ಕೊರೊನಾ ಕಾರಣದಿಂದ ಅರ್ಧಕ್ಕೆ ನಿಂತಿರುವ 14ನೇ ಆವೃತ್ತಿ ಐಪಿಎಲ್​ ಟೂರ್ನಿಯೇ, ಇನ್ನೂ ಮರು ಆಯೋಜನೆ ಆಗಿಲ್ಲ. ಅದಾಗಲೇ 15ನೇ ಆವೃತ್ತಿ ಚುಟುಕು ಲೀಗ್​ ಆಯೋಜನೆಗೆ, ಬಿಸಿಸಿಐ ಬ್ಲೂ ಪ್ರಿಂಟ್​​ ತಯಾರಿಸಿದೆ. ಹೇಗಿದೆ 2022ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಆಯೋಜನೆಗೆ ಬಿಸಿಸಿಐ ಸಿದ್ಧತೆ..?

ಅರ್ಧಕ್ಕೆ ನಿಂತ 14ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿಯ 2ನೇ ಹಂತದ ಪಂದ್ಯಗಳ ಆಯೋಜನೆಗೆ, ಭರ್ಜರಿ ಸಿದ್ಧತೆ ನಡೆದಿದೆ. ವಿಶ್ವಕಪ್​ ಟೂರ್ನಿಯ ದಿನಾಂಕಕ್ಕಾಗಿ ಇಷ್ಟು ದಿನಗಳ ಕಾಲ ಕಾದಿದ್ದ ಬಿಸಿಸಿಐ, ಇನ್ನೇನು ಕೆಲವೇ ದಿನಗಳಲ್ಲಿ ವೇಳಾಪಟ್ಟಿಯನ್ನ ಪ್ರಕಟಿಸಲಿದೆ. ಮೂಲಗಳ ಪ್ರಕಾರ ಅಕ್ಟೋಬರ್​ 10ರ ಒಳಗೆ ಫೈನಲ್​ ಮುಗಿಯುವಂತೆ, ಟೂರ್ನಿಯ ಆಯೋಜನೆ ಆಗೋದು ಬಹುತೇಕ ಕನ್​ಫರ್ಮ್​​​..!

ಇದೀಗ 14ನೇ ಆವೃತ್ತಿ ಐಪಿಎಲ್​ನ ಉಳಿದ ಪಂದ್ಯಗಳ ಆಯೋಜನೆ, ಆ ಬಳಿಕ ಟಿ 20 ವಿಶ್ವಕಪ್​ ಆಯೋಜನೆ… ಈ ಮಹತ್ವದ ಟೂರ್ನಿಗಳ ಕಾರ್ಯದೊತ್ತಡ ಈಗಾಗಲೇ ಬಿಸಿಸಿಐ ಹೆಗಲೇರಿದೆ. ಇದರ ನಡುವೆಯೇ ಬಿಸಿಸಿಐ 15ನೇ ಆವೃತ್ತಿಐ ಐಪಿಎಲ್​ ಆಯೋಜನೆಗೂ, ಸಿದ್ಧತೆ ನಡೆಸ್ತಾ ಇದೆ. ಇನ್​ಫ್ಯಾಕ್ಟ್​​..! 15ನೇ ಚುಟುಕು ಆವೃತ್ತಿ ಆಯೋಜನೆಗೆ ಕರುಡು ಬ್ಲೂ ಪ್ರಿಂಟ್​ ಸಿದ್ಧವಾಗಿದೆ.

15ನೇ ಆವೃತ್ತಿ ಐಪಿಎಲ್​ ಆಯೋಜನೆ ಬ್ಲೂ ಪ್ರಿಂಟ್​ ರೆಡಿ..!
2 ಹೊಸ ತಂಡ, ಮೆಗಾ ಆಕ್ಷನ್​.. ಪಿನ್​ ಟು ಪಿನ್​ ಪ್ಲಾನ್​​​..!

ಯೆಸ್​​..! ಕಳೆದ ಆವೃತ್ತಿಯ ಆರಂಭಕ್ಕೂ ಮುನ್ನವೇ ನಡೆಯಬೇಕಿದ್ದ ಮೆಗಾ ಆಕ್ಷನ್,​ ಕೊರೊನಾ ಕಾರಣದಿಂದ ಮುಂದೂಡಿಕೆಯಾಗಿತ್ತು. ಆದ್ರೆ ಮುಂಬರುವ 15ನೇ ಆವೃತ್ತಿಗೂ ಮುನ್ನ ಮೆಗಾ ಆಕ್ಷನ್​ ನಡೆಸೋಕೆ ನಿರ್ಧರಿಸಿದೆ. ಇದರೊಂದಿಗೆ 2 ಹೊಸ ತಂಡಗಳನ್ನೂ ಮುಂಬರುವ ಆವೃತ್ತಿಗಳಲ್ಲಿ ಸೇರಿಸೊಕೊಳ್ಳೋ ಪ್ಲಾನ್​, ಬಿಸಿಸಿಐ ಬಿಗ್​ಬಾಸ್​​ಗಳದ್ದಾಗಿದೆ.

15ನೇ ಆವೃತ್ತಿಗೆ ಬಿಸಿಸಿಐ ಬ್ಲೂ ಪ್ರಿಂಟ್​​ ಹೇಗಿದೆ..?

  1. ಅಗಸ್ಟ್​​ – ಫ್ರಾಂಚೈಸಿಗಳಿಗೆ ಟೆಂಡರ್​​ ದಾಖಲೆಗಳ ಬಿಡುಗಡೆ
  2. ಅಕ್ಟೋಬರ್​ – ಪಟ್ಟಿಗೆ ಹೊಸ ಫ್ರಾಂಚೈಸಿಗಳ ಸೇರ್ಪಡೆ
  3. ಡಿಸೆಂಬರ್​ – ಮೆಗಾ ಆಕ್ಷನ್​ ನಡೆಯೋ ಸಾಧ್ಯತೆ
  4. ಜನವರಿ – ಮಿಡಿಯಾ ರೈಟ್ಸ್​​ ಟೆಂಡರ್​​ ದಾಖಲೆಗಳ ಬಿಡುಗಡೆ

ಈಗಾಗಲೇ 2 ಹೊಸ ತಂಡಗಳ ಸೇರ್ಪಡೆಯನ್ನ ಕನ್​ಫರ್ಮ್​ ಮಾಡಿರುವ ಬಿಸಿಸಿಐ, ಅಗಸ್ಟ್​ ಮಧ್ಯಭಾಗದಲ್ಲಿ ಹೊಸ ಫ್ರಾಂಚೈಸಿಗಳ ಟೆಂಡರ್​ ದಾಖಲೆಗಳನ್ನ ಬಿಡುಗಡೆ ಮಾಡಲಿದೆ. ಅಕ್ಟೋಬರ್​ ಮಧ್ಯಭಾಗದಲ್ಲಿ ಹೊಸ ಫ್ರಾಂಚೈಸಿಗಳನ್ನ ಸೇರ್ಪಡೆ ಮಾಡಿಕೊಳ್ಳುವ ಬಿಸಿಸಿಐ, ಡಿಸೆಂಬರ್​ನಲ್ಲಿ ಮೆಗಾ ಆಕ್ಷನ್​ ನಡೆಸಲು ತೀರ್ಮಾನಿಸಿದೆ. ಇನ್ನು ಜನವರಿ ಮಧ್ಯಭಾಗದಲ್ಲಿ ಮೀಡಿಯಾ ರೈಟ್ಸ್​​ ಟೆಂಡರ್​ ಡಾಕ್ಯೂಮೆಂಟ್​​​ ಅನ್ನ ಬಿಡುಗಡೆ ಮಾಡಲಿದೆ.

ತಂಡದ ಖರೀದಿಗೆ ಮುಂದಾದ ಅದಾನಿ, ಗೋಯೆಂಕಾ..!
ಬಿಸಿಸಿಐ 2 ಹೊಸ ತಂಡಗಳ ಸೇರ್ಪಡೆಗೆ ಮುಂದಾಗಿದೆ ಅನ್ನೋ ಸುದ್ದಿ ಹೊರ ಬಿದ್ದಾಗ್ಲೇ, ಅದಾನಿ ಹಾಗೂ ಗೋಯೆಂಕಾ ಗ್ರೂಪ್​ಗಳು ತಂಡ ಖರೀದಿಗೆ ಮುಂದಾಗಿದ್ವು. ಈಗಲೂ ಕೂಡ ಅದೇ ಕಂಪನಿಗಳು ಬಿಡ್​ ಸಲ್ಲಿಕೆಗೆ ಆಸಕ್ತಿ ತೋರಿವೆ ಎನ್ನಲಾಗ್ತಿದೆ. ಜೊತೆಗೆ ಒಂದು ತಂಡ ಅಹಮದಾಬಾದ್​​ ನಗರವನ್ನ ಪ್ರತಿನಿಧಿಸಿದ್ರೆ, ಕಾನ್ಪುರವನ್ನ ಇನ್ನೊಂದು ತಂಡ ಪ್ರತಿನಿಧಿಸಲಿದೆಯಂತೆ. ಇದರಿಂದಾಗಿ ಗುಜರಾತ್​​, ಉತ್ತರ ಪ್ರದೇಶ ರಾಜ್ಯಗಳಿಗೂ ಐಪಿಎಲ್​​ನಲ್ಲಿ ಮನ್ನಣೆ ನೀಡೋದು ಬಿಸಿಸಿಐ ಪ್ಲಾನ್​..!!

ಫ್ರಾಂಚೈಸಿಗಳ ಪರ್ಸ್​​​, ರಿಟೈನ್ ಆಟಗಾರರ ಪ್ರೈಸ್​​- ಎರಡೂ ಹೈಕ್​..!​
ಯೆಸ್​​..! ಡಿಸೆಂಬರ್​ನಲ್ಲಿ ಮೆಗಾ ಆಕ್ಷನ್​ ನಡೆಸೋಕೆ ಉದ್ದೇಶಿಸಿರುವ ಬಿಸಿಸಿಐ, ಫ್ರಾಂಚೈಸಿಗಳ ಪರ್ಸ್​ ಗಾತ್ರವನ್ನೂ ಹೆಚ್ಚಿಸಲು ನಿರ್ಧರಿಸಿದೆ. ಈಗಿರುವ 85 ಕೋಟಿಯಿಂದ 90 ಕೋಟಿಗೆ ಪರ್ಸ್​ ಮೌಲ್ಯ ಹೆಚ್ಚಾಗುವ ಸಾಧ್ಯತೆಯಿದೆ. ಶೇಕಡಾ 75ರಷ್ಟು ಹಣವನ್ನ ಫ್ರಾಂಚೈಸಿಗಳು ಖರ್ಚು ಮಾಡಬೇಕಿರೋದು, ಕಡ್ಡಾಯವಾಗಿದೆ. ಹೀಗಾಗಿ 10 ಫ್ರಾಂಚೈಸಿಗಳ ಪೂಲ್​ನಲ್ಲಿ 50 ಕೋಟಿಗೂ ಹೆಚ್ಚು ಹಣ ಹರಿಯುವಂತೆ ನೋಡಿಕೊಳ್ಳೋ ಯೋಜನೆ ಸಿದ್ಧವಾಗಿದೆ​.

4 ಮಂದಿ ಆಟಗಾರರನ್ನ ಉಳಿಸಿಕೊಳ್ಳೋ ಅವಕಾಶ..!
ಇಷ್ಟೇ ಅಲ್ಲ..! ಆಟಗಾರರ ರಿಟೈನ್​​ ಪಾಲಿಸಿಯಲ್ಲೂ, ಬದಲಾವಣೆ ಬರಲಿದೆ. ಈಗಾಗಲೇ 4 ಆಟಗಾರರ ರಿಟೈನ್​ಗೆ ಅವಕಾಶವಿದೆ. ಇದರಲ್ಲಿ 3 ಭಾರತೀಯ, ಒಬ್ಬ ವಿದೇಶಿ ಅಥವಾ ತಲಾ ಇಬ್ಬರು ಭಾರತೀಯ, ವಿದೇಶಿ ಆಟಗಾರರನ್ನ ತಂಡದಲ್ಲೇ ಉಳಿಸಿಕೊಳ್ಳೋ ಅವಕಾಶ ನೀಡೋ ಸಾಧ್ಯತೆಯಿದೆ. ಇದಲ್ಲದೇ ಒಂದು ವೇಳೆ ತಂಡ ರಿಟೈನ್​ ಮಾಡಿಕೊಂಡ ಆಟಗಾರ ಆಕ್ಷನ್​ಗೆ ಹೋಗುವ ನಿರ್ಧಾರ ಮಾಡಿದ್ರೆ, ಅದಕ್ಕೂ ಅವಕಾಶ ನೀಡಲಾಗಿದೆ.

ಇದರೊಂದಿಗೆ ಮೀಡಿಯಾ ರೈಟ್ಸ್​​ ವಿಚಾರವಾಗಿಯೂ ದೊಡ್ಡ ಲಾಭದ ಗಳಿಕೆಯನ್ನ ಬಿಸಿಸಿಐ ಎದುರುನೋಡ್ತಿದೆ. 2 ತಂಡಗಳ ಹೆಚ್ಚುವರಿ ಸೇರ್ಪಡೆಯಿಂದ, ಟೂರ್ನಿಯ ಗಾತ್ರವೂ ಹೆಚ್ಚಾಗಿದೆ. 10 ತಂಡಗಳ ನಡುವೆ 90ಕ್ಕೂ ಹೆಚ್ಚು ಪಂದ್ಯಗಳು ನಡೆಯೋದ್ರಿಂದ ಕನಿಷ್ಠ 25% ಆದ್ರೂ ಏರಿಕೆಯನ್ನ ಬಿಸಿಸಿಐ ಮ್ಯಾನೇಜ್​ಮೆಂಟ್​​ ಎದುರುನೋಡ್ತಿದೆ.

ಒಟ್ಟಿನಲ್ಲಿ, ಮನರಂಜನೆಯ ಭರಪೂರ ಪ್ಲಾನ್​​ಗಾಗಿ ಸಿದ್ಧತೆ ನಡೆಸಿರುವ ಬಿಸಿಸಿಐ ಕಮರ್ಷಿಯಲ್​ ವಿಚಾರದಲ್ಲೂ ಸಖತ್​ ವರ್ಕೌಟ್​ ಮಾಡಿದೆ. ಆದ್ರೆ, ಈ ಎಲ್ಲಾ ಪ್ಲಾನ್​ಗಳು ಸಕ್ಸಸ್​ ಕಾಣೋಕೆ ಕೊರೊನಾ ಅವಕಾಶ ನೀಡುತ್ತಾ ಕಾದು ನೋಡಬೇಕಿದೆ.

The post 15ನೇ IPL ಆವೃತ್ತಿಗೆ ಈಗಾಗ್ಲೇ ತಯಾರಾಯ್ತು BCCI ಬ್ಲೂ ಪ್ರಿಂಟ್ appeared first on News First Kannada.

Source: newsfirstlive.com

Source link