 105 ಪ್ರಕರಣಗಳಲ್ಲಿ ಅಪರಾಧ ಸಾಬೀತು.. ಕಿಲಾಡಿ ಸರಗಳ್ಳನಿಗೆ 3 ವರ್ಷ ಜೈಲು ಶಿಕ್ಷೆ appeared first on News First Kannada.

Source: newsfirstlive.com

Source link