ಬೆಂಗಳೂರು: ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ನಿಯಮಗಳ ಜಾರಿ ಮೊರೆ ಹೋಗಿದ್ದು, ನಾಳೆ ರಾತ್ರಿ 9 ಗಂಟೆ ಬಳಿಕ ರಾಜ್ಯದಲ್ಲಿ ಬಿಗಿ ಕರ್ಫ್ಯೂ ನಿಯಮಗಳು ಜಾರಿ ಆಗಲಿವೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯಾದ್ಯಂತ ಸಾರಿಗೆ ಸಂಚಾರವನ್ನು ಸ್ಥಗಿತ ಮಾಡಲಾಗುತ್ತಿದೆ. ಪರಿಣಾಮ ಬೆಂಗಳೂರಿನಿಂದ ತಮ್ಮ ಸ್ವಂತ ಊರುಗಳತ್ತ ಹೊರಡುವ ಜನರ ಸಂಖ್ಯೆ ಏಕಾಏಕಿ ಹೆಚ್ಚಾಗಿದೆ.

ಸರ್ಕಾರದಿಂದ 14 ದಿನಗಳ ಬಿಗಿ ಕ್ರಮದ ಮಾಹಿತಿ ತಿಳಿಯುತ್ತಿದಂತೆ ಲಗೇಜ್ ಪ್ಯಾಕ್​ ಮಾಡಿಕೊಂಡು ಜನರು ಬಸ್​ ನಿಲ್ದಾಣ, ರೈಲ್ವೆ ನಿಲ್ದಾಣಗಳಿಗೆ ಆಗಮಿಸುತ್ತಿದ್ದಾರೆ. ಮತ್ತಷ್ಟು ಮಂದಿ ಸ್ವಂತ ವಾಹನಗಳಲ್ಲೇ ತಮ್ಮೂರಿನತ್ತ ಹೊರಟಿದ್ದಾರೆ.

ನಗರದ ಮೆಜೆಸ್ಟಿಕ್​ ಬಸ್​ ನಿಲ್ದಾಣ, ರೈಲ್ವೆ ನಿಲ್ದಾಣಕ್ಕೆ ಜನರು ಆಗಮಿಸುತ್ತಿದ್ದು, ಮೆಜೆಸ್ಟಿಕ್​​ನಿಂದ ಹೊರಡುವ ಎಲ್ಲಾ ಬಸ್​ಗಳು ಪ್ರಯಾಣಿಕರಿಂದ ತುಂಬಿ ಸಾಗುತ್ತಿವೆ. ಇತ್ತ ನಗರದ ಹೊರವಲಯದ ನೆಲಮಂಗಲದ ನವಯುಗ ಟೋಲ್ ಬಳಿಯೂ ವಾಹನಗಳ ಮೂಮೆಂಟ್​ ಹೆಚ್ಚಾಗಿದ್ದು, ಕಾರು, ಬಸ್, ಆಟೋ ಮ್ಯಾಕ್ಸಿ ಕ್ಯಾಬ್​​ಗಳಲ್ಲಿ ಜನರು ಲಗೇಜ್ ತುಂಬಿಕೊಂಡು ಊರುಗಳಿಗೆ ತೆರಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ.

The post 14 ದಿನ ಬಂದ್ ಘೋಷಣೆ ಬೆನ್ನಲ್ಲೇ ಗಂಟು ಮೂಟೆಯೊಂದಿಗೆ ಊರುಗಳತ್ತ ಹೊರಟ ಜನರು appeared first on News First Kannada.

Source: News First Kannada
Read More