ರೇಬಿಸ್‌ ರೋಗ ಹೆಚ್ಚಾಗಿರುವ ವಿಶ್ವದ ನೂರಕ್ಕೂ ಹೆಚ್ಚು ರಾಷ್ಟ್ರಗಳಿಂದ ನಾಯಿಗಳನ್ನು ಅಮೆರಿಕಕ್ಕೆ ಆಮದು ಮಾಡಿಕೊಳ್ಳಬಾರದು ಅಂತ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ. ಒಂದು ವರ್ಷಗಳ ಕಾಲ 113 ರಾಷ್ಟ್ರಗಳಿಂದ ನಾಯಿಗಳ ಆಮದಿಗೆ ನಿರ್ಬಂಧ ವಿಧಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಕೊರೊನಾ ಸಾಂಕ್ರಾಮಿಕ ಶುರುವಾದ ಬಳಿಕ ಅಮೆರಿಕಾಗೆ ಹೊರಗಿನ ದೇಶಗಳಿಂದ ನಾಯಿಮರಿಗಳನ್ನ ಆಮದು ಮಾಡಿಕೊಳ್ಳುತ್ತಿರೋದು ಹೆಚ್ಚಾಗಿದೆ. ಈ ವೇಳೆ ನಕಲಿ ರೇಬಿಸ್​ ಸರ್ಟಿಫಿಕೇಟ್​​ನೊಂದಿಗೆ ನಾಯಿಗಳನ್ನ ದೇಶಕ್ಕೆ ತರುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ. ಕಳೆದ ಎರಡು ವರ್ಷಕ್ಕೆ ಹೋಲಿಸಿದ್ರೆ ನಕಲಿ ಸರ್ಟಿಫಿಕೇಟ್​​ನೊಂದಿಗೆ ಬರುತ್ತಿರುವ ನಾಯಿಗಳ ಪ್ರಮಾಣ ಶೇಕಡ 52ರಷ್ಟು ಹೆಚ್ಚಿದೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಡಾ. ಎಮಿಲಿ ಹೇಳಿದ್ದಾರೆ.

ಹೀಗಾಗಿ ರೇಬೀಸ್ ತಡೆಯುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಅಂತ ಅಮೆರಿಕಾದ ಆರೋಗ್ಯ ಸಚಿವಾಲಯ ತಿಳಿಸಿದೆ.

The post 113 ರಾಷ್ಟ್ರಗಳಿಂದ ಶ್ವಾನಗಳ ಆಮದಿಗೆ ಅಮೆರಿಕಾ ನಿರ್ಬಂಧ appeared first on News First Kannada.

Source: newsfirstlive.com

Source link