ಹುಬ್ಬಳ್ಳಿ: ಡಿಎಪಿ ಗೊಬ್ಬರವನ್ನು 1413,25 ರೂಪಾಯಿ ಬದಲಿಗೆ 1200 ರೂಪಾಯಿಗೆ ರೈತರಿಗೆ ಒದಗಿಸಿ, ಹೆಚ್ಚುವರಿ ಹಣವನ್ನು ಸರ್ಕಾರದಿಂದ ಮಾರಾಟ ಮಂಡಳಿ ಬರಿಸುತ್ತದೆ.

ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಮನವಿ ಮೇರೆಗೆ ಸಿಎಂ ಬಿಎಸ್ ಯಡಿಯೂರಪ್ಪ, ಡಿಎಪಿ ಗೊಬ್ಬರವನ್ನು 1413,25 ರೂಪಾಯಿ ಬದಲಿಗೆ 1200 ರೂಪಾಯಿಗೆ ರೈತರಿಗೆ ಒದಗಿಸಿ, ಹೆಚ್ಚುವರಿ ಹಣವನ್ನು ಸರ್ಕಾರದಿಂದ ಮಾರಾಟ ಮಂಡಳಿಗೆ ಭರಿಸಲು ಆದೇಶಿಸಿದ್ದಾರೆ. ರಾಜ್ಯದಲ್ಲಿ ಈ ಹಿಂದಿನ ದರದಲ್ಲಿ ಖರೀದಿಸಿದ ಡಿಎಪಿ ರಸಗೊಬ್ಬರ ಒಟ್ಟು, 46474,15 ಮೆಟ್ರಿಕ್ ಟನ್ ಸಂಗ್ರಹವಿದೆ. ಕ್ಟಿಂಟಲ್ ಗೊಬ್ಬರಕ್ಕೆ 1413,25 ರೂಪಾಯಿ ರೈತರಿಗೆ ಹೊರೆಯಾಗಲಿದೆ. ಆದರೆ ಕೇಂದ್ರ ಸರ್ಕಾರ ಪ್ರಕಟಿಸಿದ ಸಬ್ಸಿಡಿಯಿಂದ ಡಿಪಿಎ ದರ ಪ್ರಸಕ್ತ ಮಾರುಕಟ್ಟೆಯಲ್ಲಿ 1200 ರೂಪಾಯಿಗೆ ದೊರೆಯುತ್ತಿದೆ.

ಹೀಗಾಗಿ ಹಲವು ಜಿಲ್ಲೆಗಳಲ್ಲಿ ಗೊಬ್ಬರ ದಾಸ್ತಾನು ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಎಲ್ಲ ರೈತರಿಗೂ ರಸಗೊಬ್ಬರ ಒಂದೇ ದರದಲ್ಲಿ ಸಿಗುತ್ತಿರಲಿಲ್ಲ. ಎಲ್ಲ ಜಿಲ್ಲೆಗಳ ಉಗ್ರಾಣಗಳಲ್ಲಿರುವ ಡಿಎಪಿ ದರವನ್ನ ತಕ್ಷಣ ಕಡಿಮೆ ದರಕ್ಕೆ ದೊರೆಯುವಂತೆ ಮಾಡಲು ರಾಜ್ಯ ಸರ್ಕಾರ ಮಾರಾಟ ಮಂಡಳಿಗೆ 213,25 ರೂಪಾಯಿ ಮೊತ್ತವನ್ನ ಪಾವತಿಸುವಂತೆ ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ, ಸಿಎಂ ಬಿಎಸ್‍ವೈಗೆ ಫೋನ್ ಮೂಲಕ ಮನವಿ ಮಾಡಿದ್ದರು.

ಪ್ರಲ್ಲಾದ್ ಜೋಶಿ ಮನವಿ ಮೇರೆಗೆ ಸಿಎಂ ಬಿಎಸ್‍ವೈ ತಕ್ಷಣವೇ ಡಿಎಪಿ ಗೊಬ್ಬರದ ಬೆಲೆಯನ್ನ 1413,25 ರೂಪಾಯಿ ಬದಲಿಗೆ 1200 ರೂಪಾಯಿಗೆ ಸಿಗುವಂತೆ ಆದೇಶ ಮಾಡಿದ್ದು, ಹೆಚ್ಚುವರಿ ಹಣವನ್ನು ಸರ್ಕಾರದಿಂದ ಮಾರಾಟ ಮಂಡಳಿಗೆ ಭರಿಸುವಂತೆ ಆದೇಶ ಮಾಡಿದ್ದಾರೆ. ತಮ್ಮ ಮನವಿಗೆ ಸ್ಪಂದಿಸಿ ಡಿಎಪಿ ರಸಗೊಬ್ಬರದ ಬೆಲೆಯನ್ನ ಕಡಿತಗೊಳಿಸಿದಕ್ಕೆ ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ. ಸಿಎಂ ಬಿಎಸ್ ವೈ ಹಾಗೂ ಕೃಷಿ ಸಚಿವ ಬಿಸಿ ಪಾಟೀಲಗೆ ಅಭಿನಂದನೆ ಸಲ್ಲಿಸಿದ್ದಾರೆ.

The post 1200 ರೂಪಾಯಿಗೆ ಡಿಎಪಿ ಗೊಬ್ಬರ – ಜೋಶಿ ಮನವಿಗೆ ಸ್ಪಂದಿಸಿದ ಸರ್ಕಾರ appeared first on Public TV.

Source: publictv.in

Source link