ನವದೆಹಲಿ: ಕಳೆದ 15 ದಿನಗಳ ಅಂತರದಲ್ಲಿ ಆಫ್ರಿಕಾ ದೇಶಗಳಿಂದ ಮುಂಬೈಗೆ ಬರೋಬ್ಬರಿ 1000 ಮಂದಿ ಆಗಮಿಸಿದ್ದಾರೆ ಅನ್ನೋ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಮುಂಬೈ ಸಿವಿಕ್ ಬಾಡಿ ಸಂಗ್ರಹಿಸಿರುವ ಮಾಹಿತಿ ಪ್ರಕಾರ ಒಟ್ಟು 1000 ಮಂದಿ ಆಫ್ರಿಕಾ ದೇಶಗಳಿಂದ ಮುಂಬೈಗೆ ಬಂದಿಳಿದಿದ್ದಾರೆ. ಮುಂಬೈ ಸಿವಿಕ್ ಬಾಡಿ ಇದುವರೆಗೆ ಒಟ್ಟು 100 ಪ್ರಯಾಣಿಕರ ಸ್ವ್ಯಾಬ್ ಟೆಸ್ಟ್ ಮಾಡಿಸಿದೆ ಎಂದು ತಿಳಿದುಬಂದಿದೆ.
ಬಿಎಂಸಿ ಹೆಚ್ಚುವರಿ ಆಯುಕ್ತ ಸುರೇಶ್ ಕಕನೈ ನೀಡಿರುವ ಮಾಹಿತಿ ಪ್ರಕಾರ.. ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, 15 ದಿನಗಳ ಅಂತರದಲ್ಲಿ 1000 ಮಂದಿ ಪ್ರಯಾಣಿಕರು ಆಗಮಿಸಿದ್ದಾರೆ. ಅವರಲ್ಲಿ 466 ಮಂದಿಯ ಪಟ್ಟಿಯನ್ನ ಬಿಎಂಸಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
466 ಪ್ರಯಾಣಿಕರ ಪಟ್ಟಿಯಲ್ಲಿ 100 ಪ್ರಯಾಣಿಕರು ಮುಂಬೈನಲ್ಲಿ ಇದ್ದಾರೆ. ಅವರೆಲ್ಲರ ಸ್ವ್ಯಾಬ್ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಲಾಗಿದೆ. ವರದಿಯನ್ನ ನಿರೀಕ್ಷೆ ಮಾಡುತ್ತಿದ್ದೇವೆ, ವರದಿ ಬಳಿಕವೇ ನಗೆಟಿವ್ ಹಾಗೂ ಪಾಸಿಟಿವ್ ಎಂದು ತಿಳಿಯಲಿದೆ ಎಂದಿದ್ದಾರೆ.
The post 15 ದಿನಗಳಲ್ಲಿ 1,000 ಪ್ರಯಾಣಿಕರು ಆಫ್ರಿಕಾದಿಂದ ಮುಂಬೈಗೆ ಆಗಮನ..! appeared first on News First Kannada.