ಅಹ್ಮದಾಬಾದ್: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆಯಿಂದ ಜನರು ತತ್ತರಿಸುತ್ತಿರುವಾಗಲೇ ಬ್ಲ್ಯಾಕ್ ಫಂಗಸ್ ಹಾಗೂ ವೈಟ್ ಫಂಗಸ್​​ ಕಾಯಿಲೆಗಳು ಹುಟ್ಟಿಕೊಂಡಿದ್ದು ಈಗಾಗಲೇ ಹಲವರು ಸಾವನ್ನಪ್ಪಿರುವ ಬಗ್ಗೆ ವರದಿಗಳಾಗಿವೆ.

ಈ ಮಧ್ಯೆ ಅಹಮದಾಬಾದ್​ನಲ್ಲಿ 13 ವರ್ಷದ ಬಾಲಕನೋರ್ವನಲ್ಲಿ ಬ್ಲ್ಯಾಕ್ ಫಂಗಸ್ ಕಾಯಿಲೆ ಕಾಣಿಸಿಕೊಂಡಿದ್ದು ದೇಶವೇ ಬೆಚ್ಚಿಬೀಳುವಂತಾಗಿದೆ. ಯಾಕಂದ್ರೆ ಈವರೆಗೆ ವಯಸ್ಸಾದವರಲ್ಲಿ ಅದ್ರಲ್ಲೂ ಮಧುಮೇಹ ಹೆಚ್ಚಿರುವವರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ತಿತ್ತು. ಇದೇ ಮೊದಲ ಬಾರಿಗೆ ಬಾಲಕನೋರ್ವನಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿರುವುದಕ್ಕೆ ವೈದ್ಯರೂ ಬೆಚ್ಚಿಬಿದ್ದಿದ್ದಾರೆ.

ಈ ಬಾಲಕನಲ್ಲಿ ಬ್ಲ್ಯಾಕ್ ಫಂಗಸ್​ ಹೇಗೆ ಕಾಣಿಸಿಕೊಳ್ತು.. ಈತನಿಗೂ ಸಕ್ಕರೆ ಕಾಯಿಲೆ ಇತ್ತಾ ಎಂಬ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

The post 13 ವರ್ಷದ ಬಾಲಕನಲ್ಲೂ ಬ್ಲ್ಯಾಕ್ ಫಂಗಸ್ ಪತ್ತೆ; ಬೆಚ್ಚಿಬಿದ್ದ ವೈದ್ಯರು appeared first on News First Kannada.

Source: newsfirstlive.com

Source link