ಯಾದಗಿರಿ: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸರ್ವೇಯರ್ ರೆಡ್ ಹ್ಯಾಂಡ್​ ಆಗಿ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಜಿಲ್ಲೆಯ ಹಣಸಗಿ ಪಟ್ಟಣದಲ್ಲಿ ಘಟನೆ ನಡೆದಿದೆ.

ಹುಣಸಗಿ ಸರ್ವೇಯರ್ ರವಿಕುಮಾರ್ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ. ಈ ಅಧಿಕಾರಿ 12 ಎಕರೆ ಜಮೀನೊಂದರ ಸರ್ವೇ ಮಾಡಿ 4 ಎಕರೆ ಪ್ರತ್ಯೇಕ ಪಹಣಿ ಮಾಡಿ ಕೊಡಲು 2.5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಹೀಗಾಗಿ ಭೃಷ್ಟ ಅಧಿಕಾರಿ ರವಿಕುಮಾರ್​ನನ್ನ ವಶಕ್ಕೆ ಪಡೆದು ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮಹಾದೇವಪ್ಪ ಅವರಿಂದ ದೂರು ಪಡೆದು ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಎಸಿಬಿ ಎಸ್​ಪಿ ಮಹೇಶ್ ಮೇಘಣ್ಣವರ್ ಮತ್ತು ಯಾದಗಿರಿ ಡಿವೈಎಸ್​ಪಿ ಉಮಾ ಶಂಕರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

The post 12 ಎಕರೆ ಸರ್ವೇ ಮಾಡಿ 4 ಎಕರೆ ಪಹಣಿ ನೀಡಲು ಲಂಚ ಕೇಳಿದ್ದ ಅಧಿಕಾರಿ ಎಸಿಬಿ ಬಲೆಗೆ appeared first on News First Kannada.

Source: newsfirstlive.com

Source link