108MP ಕ್ಯಾಮೆರಾ ಫೋನ್ ಬೇಕೆ?: ಅತಿ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ ಎಂಐ 11X ಪ್ರೊ | Mi 11X Pro A 108MP Camera smartphone has received a price cut of Rs 9000 in Amazon India


ಇದೀಗ ಕ್ಯಾಮೆರಾ ಪ್ರಿಯರಿಗಾಗಿಯೇ ಶವೋಮಿ ಬಂಪರ್ ಆಫರ್ ಒಂದನ್ನು ನೀಡಿದೆ. ಈ ಹಿಂದೆ ಕ್ಯಾಮೆರಾ ಮಾತ್ರವಲ್ಲದೆ ತನ್ನೆಲ್ಲ ಫೀಚರ್​ಗಳಿಂದ ಭರ್ಜರಿ ಸದ್ದು ಮಾಡಿದ್ದ ಎಂಐ 11ಎಕ್ಸ್ ಪ್ರೊ (Mi 11X Pro) ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಆಕರ್ಷಕ ಡಿಸ್ಕೌಂಟ್ ಘೋಷಿಸಿದೆ.

108MP ಕ್ಯಾಮೆರಾ ಫೋನ್ ಬೇಕೆ?: ಅತಿ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ ಎಂಐ 11X ಪ್ರೊ

Mi 11X Pro

TV9kannada Web Team

| Edited By: Vinay Bhat

Aug 24, 2022 | 6:04 AM
ಶವೋಮಿ ಕಂಪನಿ 108 ಮೆಗಾಫಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್​ಫೋನ್​ಗಳನ್ನು ಒಂದರ ಹಿಂದೆ ಒಂದರಂತೆ ಬಿಡುಗಡೆ ಮಾಡುತ್ತಿದೆ. ಇದರ ನಡುವೆ 200 ಮೆಗಾಫಿಕ್ಸೆಲ್ ಕ್ಯಾಮೆರಾ ಫೋನಿನ ಕೆಲಸ ಕೂಡ ನಡೆಯುತ್ತಿದೆ. ಇದೀಗ ಕ್ಯಾಮೆರಾ ಪ್ರಿಯರಿಗಾಗಿಯೇ ಶವೋಮಿ ಬಂಪರ್ ಆಫರ್ ಒಂದನ್ನು ನೀಡಿದೆ. ಈ ಹಿಂದೆ ಕ್ಯಾಮೆರಾ ಮಾತ್ರವಲ್ಲದೆ ತನ್ನೆಲ್ಲ ಫೀಚರ್​ಗಳಿಂದ ಭರ್ಜರಿ ಸದ್ದು ಮಾಡಿದ್ದ ಎಂಐ 11ಎಕ್ಸ್ ಪ್ರೊ (Mi 11X Pro) ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಆಕರ್ಷಕ ಡಿಸ್ಕೌಂಟ್ ಘೋಷಿಸಿದೆ. 108 ಮೆಗಾಫಿಕ್ಸೆಲ್ ಕ್ಯಾಮೆರಾ, ಭರ್ಜರಿ ಬ್ಯಾಟರಿ, ಅತ್ಯುತ್ತಮ ಪ್ರೊಸೆಸರ್ ಸೇರಿದಂತೆ ಅನೇಕ ಫೀಚರ್ಸ್​ನಿಂದ ಕೂಡಿರುವ ಈ ಸ್ಮಾರ್ಟ್​ಫೋನ್ (Smartphone) ಮೇಲೆ ಬರೋಬ್ಬರಿ 13,000 ರೂ. ವರೆಗೆ ರಿಯಾಯಿತಿ ಪಡೆದುಕೊಳ್ಳುವ ಅವಕಾಶ ನೀಡಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಈ ಆಫರ್​ ಅನ್ನು ನೀವು ಪಡೆಯಬಹುದು.

TV9 Kannada


Leave a Reply

Your email address will not be published.