1,25,000 ಡೋಸ್​ ರೆಮ್ಡೆಸಿವಿರ್ ಹೊತ್ತು, ಭಾರತಕ್ಕೆ ಬಂದಿಳಿದ ಅಮೆರಿಕಾದ 4ನೇ ವಿಮಾನ

1,25,000 ಡೋಸ್​ ರೆಮ್ಡೆಸಿವಿರ್ ಹೊತ್ತು, ಭಾರತಕ್ಕೆ ಬಂದಿಳಿದ ಅಮೆರಿಕಾದ 4ನೇ ವಿಮಾನ

ನವದೆಹಲಿ: ರೆಮ್​ಡೆಸಿವಿರ್​ ಔಷಧಕ್ಕೆ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ಇದೀಗ ಅಮೆರಿಕಾದಿಂದ 1 ಲಕ್ಷದ 25 ಸಾವಿರ ಡೋಸ್​ಗಳು ಭಾರತಕ್ಕೆ ಬಂದಿವೆ.

ಕೆಲ ದಿನಗಳ ಹಿಂದೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನಿರಂತರ ಬೆಂಬಲವನ್ನು ನೀಡುವುದಾಗಿ ತಿಳಿಸಿದ್ದರು. ಅದರಂತೆ ಈಗಾಗಲೇ ಹಲವು ನೆರವು ಸಾಮಗ್ರಿಗಳನ್ನ ಅಮೆರಿಕಾ ಭಾರತಕ್ಕೆ ಕಳಿಸಿದೆ.

ಈಗ 4ನೇ ವಿಮಾನ ಬಂದಿಳಿದಿದ್ದು, 1 ಲಕ್ಷದ 25 ಸಾವಿರ ರೆಮ್​ಡೆಸಿವಿರ್​ ಡೋಸ್​ಗಳನ್ನ ಹೊತ್ತು ತಂದಿದೆ. ಇದರಿಂದ ಕೊರೊನಾ ಜೀವ ರಕ್ಷಕ ರೆಮ್​​ಡಿಸಿವಿರ್ ಔಷಧವನ್ನು ಎದುರು ನೋಡಿತ್ತಿದ್ದ ಜನರು ಸದ್ಯ ನಿಟ್ಟುಸಿರು ಬಿಡುವಂತಾಗಿದೆ. ಅಂದ್ಹಾಗೆ ನಿನ್ನೆ ಬೆಲ್ಜಿಯಂನಿಂದ 9000 ಡೋಸ್​ ರೆಮ್ಡೆಸಿವಿರ್ ಔಷಧಿ ಭಾರತಕ್ಕೆ ಬಂದಿದೆ.

ಇನ್ನು ಕತಾರ್​ನ ಭಾರತೀಯ ಸಮುದಾಯ 200 ಆಕ್ಸಿಜನ್ ಸಿಲಿಂಡರ್ ಹಾಗೂ 43 ಆಕ್ಸಿಜನ್ ಕಾನ್ಸಂಟ್ರೇಟರ್​ಗಳನ್ನ ಕಳಿಸಿದೆ. ಭಾರತೀಯ ನೌಕಾಪಡೆಯ ಹಡಗು ಅದನ್ನ ಭಾರತಕ್ಕೆ ತೆಗೆದುಕೊಂಡುಬರ್ತಿದೆ.

 

The post 1,25,000 ಡೋಸ್​ ರೆಮ್ಡೆಸಿವಿರ್ ಹೊತ್ತು, ಭಾರತಕ್ಕೆ ಬಂದಿಳಿದ ಅಮೆರಿಕಾದ 4ನೇ ವಿಮಾನ appeared first on News First Kannada.

Source: newsfirstlive.com

Source link