150 ಕೋಟಿ ರೂ. ಬಾಚಿದ ‘ಭೂಲ್​ ಭುಲಯ್ಯ 2’; ಬಾಲಿವುಡ್​ ಗುಂಪುಗಾರಿಕೆಗೆ ತಕ್ಕ ಉತ್ತರ ನೀಡಿದ ನಟ | Kartik Aaryan starrer Bhool Bhulaiyaa 2 movie enters Rs 150 Cr club


150 ಕೋಟಿ ರೂ. ಬಾಚಿದ ‘ಭೂಲ್​ ಭುಲಯ್ಯ 2’; ಬಾಲಿವುಡ್​ ಗುಂಪುಗಾರಿಕೆಗೆ ತಕ್ಕ ಉತ್ತರ ನೀಡಿದ ನಟ

ಕಾರ್ತಿಕ್ ಆರ್ಯನ್

Bhool Bhulaiyaa 2 Box Office Collection: ‘ಭೂಲ್​ ಭುಲಯ್ಯ 2’ ಚಿತ್ರ ಜಯಭೇರಿ ಬಾರಿಸುತ್ತಿದೆ. ಆದಷ್ಟು ಬೇಗ ಈ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್​ ಸೇರಲಿ ಎಂದು ಕಾರ್ತಿಕ್​ ಆರ್ಯನ್​ ಫ್ಯಾನ್ಸ್​ ಹಾರೈಸುತ್ತಿದ್ದಾರೆ.

ನಟ ಕಾರ್ತಿಕ್​ ಆರ್ಯನ್ (Kartik Aaryan) ಅವರಿಗೆ ಬಹುದೊಡ್ಡ ಗೆಲುವು ಸಿಕ್ಕಿದೆ. ಅವರು ಚಿತ್ರರಂಗಕ್ಕೆ ಬಂದು 10 ವರ್ಷ ಕಳೆದಿದೆ. ಈ ಒಂದು ದಶಕದಲ್ಲಿ ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿರುವುದು ‘ಭೂಲ್​ ಭುಲಯ್ಯ 2’ (Bhool Bhulaiyaa 2) ಸಿನಿಮಾದಿಂದ. ಹೌದು, ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಮೋಡಿ ಮಾಡುತ್ತಿದೆ. ಬಿಡುಗಡೆಯಾಗಿ 16 ದಿನ ಕಳೆದಿದ್ದರೂ ಕೂಡ ಈ ಸಿನಿಮಾದ ಆರ್ಭಟ ಕಮ್ಮಿ ಆಗಿಲ್ಲ. 16ನೇ ದಿನವೂ 4.55 ಕೋಟಿ ರೂಪಾಯಿ ಕಲೆಕ್ಷನ್​ (Box Office Collection) ಮಾಡಿದೆ. ಆ ಮೂಲಕ ‘ಭೂಲ್​ ಭುಲಯ್ಯ 2’ ಚಿತ್ರದ ಒಟ್ಟಾರೆ ಗಳಿಕೆ 149.11 ಕೋಟಿ ರೂಪಾಯಿ ಆಗಿದೆ. ಇಂದು (ಜೂನ್​ 5) ಭಾನುವಾರ ಆದ್ದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದಿದ್ದಾರೆ. ಅದರ ಪರಿಣಾಮವಾಗಿ ಈ ಸಿನಿಮಾ 150 ಕೋಟಿ ರೂಪಾಯಿ ಕ್ಲಬ್​ ಸೇರಿದೆ. ಇದು ಕಾರ್ತಿಕ್​ ಆರ್ಯನ್​ ಅಭಿಮಾನಿಗಳಿಗೆ ಸಖತ್​ ಖುಷಿ ನೀಡಿದೆ.

ಬಾಲಿವುಡ್​ನ ಕೆಲವರು ಕಾರ್ತಿಕ್​ ಆರ್ಯನ್​ ವಿರುದ್ಧ ಸಂಚು ರೂಪಿಸಿದ್ದಾರೆ ಎಂಬ ಮಾತಿದೆ. ಕಾರ್ತಿಕ್​ ಆರ್ಯನ್​ಗೆ ಸಿಗಬೇಕಿದ್ದ ಹಲವು ಆಫರ್​ಗಳು ಹಿಂದಿ ಚಿತ್ರರಂಗದ ಕೆಲವು ಪ್ರಭಾವಿ ವ್ಯಕ್ತಿಗಳಿಂದಾಗಿ ತಪ್ಪಿ ಹೋಗಿವೆ. ಮೂವೀ ಮಾಫಿಯಾದವರ ಗುಂಪುಗಾರಿಕೆಯ ಕಾರಣದಿಂದ ಅವರನ್ನು ಸೈಡ್​ ಲೈನ್​ ಮಾಡಲಾಗಿದೆ. ದೊಡ್ಡ ದೊಡ್ಡ ಪ್ರೊಡಕ್ಷನ್​ ಹೌಸ್​ಗಳು ಕಾರ್ತಿಕ್​ ಆರ್ಯನ್​ಗೆ ಅವಕಾಶ ನೀಡುತ್ತಿಲ್ಲ ಎಂಬ ಮಾತಿದೆ. ಈ ಎಲ್ಲ ತಿರಸ್ಕಾರದ ನಡುವೆಯೂ ಕಾರ್ತಿಕ್​ ಆರ್ಯನ್​ ಅವರು ಗೆದ್ದು ತೋರಿಸಿದ್ದಾರೆ.

TV9 Kannada


Leave a Reply

Your email address will not be published.