12 ವರ್ಷಗಳ ಕಾಲ ತಲೆ ಮರೆಸಿಕೊಂಡು ಆರಾಮಾಗಿದ್ದ ಕೊಲೆ ಆರೋಪಿ ನೂತನ ತಂತ್ರಜ್ಞಾನ M.CCTNS ಆ್ಯಪ್​ನಿಂದ ಅರೆಸ್ಟ್ – new M.CCTNS app finds murder accused who was absconded from 12 years


ಎಂ-ಸಿಸಿಟಿಎನ್‌ಎಸ್ (M.CCTNS) ಮೊಬೈಲ್ ಆ್ಯಪ್ ಮೂಲಕ ಬೆರಳು ಮುದ್ರೆ ಪರಿಶೀಲನೆಗಾಗಿ ಬಳಸುವ ಚಿಕ್ಕ ಬೆರಳು ಮುದ್ರೆ ಡಿವೈಸ್‌ ನಿಂದ ಕೊಲೆ ಆರೋಪಿ ಅರೆಸ್ಟ್ ಆಗಿದ್ದಾನೆ.

12 ವರ್ಷಗಳ ಕಾಲ ತಲೆ ಮರೆಸಿಕೊಂಡು ಆರಾಮಾಗಿದ್ದ ಕೊಲೆ ಆರೋಪಿ ನೂತನ ತಂತ್ರಜ್ಞಾನ M.CCTNS ಆ್ಯಪ್​ನಿಂದ ಅರೆಸ್ಟ್

ನೂತನ ತಂತ್ರಜ್ಞಾನ M.CCTNS ಆ್ಯಪ್​ನಿಂದ ಕೊಲೆ ಆರೋಪಿ ಅರೆಸ್ಟ್

ಬೆಂಗಳೂರು: ನಗರದಲ್ಲಿ ಸುಮಾರು 12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಕೊಲೆ ಆರೋಪಿ ನೂತನ ತಂತ್ರಜ್ಞಾನ M.CCTNS ಆ್ಯಪ್ ಮುಖಾಂತರ ಅರೆಸ್ಟ್ ಆಗಿದ್ದಾನೆ. ಇತ್ತೀಚೆಗೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಎಂ-ಸಿಸಿಟಿಎನ್‌ಎಸ್ (M.CCTNS) ಎಂಬ ಮೊಬೈಲ್ ಆ್ಯಪ್ ಮೂಲಕ ಬೆರಳು ಮುದ್ರೆ ಪರಿಶೀಲನೆಗಾಗಿ ಚಿಕ್ಕ ಬೆರಳು ಮುದ್ರೆ ಡಿವೈಸ್‌ ಅನ್ನು ವಿತರಣೆ ಮಾಡಲಾಗಿದೆ. ಈ ಡಿವೈಸನ್ನು ಉಪಯೋಗಿಸಿಕೊಂಡು ಮೊಬೈಲ್ ಅಪ್ಲಿಕೇಷನ್‌ ಮುಖಾಂತರ ಅನುಮಾನಾಸ್ಪದ ವ್ಯಕ್ತಿಗಳ ಬೆರಳು ಮುದ್ರೆಯನ್ನು ಪರಿಶೀಲಿಸಿದರೆ ಆ ವ್ಯಕ್ತಿಯು ಈ ಹಿಂದೆ ಯಾವುದಾದರೂ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಮಾಹಿತಿ ಸಿಗುತ್ತದೆ.

ಇದರಲ್ಲಿ ಪ್ರತಿ ಆರೋಪಿಯ ಫಿಂಗರ್ ಪ್ರಿಂಟ್ ಜೊತೆಗೆ ಆತನ ಮಾಹಿತಿ ಇರುತ್ತೆ. ಇದೇ ಆ್ಯಪ್ ಮುಖಾಂತರ ಯಶವಂತಪುರ ಪೊಲೀಸ್ ಠಾಣೆಯ ಪಿಎಸ್​ಐ ರಾಜು ಅವರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಅನುಮಾನ ಬಂದು ಆತನ ಫಿಂಗರ್ ಪ್ರಿಂಟ್ ಕಲೆಕ್ಟ್ ಮಾಡಿ ಮೊಬೈಲ್ ಆಫ್ ಮೂಲಕ ಡಿವೈಸ್ ಬಳಸಿಕೊಂಡು ಆ ವ್ಯಕ್ತಿಯ ಬೆರಳು ಮುದೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆ ವ್ಯಕ್ತಿ ಕೊಲೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಹಿಂದೆ ನಡೆದ ಕೊಲೆ ಪ್ರಕರಣದ ಆರೋಪಿಯ ಫಿಂಗರ್ ಪ್ರಿಂಟ್​ಗೆ ಈ ವ್ಯಕ್ತಿಯ ಫಿಂಗರ್ ಪ್ರಿಂಟ್ ಮ್ಯಾಚ್ ಆಗಿದೆ.

2005 ರಲ್ಲಿ ಶಂಕರಪ್ಪ ಕೊಲೆ ಮಾಡಿದ್ದ ಆರೋಪಿ ರಮೇಶ್​ನನ್ನು ಅಂದೇ ತಾವರೆಕೆರೆ ಪೊಲೀಸರು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಳಿಕ ಬಿಡುಗಡೆ ಆಗಿ 2010 ರಿಂದಲೂ ಕೋರ್ಟ್ ಗೆ ಹಾಜರಾಗದೆ ಆರೋಪಿ ರಮೇಶ್ ತಲೆ ಮರೆಸಿಕೊಂಡಿದ್ದ. ಆದ್ರೆ ಮೊನ್ನೆ ಯಶವಂತಪುರದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ರಮೇಶ್​ನನ್ನು ಪೊಲೀಸರು M.CCTNS ಆ್ಯಪ್ ಮುಖಾಂತರ ಅರೆಸ್ಟ್ ಮಾಡಿದ್ದಾರೆ.

TV9 Kannada


Leave a Reply

Your email address will not be published.