ನನ್ನ ಸ್ವಾತಂತ್ರದ ಹಕ್ಕನ್ನು ನನಗೆ ಕೊಡಿ! ನಾನು ಬದುಕಬಲ್ಲೆ.. ನನ್ನನ್ನು ಈ ಬಂಧನದಿಂದ ಮುಕ್ತ ಮಾಡಿ ಎಂದು ಬೇಡಿಕೊಳ್ಳುತ್ತಿರುವುದು ಯಾರು ಗೊತ್ತಾ ? ವರ್ಲ್ಡ್ ಫೇಮಸ್ ಗಾಯಕಿ, ಬೆಕ್ಕಿನ ಕಣ್ಣಿನ ಸುಂದರಿ, ತನ್ನ ಹಾಡುಗಳಿಂದ ಅಭಿಮಾನಿಗಳನ್ನು ಸಂತೋಷಗೊಳಿಸುವ ಇಂಗ್ಲೀಷ್ ಪಾಪ್ ಸಿಂಗರ್ ಬ್ರಿಟ್ನಿ ಸ್ಪಿಯರ್.

ಬೇಬಿ ಒನ್ ಮೋರ್ ಟೈಂ! ಈ ಹಾಡಿನಲ್ಲಿ ಬ್ರಿಟ್ನಿ ಅವರು, MY LONLINESS IS SCARING ME ಅಂತಾರೆ. ಅದನ್ನು ಇವರು ಕೇವಲ ಆಲ್ಬಂಗಾಗೆ ಹಾಡಿರೋದು. ಆದ್ರೆ ಇವರು ಇದೀಗ ಸಂಪೂರ್ಣ ಬಂಧಿಯಾಗಿದ್ದಾರೆ. ಇವರು ಮಾಡುವ ಯಾವುದೇ ಕೆಲಸವೂ, ತನ್ನ ಸ್ವಇಚ್ಛೆಯಿಂದ ಮಾಡುವ ಹಾಗೆ ಇಲ್ಲ. ಅವರ ತಂದೆ, ಒಬ್ಬಳೆ ಇರು ಅಂದ್ರೆ ಇರ್ಬೇಕು, ಇಂಥ ಕೆಲ್ಸ ಮಾಡು ಅಂದ್ರೆ ಮಾಡ್ಬೇಕು. ರೂಂನಲ್ಲಿ ಒಬ್ಬಳೆ, ಯಾರನ್ನು ಮಾತನಾಡಿಸಬೇಡ ಅಂದ್ರೆ ತಲೆ ಬಗ್ಗಿಸಿ ಹೇಳಿದಂತೆ, ಕೇಳ್ಬೇಕು. ಈ ಥರ ನಿರ್ಬಂಧಗಳನ್ನ ಸಾಮಾನ್ಯರಾದ ನಾವೇ ಕೇಳಲ್ಲ. ಆದ್ರೆ ವಿಶ್ವ ಪ್ರಸಿದ್ಧ ಬ್ರಿಟ್ನಿಯವರು ಅನುಭವಿಸುತ್ತಿರುವ ಪರಿಸ್ಥಿತಿಯೇ ಇದು. ಯಾಕೀಗೆ, ಅವರ ತಂದೆ ಅಷ್ಟೊಂದು ಕ್ರೂರಿನಾ ? ಹೇಳ್ತೀವಿ ಕೇಳಿ.

ಬ್ರಿಟ್ನಿ ಬಳಿ ಇದೆ ಕೋಟಿ ಮೌಲ್ಯದ ಆಸ್ತಿ
ಯಾವ ಆಸ್ತಿಯ ಮೇಲೂ ಬ್ರಿಟ್ನಿಗೆ ಹಕ್ಕಿಲ್ಲ

ಭಾರತ ಸೇರಿದಂತೆ, ಜಗತ್ತಿನಾದ್ಯಂತ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿರುವ ಬ್ರಿಟ್ನಿ, ಕೋಟ್ಯಾಂತರ ಆಸ್ತಿಯ ಒಡತಿ. ಪಾಪ್ ಲೋಕದಲ್ಲೆ ಹೊಸ ಹಾಡಿನ ಅಲೆ ಸೃಷ್ಟಿ ಮಾಡಿರುವ ಈಕೆ ವರ್ಲ್ಡ್ ಫೇಮಸ್ ಪಾಪ್ ತಾರೆ. ಆದರೆ ತಮ್ಮ ವೈಯುಕ್ತಿಕ ಜೀವನದಲ್ಲಿ ಇದನ್ಯಾವುದನ್ನು ಅನುಭವಿಸುವ ಹಕ್ಕೇ ಇಲ್ಲದಂತೆ ಆಗಿಹೋಗಿದೆ. ಅಷ್ಟೆ ಯಾಕೆ ತಮ್ಮ ಬದುಕಿನ ಕುರಿತಾಗಿ ಇವರು ಯಾವ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕೆ ಇಲ್ಲ. ಹೌದು, ಇದು ವಿಚಿತ್ರವಾದರು ನಿಜ. ಬ್ರಿಟ್ನಿ ಆಕ್ಷರಶಃ ತನ್ನ ತಂದೆಯ ಕೈ ಕೆಳಗೆ ಬಂಧಿಯಾಗಿ ಬಿಟ್ಟಿದ್ದಾರೆ. ತನ್ನ ತಂದೆಯನ್ನು ಎದುರು ಹಾಕಿಕೊಂಡು ಹೊರಗೆ ಬರಬೇಕು ಎಂದುಕೊಂಡರೂ, ಅದು ಬ್ರಿಟ್ನಿಯಿಂದ ಸಾಧ್ಯವಾಗುತ್ತಲೆ ಇಲ್ಲ.

ಸತತ 13 ವರ್ಷಗಳಿಂದ ಬಂಧಿಯಾಗಿರುವ ಬ್ರಿಟ್ನಿ
ಈಕೆಯ ಸ್ವಾತಂತ್ರಕ್ಕೆ ಕೋರ್ಟ್ ಕೂಡ ಮನ್ನಣೆ ಕೊಡ್ತಾ ಇಲ್ಲ

ಬ್ರಿಟ್ನಿ ತನ್ನ ಸಂಪೂರ್ಣ ಸ್ವಾತಂತ್ರವನ್ನು ತನ್ನ ತಂದೆಗೆ ಕೊಟ್ಟು 13 ವರ್ಷಗಳಾಗಿ ಹೋಗಿದೆ. ಬ್ರಿಟ್ನಿಯ ಎಲ್ಲ ಆರ್ಥಿಕ ಹಾಗೂ ನಾಗರೀಕ ಸ್ವಾತಂತ್ರದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು  ತಂದೆ ಜೇಮಿ ಸ್ಪಿಯರ್‌ಗೆ ಅಮೇರಿಕಾದ ಕೋರ್ಟ್ ಆದೇಶ ಹೊರಡಿಸಿದೆ. ಅಂದಿನಿಂದ ಇಂದಿನ ವರೆಗೂ ಆಕೆಗೆ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಗದೆ, ತನ್ನ ಸಂಪೂರ್ಣ ಹಕ್ಕನ್ನು ತನ್ನ ತಂದೆಗೆ ನೀಡಿ ಬಿಟ್ಟಿದ್ದಾರೆ ಪಾಪ್ ತಾರೆ. ಸ್ವಾತಂತ್ರವನ್ನು ಕೇಳಿಕೊಂಡು ಕೋರ್ಟ್ ಮೆಟ್ಟಿಲೇರಿದ ಬ್ರಿಟ್ನಿಗೆ, ಅಲ್ಲೂ ಕೂಡ ಮನ್ನಣೆ ಸಿಕ್ಕಿಲ್ಲ. ನಿಮ್ಮ ಸ್ವಾತಂತ್ರ ನಿಮ್ಮ ತಂದೆ ಕೈಯಲ್ಲಿ ಇರಲಿದೆ ಎಂದು ಹೇಳಿ ಕಳಿಸಿಬಿಟ್ಟಿದೆ.

ಕನ್ಸರ್ವೇಟರ್ ಶಿಪ್ ಕಾಯ್ದೆಯ ಅಡಿಯಲ್ಲಿರುವ ಬ್ರಿಟ್ನಿ
ಬ್ರಿಟ್ನಿ ಸದ್ಯ ಅಮೇರಿಕ ಕೋರ್ಟ್‌ನ ಕನ್ಸರ್ವೇಟರ್ ಶಿಪ್ ಕಾಯ್ದೆಯ ಅಡಿಯಲ್ಲಿದ್ದಾರೆ. ಮಾನಸಿಕವಾಗಿ ತೊಂದರೆಯಲ್ಲಿರುವ ರೋಗಿಗಳು, ಏನಾದರೂ ತಪ್ಪು ಮಾಡಿದರೆ ಅಂಥವರನ್ನು ವೈದ್ಯರ ಸೂಚನೆ ಪಡೆದು ಈ ಕಾಯ್ದೆಯ ಅಡಿಯಲ್ಲಿ, ಅವರನ್ನು ಕಾಯುವ ಕಂಸರ್ವೇಟರ್‌ಗಳನ್ನು ಅಂದರೆ ಸಂರಕ್ಷಕರನ್ನು ಗುರುತಿಸುತ್ತಾರೆ. ಗುರುತಿಸಿದ ಸಂರಕ್ಷಕರಿಗೆ ಆ ರೋಗಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಲಾಗುತ್ತದೆ. ಇದರಲ್ಲಿ ನಾಗರೀಕ ಹಕ್ಕು, ಆರ್ಥಿಕ ಹಕ್ಕು ಹಾಗೂ ಸಾಮಾನ್ಯ ಮನುಷ್ಯನಿಗೆ ಇರಬೇಕಾದ ಎಲ್ಲ ಹಕ್ಕನ್ನು ತೆಗೆದುಕೊಂಡು ಅದೇ ಕಂಸರ್ವೇಟರ್‌ಗಳಿಗೆ ವಹಿಸಲಾಗುತ್ತದೆ. ಇದೀಗ ಬ್ರಿಟ್ನಿ ಇದೆ ಕಾಯ್ದೆಯ ಅಡಿಯಲ್ಲಿ ತನ್ನ ಸಂಪೂರ್ಣ ಹಕ್ಕನ್ನು ಕಳೆದುಕೊಂಡಿರೋದು. ಹಾಗಾದ್ರೆ ಪಾಪ್ ಗಾಯಕಿ ಮಾನಸಿಕವಾಗಿ ಸದೃಢವಾಗಿಲ್ವಾ?

ಮಾನಸಿಕವಾಗಿ ಕುಗ್ಗಿ ಹೋಗಿದ್ದ ಬ್ರಿಟ್ನಿ
ರಸ್ತೆ ರಸ್ತೆಯಲ್ಲಿ ಹುಚ್ಚಾಟ ಶುರು ಮಾಡಿದ ಗಾಯಕಿ

ಹೌದು, ತನ್ನ ಅದ್ಭುತ ಗಾಯನದಿಂದ ವಿಶ್ವದೆಲ್ಲೆಡೆ ಫೇಮಸ್ ಆಗಿದ್ದ ಬ್ರಿಟ್ನಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ತಮ್ಮ ಮನಸ್ಸನ್ನು ಸೀಮಿತದಲ್ಲಿಡುಲು ಸೋತು ಹೋಗಿದ್ದರು. ಬೀದಿ ಬೀದಿಯಲ್ಲಿ ಹೇಗೇಗೋ ಓಡಾಡಲು ಶುರು ಮಾಡಿದ್ದರು. ಇದ್ದಕ್ಕಿದಂತೆ ತನ್ನ ಕೇಶರಾಶಿಯನ್ನೆ ಸಂಪೂರ್ಣ ಬೋಳಿಸಿ ರಸ್ತೆಗೆ ಬಂದು ಬಿಟ್ಟಿದ್ದರು. ಈ ಎಲ್ಲ ಕಾರಣದಿಂದ ಆಕೆ ಮಾನಸಿಕವಾಗಿ ಕುಂದಿದ್ದಾರೆ ಎನ್ನುವುದು ಗೊತ್ತಾಗುತ್ತೆ. ಆದರೆ ಈ ವರ್ತನೆಗೆ ಬ್ರಿಟ್ನಿ ತನ್ನ ಸ್ವಾತಂತ್ರ್ಯ ಕಳೆದುಕೊಂಡಿಲ್ಲ. ಬ್ರಿಟ್ನಿ ಫೇಮಸ್ ಆಗಿದ್ದೆ ಆಕೆಯ ಈ ಪರಿಸ್ಥಿತಿಗೆ ಕಾರಣ ಎನ್ನಲಾಗುತ್ತೆ. ಅವರು ಎಲ್ಲಿ ಹೋಗುತ್ತಾರೋ ಅಲ್ಲಲ್ಲಿಗೆ ಫೋಟೊಗ್ರಾಫರ್ಸ್ ಹಿಂಬಾಲಿಸಿ ಬರ್ತಾ ಇದ್ರು. ಬೇಸತ್ತ ಗಾಯಕಿ ಒಮ್ಮೆ ತನ್ನ ಹಿಂಬಾಲಿಸಿ ಬಂದ ಫೋಟೋಗ್ರಾಫರ್ ಹಾಗೂ ಅವನ ಕಾರ್ ಮೇಲೆ ಛತ್ರಿಯಲ್ಲಿ ಹೊಡೆದು ಹಲ್ಲೆ ಮಾಡಿ ಬಿಟ್ಟಿದ್ದರು. ಇದರಿಂದ ಬ್ರಿಟ್ನಿ ಮೇಲೆ ಕೇಸ್ ದಾಖಲಾಗಿತ್ತು. ಅಲ್ಲದೆ ಮಾದಕ ವಸ್ತುಗಳ ವ್ಯಸನಿಯಾಗಿದ್ದಾರೆ ಎಂದು ಬ್ರಿಟ್ನಿಯನ್ನು ಅರೆಸ್ಟ್ ಮಾಡಿ ಎಂದು ಅಮೆರಿಕ ಕೋರ್ಟ್ ಆದೇಶ ಹೊರಡಿಸಿತ್ತು.

ತನ್ನ ಮಗಳು ಮಾನಸಿಕವಾಗಿ ಸದೃಢವಾಗಿಲ್ಲ ಎಂದ ಜಿಮ್ಮಿ
ಕನ್ಸರ್ವೇಟರ್ ಶಿಪ್ ಕಾಯ್ದೆ ಅಡಿ ಬ್ರಿಟ್ನಿ ಅರೆಸ್ಟ್

ಬ್ರಿಟ್ನಿ ಮಾಡಿದ ಹಲ್ಲೆಗೆ ಅಮೆರಿಕ ಕೋರ್ಟ್ ಅವರನ್ನು ಬಂಧಿಸಲು ಸೂಚನೆ ಕೊಟ್ಟ ಬೆನ್ನಲ್ಲೆ ತಂದೆ, ಆಕೆ ಮಾನಸಿಕವಾಗಿ ತೊಂದರೆಗೆ ಒಳಗಾಗಿದ್ದಾಳೆ. ಆಕೆಯನ್ನು ಕನ್ಸರ್ವೇಟರ್ ಶಿಪ್ ಕಾಯ್ದೆ ಅಡಿ ತನಗೆ ಒಪ್ಪಿಸಿ ಅಂತ ಬೇಡಿಕೊಂಡಿದ್ದಾರೆ. ಇದಕ್ಕೆ ಕೋರ್ಟ್ ಒಪ್ಪಿಗೆ ಸೂಚಿಸಿ, ಆಕೆಯ  ಜವಾಬ್ದಾರಿ ತಂದೆಯದ್ದು ಎಂದು ಘೋಷಿಸಿ ಬಿಟ್ಟಿದೆ.

ಮಕ್ಕಳನ್ನು ಮಾಜಿ ಪತಿಗೆ ಒಪ್ಪಿಸಲು ಕೋರ್ಟ್ ಸೂಚನೆ
ಮತ್ತೆ ಮದುವೆ ಆಗಲು, ತಾಯಿಯಾಗಲು ಅವಕಾಶವಿಲ್ಲ

ಬ್ರಿಟ್ನಿ ಕನ್ಸರ್ವೇಟರ್ಶಿಪ್ ಕಾಯ್ದೆ ಅಡಿ ತಂದೆಯ ಕೆಳಗೆ ಬಂಧಿಯಾದಾಗನಿಂದ ಆಕೆಗೆ ಎಲ್ಲ ಹಕ್ಕು ಕೈಚೆಲ್ಲಿದಂತಾಗಿದೆ. ತನ್ನೆಡರು ಮಕ್ಕಳನ್ನು ಮಾಜಿ ಪತಿಗೆ ಒಪ್ಪಿಸಲು ಕೋರ್ಟ್ ಸೂಚನೆ ನೀಡಿತ್ತು. ಹಾಗೂ ಈಕೆಗೆ ಮತ್ತೊಂದು ಮದುವೆ ಆಗುವ ಹಕ್ಕಿಲ್ಲ ಹಾಗೂ ಇನ್ನು ಹೆಚ್ಚಿನ ಮಕ್ಕಳನ್ನು ಪಡೆಯುವ ಅವಕಾಶವಿಲ್ಲ ಎನ್ನಲಾಗುತ್ತದೆ.

13 ವರ್ಷಗಳಾದರೂ ಬ್ರಿಟ್ನಿಗೆ ಸಿಗದ ಸ್ವಾತಂತ್ರ
ಬ್ರಿಟ್ನಿಯನ್ನ ಫ್ರೀ ಮಾಡಿ ಎಂದು ಹಲವರ ಕೋರಿಕೆ

ಇಷ್ಟೆಲ್ಲಾ ಆಗಿ ಬರೋಬ್ಬರಿ 13 ವರ್ಷಗಳಾಗಿ ಹೋಗಿದೆ. ಆದರೂ ಇನ್ನೂ ಸ್ವತಂತ್ರಳಾಗಿಲ್ಲ. ಇಷ್ಟು ವರ್ಷಗಳ ಅವಧಿಯಲ್ಲಿ ಅವರು ತಮ್ಮ ಟೂರ್, ಆಲ್ಬಂ ಇತ್ಯಾದಿಗಳಲ್ಲಿ ಸಕ್ರಿಯರಾಗಿದ್ದರು, ಯಾವುದು ಅವರ ಕೈಯಲ್ಲಿ ಇಲ್ಲದಂತಾಗಿ ಹೋಗಿದೆ. ಇನ್ನು ಇವರ ಇಚ್ಛೆಗೆ ವಿರುದ್ಧವಾದ ಹಲವು ಕೆಲಸಗಳನ್ನು ಮಾಡಲು ಒತ್ತಾಯಿಸಲಾಗುತ್ತದೆ. ಒತ್ತಾಯ ಪೂರ್ವಕವಾಗಿ ಔಷಧಿಗಳನ್ನು ಕೊಡಲಾಗುತ್ತದೆ ಎಂದು ತನ್ನ ದೂರನ್ನು 2018ರಿಂದ ಕೋರ್ಟ್ವರೆಗೂ ತೆಗೆದುಕೊಂಡು ಹೋಗುತ್ತಿದ್ದಾರೆ. ಕಳೆದ ವಾರ ಕೋರ್ಟ್ ಈಕೆಯ ಧೋರಣೆಗಳನ್ನು ಪರಿಗಣಿಸದೆ,  ಕನ್ಸರ್ವೇಟರ್ ಶಿಪ್ ಕಾಯ್ದೆ ಅಡಿಯಲ್ಲಿ ಜೀವಿಸಬೇಕು ಎನ್ನುವುದನ್ನು ಹೇಳಿ ಕಳುಹಿಸಿದೆ. ಇದರಿಂದ ಸೋಷಿಯಲ್ ಮೀಡಿಯಾದಲ್ಲಿ ಹೊಸ ಆಂದೋಲನವೇ ಶುರುವಾಗಿಬಿಟ್ಟಿದೆ. ಬ್ರಿಟ್ನಿಯನ್ನು ಫ್ರೀ ಮಾಡಿ ಎಂದು ಹಲವರ ಕೋರಿಕೆ ಇಡುತ್ತಿದ್ದಾರೆ.

ಬ್ರಿಟ್ನಿ ಅಭಿಮಾನಿಗಳು, ಹಾಗೂ ಅವರ ಸ್ನೇಹಿತರು ಬ್ರಿಟ್ನಿಯ ಪರ ನಿಂತಿದ್ದಾರೆ. ಆದ್ರೆ ಬ್ರಿಟ್ನಿಯ ತಂದೆ ಜಿಮ್ಮಿಸ್ಪಿಯರ್ ಮಾತ್ರ ಯಾರ ಮಾತನ್ನೂ ಕೇಳದೆ, ಕೋರ್ಟ್ ಹೇಳಿದಂಥ ಸೂಚನೆಯನ್ನು ಚಾಚು ತಪ್ಪದೆ ಪಾಲಿಸಿ, ಬ್ರಿಟ್ನಿಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಹ್ಯಾಷ್ ಟ್ಯಾಗ್ ಫ್ರೀ ಬ್ರಿಟ್ನಿ ಎನ್ನುವ ಕೂಗು ವೈರಲ್ ಆಗುತ್ತಿದೆ.

ಎಲ್ಲ ನಮ್ಮದೆ ಆದರೆ, ಏನೂ ನಮ್ಮದಲ್ಲ ಅನಿಸಿದರೆ, ಪರಿಸ್ಥಿತಿ ಹೇಗಿರುತ್ತದೆ ಅಲ್ವಾ ? ಬ್ರಿಟ್ನಿ ಸಂಪಾದಿಸಿದ ಅಷ್ಟೂ ಆಸ್ತಿಗೆ ಸದ್ಯ ತಂದೆ ಅಧಿಪತಿ. ಆಸ್ತಿ ಇರಲಿ, ಆಕೆಯ ನಾಗರೀಕ ಸ್ವಾತಂತ್ರಕ್ಕೆ ಈ ರೀತಿ ಕಟ್ಟುಪಾಡಾದರೆ, ಆಕೆಯ ಬದುಕಿಗೆ ನ್ಯಾಯ ಒದಗಿಸಿಕೊಡುವವರಾರು?

The post 13 ವರ್ಷಗಳಿಂದ ಪಾಪ್ ತಾರೆಗೆ ತನ್ನ ದೇಶದಲ್ಲಿ ಸ್ವಾತಂತ್ರವೇ ಇಲ್ಲ -ಕೋಟಿ, ಕೋಟಿ ಆಸ್ತಿ ಒಡತಿಗೆ ಯಾಕೆ ಹೀಗಾಯ್ತು? appeared first on News First Kannada.

Source: newsfirstlive.com

Source link