12 ವರ್ಷದ ಬಳಿಕ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ; ಬೃಹತ್ ಕಾರ್ಯಕ್ರಮಕ್ಕೆ ಸುರ್ಜೇವಾಲಾ ಚಾಲನೆ | Congress membership registration campaign is underway after 12 years today in Bengaluru and Randeep Singh Surjewala inaugurated the programme


12 ವರ್ಷದ ಬಳಿಕ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ; ಬೃಹತ್ ಕಾರ್ಯಕ್ರಮಕ್ಕೆ ಸುರ್ಜೇವಾಲಾ ಚಾಲನೆ

ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದ ಸುರ್ಜೇವಾಲಾ

ಬೆಂಗಳೂರು: ಇಂದು (ನ.14) ಅರಮನೆ ಮೈದಾನದಲ್ಲಿ 12 ವರ್ಷದ ಬಳಿಕ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ನಡೆಯಿತು. ಅಭಿಯಾನದ ವೇಳೆ ಜವಹಾರ್ ಲಾಲ್ ನೆಹರು ಜನ್ಮದಿನಾಚರಣೆ ಆಚರಿಸಲಾಯಿತು. ಬೃಹತ್ ಕಾರ್ಯಕ್ರಮಕ್ಕೆ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಚಾಲನೆ ನೀಡಿ ಮಾತನಾಡಿದರು. ನೆಹರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಜೈಲಿಗೆ ಹೋಗಿದ್ದರು ಎಂದು ನುಡಿದರು.

ನಮ್ಮ ಕಾನೂನಿನ ಮೇಲೆ ದಾಳಿ ಮಾಡಲಾಗಿದೆ. ಕಷ್ಟಗಳು ಬಂದರೆ ಅದು ಮೊದಲು ತಟ್ಟುವುದು ಬಡವರಿಗೆ. ಕಾಂಗ್ರೆಸ್ ಪಕ್ಷ ಯುವ ಜನತೆಯ ಯುವಶಕ್ತಿಯಾಗಿದೆ. ಅನ್ಯಾಯ ತಡೆಯಲು ದೇಶಕ್ಕೆ ಕಾಂಗ್ರೆಸ್ ಅವಶ್ಯಕತೆ ಇದೆ. ಎಲ್ಲ ವರ್ಗದವರಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್ ಅಗತ್ಯ. ಬಲಿಷ್ಠ ಭಾರತ ನಿರ್ಮಾಣಕ್ಕೆ ಕಾಂಗ್ರೆಸ್ ಅವಶ್ಯಕತೆ ಇದೆ. ಭಾರತ ದೇಶ ಎಲ್ಲ ವರ್ಗ, ಜಾತಿ, ಧರ್ಮದಿಂದ ಕೂಡಿದೆ ಎಂದು ರಣದೀಪ್ ಸುರ್ಜೇವಾಲ ಹೇಳಿಕೆ ನೀಡಿದರು.

ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಸೋನಿಯಾ, ರಾಹುಲ್ ದೇಶದ ಪ್ರಧಾನಿ ಆಗಬಹುದಿತ್ತು. ಆದರೆ ದೇಶ ಉಳಿಯಲು ಆರ್ಥಿಕ ತಜ್ಞರು ಬೇಕೆಂದು ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದ್ರು. ಇಂತಹ ತ್ಯಾಗ ಮಾಡಿದವರು ಸೋನಿಯಾ ಗಾಂಧಿ. ದೇಶವನ್ನು ಬದಲಾವಣೆ ಮಾಡಿರುವುದು ಕಾಂಗ್ರೆಸ್ ಪಕ್ಷ ಎಂದು ಹೇಳಿದರು. 50 ಲಕ್ಷ ಸದಸ್ಯತ್ವ ಅಭಿಯಾನ ಮಾಡುವಂತೆ ಕರೆ ನೀಡಿದ ಡಿಕೆಶಿ, ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಕಬ್ಬಿಣ ಆಗಬೇಕು. ಕಬ್ಬಿಣದಲ್ಲಿ ಕತ್ತರಿ, ಸೂಜಿ ಎರಡನ್ನೂ ಮಾಡಬಹುದು. ಬಿಜೆಪಿ ರಾಜ್ಯ ಕತ್ತರಿಸ್ತಿದ್ರೆ, ನೀವು ಸೂಜಿಯಾಗಿ ಹೊಲಿಯಿರಿ ಎಂದು ಹೇಳಿದರು.

ಇದನ್ನೂ ಓದಿ

ಬಾಕ್ಸ್​​ ಆಫೀಸ್​ನಲ್ಲಿ ಲಾಟರಿ ಹೊಡೆದ ಅಕ್ಷಯ್​ ಕುಮಾರ್​; ಗಳಿಕೆಯಲ್ಲಿ ‘ಸೂರ್ಯವಂಶಿ’ ಕಮಾಲ್​

ಉತ್ತರ ಕನ್ನಡ: ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿದೆ ಐಎನ್ಎಸ್ ಚಾಪೆಲ್ ಯುದ್ಧನೌಕೆ; ದುರಸ್ತಿಗೆ ಸ್ಥಳೀಯರಿಂದ ಮನವಿ

TV9 Kannada


Leave a Reply

Your email address will not be published.