ಬೆಂಗಳೂರು: ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡುತ್ತಿದ್ದ  ಹವಾಲಾ ಅಕ್ರಮ ದಂಧೆಯೊಂದನ್ನ ಸಿಐಡಿ ಭೇದಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಕಿಂಗ್​ಪಿನ್ ಅನಸ್ ಅಹ್ಮದ್ ಎಂಬಾತನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬರೋಬ್ಬರಿ 290 ಕೋಟಿ ಮೌಲ್ಯದ ಹವಾಲಾ ದಂಧೆ ಬೆಳಕಿಗೆ ಬಂದಂತಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಆದಾಯ ನೀಡುವುದಾಗಿ ಸಾರ್ವಜನಿಕರಿಂದ ಆರೋಪಿಗಳು ಹಣ ಹೂಡಿಕೆ ಮಾಡಿಸಿಕೊಳ್ತಿದ್ರು. ಇದಕ್ಕಾಗಿಯೇ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹಣ ಹೊಡಿಕೆ ಮಾಡಿಕೊಳ್ಳುವಂತಹ ಅಪ್ಲಿಕೇಷನ್ ತಯಾರಿಸಿ ಆರಂಭಿಕವಾಗಿ ಹೂಡಿಕೆದಾರರಿಗೆ ಸಣ್ಣ ಪ್ರಮಾಣದಲ್ಲಿ ಬಡ್ಡಿ ಪಾವತಿ ಮಾಡ್ತಿದ್ರು.. ಹೆಚ್ಚು ಹೊಡಿಕೆ ಆದ ನಂತರ ಬಡ್ಡಿ ನೀಡದೆ ಹೊಡಿಕೆ  ಹಣವನ್ನು ಶೇಲ್/ ಬೇನಾಮಿ ಕಂಪನಿಗಳನ್ನ ತೆರೆಯುತ್ತಿದ್ರು ಎನ್ನಲಾಗಿದೆ.

ಚೀನಾ ಮೂಲದ ವ್ಯಕ್ತಿ & ಟಿಬೆಟ್ ಪ್ರಜೆಗಳು ಬ್ಯಾಂಕ್ ಖಾತೆ, ಕಂಪನಿ ತೆರೆದು.. ಅವರು ಬಂಧನಕ್ಕೊಳಗಾಗಿರುವ ಅನಸ್ ಅಹ್ಮದ್ ಚೈನಾ ಹವಾಲಾ ಏಜೆಂಟ್ ರೊಂದಿಗೆ ಸಂಪರ್ಕದಲ್ಲಿ ಇರುತ್ತಿದ್ದರಂತೆ. ಅಕ್ರಮ ಹಣ ವರ್ಗವಣೆ ಸಲುವಾಗಿ ಬುಲ್ ಫಿಂಚ್ ಟೆಕ್ನಾಲಜೀಸ್‌, ಹೆಚ್ ಆ್ಯಂಡ್ ಎಸ್ ವೈಚರ್ಸ್ ,ಕ್ಲಿಪೋಡ್‌ ವೆಂಚರ್ಸ್ ಹೆಸರಿನ ಕಂಪನಿಗಳನ್ನೇ ಈ ಆಸಾಮಿಗಳು ತೆರೆದಿದ್ದರು ಎನ್ನಲಾಗಿದೆ.

ತನಿಖೆಯ ವೇಳೆ ಆರೋಪಿಯ ಕಂಪನಿಗೆ 290 ಕೋಟಿ ಮೌಲ್ಯ ಹಣ ಹೂಡಿಕೆ ಆಗಿರುವುದು ಪತ್ತೆಯಾಗಿದೆ. ಸಾರ್ವಜನಿಕರಿಂದ ಹೂಡಿಕೆ ಮಾಡಿಕೊಂಡ ನಂತರ ಬಡ್ಡಿ ‌ನೀಡದೆ ಪ್ಲೇ ಸ್ಟೋರ್ ನಲ್ಲಿ ಆರೋಪಿಗಳು ಬಡ್ಡಿ ನೀಡುವ ಆ್ಯಪ್ ಅನ್ನು‌ uninstall ಮಾಡುತ್ತಿದ್ರಂತೆ.

ಕೊರೊನಾ ಸಂಕಷ್ಟ ಸಮಯದಲ್ಲಿ ಹೆಚ್ಚಿನ ಜನರು ಈ ಕಂಪನಿಗಳಲ್ಲಿ ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ. 15 ಲಕ್ಷ ಮಂದಿಗೆ ಸುಮಾರು 250 ಕೋಟಿಗೂ ಹೆಚ್ಚು ವಂಚನೆ ಆಗಿರುವುದಕ್ಕೆ ದಾಖಲೆ ಪತ್ತೆಯಾಗಿದೆ. ಕಂಪನಿ ಹಾಗೂ ಗ್ರಾಹಕರಿಗೆ ಹಣ ವರ್ಗಾವಣೆ ಮಧ್ಯವರ್ತಿಯಾಗಿ ರೇಜೋರ್ ಪೇ ಬಳಸುತ್ತಿದ್ರು ಎನ್ನಲಾಗಿದೆ.

ರೇಜೋರ್ ಪೇ ಕಂಪನಿ ದೂರಿನ ಮೇರೆಗೆ ಸಿಐಡಿ ಸೈಬರ್ ಕ್ರೈಮ್ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು CID SP ಶರತ್ ನೇತೃತ್ವದಲ್ಲಿ ಆರೋಪಿಯನ್ನ ಬಂಧಿಸಲಾಗಿದೆ.

The post 15 ಲಕ್ಷ ಮಂದಿ, 290 ಕೋಟಿ ಹಣ.. ಬ್ರಹ್ಮಾಂಡ​ ದಂಧೆಯನ್ನೇ ಬಯಲಿಗೆಳೆದ CID appeared first on News First Kannada.

Source: newsfirstlive.com

Source link