ನವದೆಹಲಿ: ಕೊರೊನಾದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಮಾಸ್ಕ್​ ಧರಿಸಿ ಅಂತ ಎಷ್ಟೇ ಹೇಳಿದ್ರೂ ಕೆಲವರು ಕಿವಿಗೆ ಹಾಕೊಳ್ಳಲ್ಲ. ಸಾಮಾಜಿಕ ಅಂತರ ಪಾಲಿಸೋ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ. ಮಾಸ್ಕ್​​ ಧರಿಸೋಕೆ ನಿರ್ಲಕ್ಷ್ಯ ವಹಿಸೋರೆಲ್ಲಾ ಒಮ್ಮೆ ವೈದ್ಯರ ಬಗ್ಗೆ ಯೋಚಿಸಿ. ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೆ ಪಿಪಿಇ ಕಿಟ್, ಮಾಸ್ಕ್,​​ ಗ್ಲೌಸ್​ ಎಲ್ಲವನ್ನೂ ಧರಿಸಿ ಜನರ ಪ್ರಾಣ ಉಳಿಸಲು ಹಗಲಿರುಳು ದುಡಿಯುತ್ತಿದ್ದಾರೆ ಕೊರೊನಾ ವಾರಿಯರ್ಸ್​

ಸತತ 14-15 ಗಂಟೆ ಕಾಲ ಪಿಪಿಇ​ ಕಿಟ್​ ಧರಿಸಿದ್ದರಿಂದ ಮೈಯೆಲ್ಲಾ ಬೇವರಿನಿಂದ ತೇವವಾಗಿರುವ ವೈದ್ಯರೊಬ್ಬರ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ವೈದ್ಯರು ಹೇಗೆ ಪ್ರತಿದಿನ ರಿಸ್ಕ್​ನಲ್ಲೇ ಕೆಲಸ ಮಾಡ್ತಿದ್ದಾರೆ ಎಂಬ ಬಗ್ಗೆ ವೈದ್ಯ​ ಸೋಹಿಲ್, ಟ್ವೀಟ್ ಮಾಡಿದ್ದು, ತಮ್ಮ ಎರಡು ಪೋಟೋಗಳನ್ನ ಹಾಕಿದ್ದಾರೆ.

ಒಂದರಲ್ಲಿ ಪಿಪಿಇ ಕಿಟ್​ ಧರಿಸಿದ ವೇಳೆ ತಗೆದ ಫೋಟೋ ಇದ್ದರೆ, ಇನ್ನೊಂದರಲ್ಲಿ 14 ಗಂಟೆ ಪಿಪಿಇ ಕಿಟ್​ ಧರಿಸಿದ ಬಳಿಕ ಬೆವರಿನಿಂದ ಇಡೀ ದೇಹ ತೇವವಾಗಿರುವ ಫೋಟೋವಿದೆ. ಈ ಪೋಸ್ಟ್​ ಜೊತೆ ಅವರು, ದೇಶಕ್ಕಾಗಿ ಸೇವೆ ಸಲ್ಲಿಸಲು ಹೆಮ್ಮೆಯಿದೆ ಅಂತಾ ಬರೆದಿದ್ದಾರೆ.

ಎಲ್ಲಾ ವೈದ್ಯರು ಆಗೂ ಆರೋಗ್ಯ ಸಿಬ್ಬಂದಿ ಪರವಾಗಿ ಹೇಳ್ತಿದ್ದೀನಿ.. ನಾವು ನಮ್ಮ ಕುಟುಂಬಗಳಿಂದ ದೂರವಿದ್ದು ಶ್ರಮ ವಹಿಸಿ ಕೆಲಸ ಮಾಡ್ತಿದ್ದೀವಿ. ಕೆಲವೊಮ್ಮೆ ಕೊರೊನಾ ರೋಗಿಗಳಿಂದ ಒಂದು ಅಡಿ ಅಂತರದಲ್ಲೇ ಇದ್ದರೆ, ಇನ್ನೂ ಕೆಲವೊಮ್ಮೆ ಗಂಭೀರ ಸ್ಥಿತಿಯಲ್ಲಿರೋ ವೈದ್ಧರಿಂದ ಒಂದಿಂಚು ದೂರ ನಿಂತುಕೊಂಡೇ ಕಾರ್ಯನಿರ್ವಹಿಸುತ್ತೇವೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಅಂತ ನಾನು ಮನವಿ ಮಾಡ್ತೀನಿ, ಅದೊಂದೇ ಪರಿಹಾರ. ಸುರಕ್ಷಿತವಾಗಿರಿ ಎಂದು ಮತ್ತೊಂದು ಟ್ವೀಟ್​ ಮಾಡಿ ಡಾಕ್ಟರ್​ ಸೋಹಿಲ್​, ಎಲ್ಲರೂ ಲಸಿಕೆಯನ್ನು ಪಡೆಯುವಂತೆ ಮನವಿ ಮಾಡಿದ್ದಾರೆ.

ನ್ಯೂಸ್​ಫಸ್ಟ್​ ಕಳಕಳಿ : ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ. ಮಾಸ್ಕ್ ಧರಿಸಿ, ಸೋಶಿಯಲ್ ಡಿಸ್ಟನ್ಸ್ ಕಾಪಾಡಿ. ಕೈ ತೊಳೆಯುತ್ತಿರಿ. ಮತ್ತು ಮೇ 1 ರಿಂದ 18ರ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಅರ್ಹರಾಗಿದ್ದು ರೆಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ https://www.cowin.gov.in/  ಇಲ್ಲಿಗೆ ಭೇಟಿ ಕೊಟ್ಟು ನೊಂದಣಿ ಮಾಡಿಕೊಳ್ಳಿ. ಮತ್ತೊಂದು ಮುಖ್ಯ ಸಂಗತಿ ಗಮನಿಸಿ CoWin ಆ್ಯಪ್ ಸಾರ್ವಜನಿಕರಿಗೆ ಅಲ್ಲ. ಹೀಗಾಗಿ ಕಡ್ಡಾಯವಾಗಿ ವೆಬ್​ಸೈಟ್​ನಲ್ಲಿಯೇ ನೊಂದಾಯಿಸಿಕೊಳ್ಳಬೇಕು.

The post 15 ಗಂಟೆ ​PPE ಕಿಟ್​​ ಧರಿಸಿದ ವೈದ್ಯನ ಸ್ಥಿತಿ ನೋಡಿ: ದಯವಿಟ್ಟು ಲಸಿಕೆ ಹಾಕಿಸಿಕೊಳ್ಳಿ-ಇದು ವಾರಿಯರ್​ ಮನವಿ appeared first on News First Kannada.

Source: newsfirstlive.com

Source link