ಮೈಸೂರು: ದೂರು ಹೇಳುವುದಕ್ಕೆ ಒಂದು ಕ್ರಮ, ವ್ಯವಸ್ಥೆ ಇರುತ್ತದೆ ಎಂದು ಮೈಸೂರು ಮಹಾ ನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್ ಮಾಡಿರುವ ಆರೋಪಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿರುಗೇಟು ನೀಡಿದ್ದಾರೆ.

ಮೈಸೂರು ಮಹಾ ನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್ ತಮ್ಮ ಮೇಲೆ ಮಾಡಿರುವ ಆರೋಪಗಳ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೈಸೂರಿನಲ್ಲಿ ಪಬ್ಲಿಕ್ ಟಿವಿ ಗೆ ಪ್ರತಿಕ್ರಿಯಿಸಿದ್ದಾರೆ. ದೂರು ಹೇಳುವುದಕ್ಕೆ ಒಂದು ಕ್ರಮ, ವ್ಯವಸ್ಥೆ ಇರುತ್ತೆ. ಅದು ಪಾಲನೆ ಆಗಬೇಕು. ನಾನು ಸರಕಾರದ ಮುಖ್ಯ ಕಾರ್ಯದರ್ಶಿಗೆ ಈ ಎಲ್ಲಾ ವಿಚಾರದ ಬಗ್ಗೆ ಖುದ್ದಾಗಿ ವಿವರ ನೀಡುತ್ತೇನೆ ಎಂದು ರೋಹಿಣಿ ಸಿಂಧೂರಿ ಹೇಳಿದ್ದಾರೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಮಕ್ಕಳು ಪರೀಕ್ಷೆ ಇಲ್ಲದೇ ಪಾಸ್: ಸುರೇಶ್ ಕುಮಾರ್

ರೋಹಿಣಿ ಸಿಂಧೂರಿ ಹೇಳಿದ್ದೇನು?
ಇವತ್ತು ಮುಖ್ಯ ಕಾರ್ಯದರ್ಶಿಗಳು ಮೈಸೂರಿಗೆ ಬರುತ್ತಿದ್ದಾರೆ ಎಲ್ಲ ವಿಚಾರ ಅವರ ಗಮನಕ್ಕೆ ತರುತ್ತೇವೆ. ಪ್ರತಿ ಜಿಲ್ಲೆಯಲ್ಲಿ ಸಿಎಸ್‍ಆರ್ ಫಂಡ್ ಇರಲಿದೆ. ಶೇ. 30 ರಷ್ಟು ಫಂಡ್ ರಿಸರ್ವ್ ಫಂಡ್ ಇಡಬೇಕು. ಈಗ ವಾರದ ಹಿಂದೆ ವೈದ್ಯರ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮ ಇರುವುದರಿಂದ ಇದಕ್ಕೆ ನಾವು ಸಿಎಸ್‍ಆರ್ ಫಂಡ್ ಪಡೆದುಕೊಳ್ಳಬೇಕಿದೆ. ಸಿಎಸ್‍ಆರ್ ಫಂಡ್ ಏನಾಗಿದೆ ಎಂದು ಪಾಲಿಕೆ ಆಯುಕ್ತರಿಗೆ ಕೇಳಿದ್ದೇವೆ. ಇದಕ್ಕೆ ಅವರು ಎಲ್ಲವೂ ಖರ್ಚಾಗಿದೆ ಎಂದಿದ್ದಾರೆ. ಅದು ಹೇಗೆ ಖರ್ಚಾಗಿದೆ ಮಾಹಿತಿ ಕೊಡಿ ಎಂದಿ ಕೇಳಿದ್ದೇವೆ ಅಷ್ಟೇ. 12 ಕೋಟಿ ಖರ್ಚಾಗಿದೆ ಅಂದ್ರೆ ಎಲ್ಲಿ ಖರ್ಚಾಗಿದೆ ಮಾಹಿತಿ ಕೊಡಿ ಎಂದಿದ್ದೇವೆ. ನಿಮಗೆ ನಿಮ್ಮ ಮೇಲಿನ ಅಧಿಕಾರಿ ಮೇಲೆ ಬೇಸರ ಇದ್ದರೆ ಹೇಳಬೇಕು. ಅದನ್ನ ಬಿಟ್ಟು ಮಾಧ್ಯಮದ ಮುಂದೆ ಹೇಳೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: CSR ಫಂಡ್ ಲೆಕ್ಕ ನೀಡಿಲ್ಲ, ಕೋವಿಡ್ ಕೇರ್ ಸೆಂಟರ್ ತೆರೆದಿಲ್ಲ- ಶಿಲ್ಪಾ ನಾಗ್ ವಿರುದ್ಧ ಡಿಸಿ ರೋಹಿಣಿ ಸಿಂಧೂರಿ ಪ್ರತ್ಯಾರೋಪ

ಪ್ರತಿಯೊಂದಕ್ಕು ಒಂದು ಸಿಸ್ಟಮ್ ಇರುತ್ತೆ. ಆ ಸಿಸ್ಟಮ್ ಮೂಲಕವೇ ಹೋಗಬೇಕು ಅದನ್ನ ಮೀರಬಾರದು. ಅವರು ಬಂದಾಗಿನಿಂದ ಸಮಸ್ಯೆ ಹೇಳಿಕೊಂಡಿಲ್ಲ. ಇದೀಗಾ ಒಂದು ವಾರ ಹತ್ತು ದಿನದಿಂದ ಸಮಸ್ಯೆ ಇದೆ ಅಂತಾರೆ. ಈಗ ನಾನು ಈ ಬಗ್ಗೆ ಉತ್ತರ ಕೊಡುವ ಜವಾಬ್ದಾರಿ ಅಲ್ಲ. ನಾವೇನಿದ್ರು ಸರ್ಕಾರಕ್ಕೆ ವರದಿ ಕೊಡುತ್ತೇವೆ ಅಷ್ಟೇ. ಈ ಬಗ್ಗೆ ಕೇವಲ ಮಾಧ್ಯಮ ಹೇಳಿಕೆ ಕೊಟ್ಟಿದ್ದೇವೆ. ಈಗ ಎಲ್ಲರಿಗೂ ಒತ್ತಡ ಇದೆ ಇಡೀ ಸಿಸ್ಟಮ್ ಈಗ ಒತ್ತಡದಲ್ಲಿ ಕೆಲಸ ಮಾಡುತ್ತಿದೆ. ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರು ಎಲ್ಲರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಸರಿಯಾದ ಮಾಹಿತಿ ಕೊಡಬೇಕು ಎಂಬುದು ನಮ್ಮ ಗುರಿ.  ಇದನ್ನೂ ಓದಿ: ರೋಹಿಣಿ ಸಿಂಧೂರಿ ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ: ರಾಜೀನಾಮೆ ನೀಡಿ ಕಣ್ಣೀರಿಟ್ಟ ಶಿಲ್ಪಾನಾಗ್

ಪಾಲಿಕೆ ಆಯುಕ್ತರು ವಾರ್ಡ್ ವೈಸ್ ಕೊರೊನಾ ಅಂಕಿ ಅಂಶ ಕೊಡಬೇಕು. ವಾರ್ಡ್‍ವೈಸ್ ಡಿಟೈಲ್, ಪಂಚಾಯತ್ ವೈಸ್ ಡಿಟೈಲ್ ಕೊಡಬೇಕು. ಯಾವ ಜಿಲ್ಲೆಯಲ್ಲೂ ಮಾಡದ ಕೆಲಸ ಮೈಸೂರು ಜಿಲ್ಲೆಯಲ್ಲಿ ಆಗುತ್ತಿದೆ. ನಾವು ಸರ್ಕಾರಕ್ಕೆ ಕೊಡುವಂತ ಕೋವಿಡ್ ರಿಪೋರ್ಟ್‍ನಲ್ಲಿ ತಪ್ಪು ಆಗಬಾರದು. ನಿಮ್ಮ ವಾರ್ಡ್‍ನಲ್ಲಿ ಎಷ್ಟು ಕೇಸ್ ಇದೆ ಎಂಬುದು ಪಾಲಿಕೆ ಆಯುಕ್ತರಿಗೆ ಗೊತ್ತಿರಬೇಕು. ಇದನ್ನೂ ಓದಿ: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು

ಅಧಿಕಾರಿಗಳಿಗೆ ಒಂದು ಫೋರಂ ಇರುತ್ತೆ. ಆ ಅಧಿಕಾರದನ್ವಯ ನಾನು ಹೇಳಿದ್ದೇನೆ ಅಷ್ಟೇ. ನಮ್ಮ ಉದ್ದೇಶ ಇಷ್ಟೇ ಜುಲೈ ಫಸ್ಟ್‍ಗೆ ಕೋವಿಡ್ ಮುಕ್ತ ಮೈಸೂರು ಮಾಡಬೇಕು. ನಾವು ಜನರಿಗೆ ಸರಿಯಾದ ಅಂಕಿ ಅಂಶ ಕೊಡಬೇಕು. ಒಂದು ವಾರ್ಡ್‍ನಲ್ಲಿ 400 ಕೇಸ್ ಇದ್ದು ನಾಳೆ 40 ಕೇಸ್ ಬಂದರೆ ಅದು ಸರಿಯಾಗಿ ಹೊಂದಾಣಿಕೆ ಆಗಲ್ಲ. ಎಲ್ಲರು ಮಾಹಿತಿ ಕೇಳುವಾಗ ವಾರ ರೂಂ, ಪಂಚಾಯತ್‍ನಿಂದ ಪಡೆಯಬೇಕು. ಇದರಲ್ಲಿ ವ್ಯತ್ಯಾಸ ಬರಬಾರದು ಅದು ಅಧಿಕೃತ ಡಾಕ್ಯುಮೆಂಟ್ ಸರಿಯಾಗಿ ಇರಬೇಕೆಂಬುದು ನಮ್ಮ ಉದ್ದೇಶ ಎಂದು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಆರೋಪಕ್ಕೆ ಡಿಸಿ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಮೇಡಂ ರಾಜೀನಾಮೆ ನೀಡಬೇಡಿ ಎಂದು ಶಿಲ್ಪಾ ನಾಗ್ ಕಾಲು ಹಿಡಿದ ಭದ್ರತಾ ಸಿಬ್ಬಂದಿ

ಹಿನ್ನೆಲೆ:
ನಿನ್ನೆ ತುರ್ತು ಸುದ್ದಿಗೋಷ್ಠಿ ನಡೆಸಿದ ಶಿಲ್ಪಾನಾಗ್, ಜಿಲ್ಲಾಧಿಕಾರಿಗಳು ಸಿಟಿಗೆ ಒಂದು ಮಾನದಂಡ, ಗ್ರಾಮಾಂತರಕ್ಕೆ ಒಂದು ಮಾನದಂಡ ಮಾಡಿದ್ದಾರೆ. ಸಿಟಿಯಲ್ಲಿ ಕಮಿಷನರ್ ವಿಫಲವಾಗಿದ್ದಾರೆ ಎಂದು ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತದಿಂದ ನಮಗೆ ಯಾವುದೇ ಸಹಕಾರ ದೊರೆತಿಲ್ಲ. ಸಿಎಸ್‍ಆರ್ ಫಂಡ್‍ನಿಂದ ನಾವು ಕೆಲಸ ಮಾಡುತ್ತಿದ್ದೇವೆ. ಎಲ್ಲರಿಗೂ ಒಂದು ಸಹನೆ ಇರುತ್ತೆ, ಸಹನೆ ಒಡೆದಾಗ ಏನು ಮಾಡಬೇಕು. ಒಬ್ಬರು ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ: ಕರ್ನಾಟಕದಲ್ಲಿ ಎಸ್‍ಎಲ್‍ಎಲ್‍ಸಿ ಪರೀಕ್ಷೆ ನಡೆಯುತ್ತೆ, ಎಲ್ಲರೂ ಪಾಸ್

ನನ್ನ ರಾಜೀನಾಮೆಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಿರುಕುಳ ಕಾರಣ ಎಂದು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರು ರಾಜೀನಾಮೆ ನೀಡಿದ್ದು, ಈ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಇದೀಗ ಸ್ವತಃ ರೋಹಿಣಿ ಸಿಂಧೂರಿ ಅವರು ಪ್ರತಿಕ್ರಿಯಿಸಿದ್ದು, ಶಿಲ್ಪಾ ನಾಗ್ ಅವರು ಸುಳ್ಳು ಹೇಳಿದ್ದಾರೆ, ಆರೋಪಗಳು ನಿರಾಧಾರ ಎಂದು ಹೇಳಿದ್ದರು.

The post 12 ಕೋಟಿ ಸಿಎಸ್‍ಆರ್ ಫಂಡ್ ಖರ್ಚಿನ ಮಾಹಿತಿ ಕೇಳಿದ್ದೆ ಅಷ್ಟೇ – ರೋಹಿಣಿ ಸಿಂಧೂರಿ appeared first on Public TV.

Source: publictv.in

Source link