ಇಲ್ಲೊಂದು ಜೋಡಿ 150 ರೂಪಾಯಿ ಖರ್ಚಿನಲ್ಲಿ ಮದುವೆ ಆಗಿ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ. ಹೀಗೆ ಸಿಂಪಲ್ ಆಗಿ ಬಾಳ ಬಂಧನಕ್ಕೆ ಒಳಗಾಗಿರುವುದು ಕಿರುತರೆ ಖ್ಯಾತಿಯ ನಟ ವಿರಾಫ್ ಪಟೇಲ್ ಮತ್ತು ನಟಿ ಸಲೋನಿ ಖನ್ನಾ ಆಗಿದ್ದಾರೆ.

 

View this post on Instagram

 

A post shared by Viraf Patell (@virafpp)

ಕಿರುತೆರೆಯಲ್ಲಿ ಹೆಚ್ಚು ಫೇಮಸ್ ಆಗಿರುವ ವಿರಾಫ್ ಪಟೇಲ್ ಮತ್ತು ಸಲೋನಿ ಖನ್ನಾ ಪರಸ್ಪರ ಪ್ರೀತಿಸುತ್ತಿದ್ದರು. ಫೆಬ್ರವರಿಯಲ್ಲಿ ಈ ಜೋಡಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದಕ್ಕಿಂತಲೂ ಅದ್ದೂರಿಯಾಗಿ ಮದುವೆ ಆಗಬೇಕು ಎಂಬುದು ವಿರಾಫ್ ಪಟೇಲ್ ಮತ್ತು ಸಲೋನಿ ಖನ್ನಾ ಅವರ ಆಸೆ ಆಗಿತ್ತು. ಆದರೆ ಅದಕ್ಕೆ ಕೊರೊನಾ ಅವಕಾಶ ನೀಡಿಲ್ಲ. ಅದರ ಬದಲು ಸದ್ಯದ ಪರಿಸ್ಥಿತಿಗೆ ತಕ್ಕಂತೆ ಸಿಂಪಲ್ ಮದುವೆಯನ್ನೇ ಈ ಸೆಲೆಬ್ರಿಟಿಗಳು ಆಯ್ಕೆ ಮಾಡಿಕೊಂಡಿದ್ದಾರೆ.

 

View this post on Instagram

 

A post shared by Saloni Khanna Patel (@salk.04)

ಮೇ 6ರಂದು ದಿಢೀರ್ ಎಂದು ವಿರಾಫ್ ಪಟೇಲ್ ಮತ್ತು ಸಲೋನಿ ಖನ್ನಾ ಬಾಳ ಬಂಧನಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಚ್ಚರಿ ಎಂದರೆ ಮದುವೆಯ ಉಂಗುರದ ಬದಲಿಗೆ ಪತ್ನಿಗೆ ರಬ್ಬರ್ ಬ್ಯಾಂಡ್ ನೀಡಿದ್ದಾರಂತೆ. ವಿರಾಫ್ ಹೊಸ ಸೀರೆ ಖರೀದಿಸುವ ಸಂಭ್ರಮ ಇಲ್ಲ. ವಧುವಿನ ಸೀರೆಯನ್ನು ಬಾಡಿಗೆಗೆ ತರಲಾಗಿದೆ. ಸ್ನೇಹಿತರೇ ಸೇರಿಕೊಂಡು ಮೇಕಪ್ ಮತ್ತು ಕೇಶ ವಿನ್ಯಾಸ ಮಾಡಿದ್ದಾರೆ. ಒಟ್ಟು ಈ ಮದುವೆಗೆ ಅತಿಥಿಗಳಾಗಿದ್ದವರು ಮೂರು ಜನರ ಮಾತ್ರ. ಇನ್ನುಳಿದ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತ್ರ ಈ ಮದುವೆಯನ್ನು ನೋಡುವ ಅವಕಾಶ ಕಲ್ಪಿಸಲಾಯಿತು. ಒಂದು ಗಂಟೆಯಲ್ಲಿ ಮದುವೆ ಮುಗಿಯಿತು.

 

View this post on Instagram

 

A post shared by Saloni Khanna Patel (@salk.04)

ಈ ಸಿಂಪಲ್ ವಿವಾವಹಕ್ಕೆ ಆದ ಖರ್ಚು ಕೇವಲ 150 ರೂಪಾಯಿ ಎಂದು ಸಲೋನಿ ಖನ್ನಾ ತಿಳಿಸಿದ್ದಾರೆ. ಇದು ಪರ್ಫಕ್ಟ್ ಮ್ಯಾರೇಜ್. ಪೈಸಾ ವಸೂಲ್ ಆಯ್ತು, ಮದುವೆ ಒಪ್ಪಿಗೆ ಆಯ್ತು ಎಂಬ ಕ್ಯಾಪ್ಷನ್‍ನೊಂದಿಗೆ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

The post 150 ರೂ. ಖರ್ಚಿನಲ್ಲಿ ಮದುವೆಯಾದ ಕಿರುತೆರೆ ನಟ appeared first on Public TV.

Source: publictv.in

Source link