ಐಪಿಎಲ್ ಮೆಗಾ ಹರಾಜಿನಲ್ಲಿ 14 ಕೋಟಿಗೆ ವೇಗಿ ದೀಪಕ್ ಚಹರ್ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ. ಈ ಬಗ್ಗೆ ಮಾತನಾಡಿರೋ ಚಹರ್, ಹರಾಜಿನ ಮೊತ್ತ 13 ಕೋಟಿ ತಲುಪುತ್ತಿದ್ದಂತೆ ಹರಾಜು ನಿಲ್ಲಿಸಬೇಕು ಅಂದುಕೊಂಡಿದ್ದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ದೀಪಕ್, ನಾನು ಮತ್ತೆ ಸಿಎಸ್ಕೆ ತಂಡದಲ್ಲಿ ಆಡಬೇಕು ಅನ್ನೋ ಆಸೆ ಇತ್ತು. ಹಳದಿ ಜೆರ್ಸಿ ಬಿಟ್ಟು ಬೇಱವ ಜೆರ್ಸಿಯೂ ಊಹಿಸಲೂ ನನಗೆ ಇಷ್ಟಲಿಲ್ಲ ಎಂದರು.
ನನ್ನ ಮೇಲೆ ಮಾಡಲಾದ ಬಿಡ್ಡಿಂಗ್ ಅತ್ಯಂತ ದುಬಾರಿ. ಹಾಗಾಗಿ 13 ಕೋಟಿ ತಲುಪುತ್ತಿದ್ದಂತೆ ಹರಾಜು ನಿಲ್ಲಿಸಿ, ನಾನು ಸಿಎಸ್ಕೆಗೆ ಹೋಗುತ್ತೇನೆ ಎಂದು ಘೋಷಿಸುವ ಚಿಂತನೆ ಬಂದಿತ್ತು ಎಂದು ಹೇಳಿದ್ದಾರೆ.