ಆತ ಸುಯ್ ಅಂತಾ ಹೀಗೆ ಬರುತ್ತಿದ್ದ, ಮತ್ತೆ ಅದೇ ಸ್ಪೀಡ್​​ನಲ್ಲಿ ಇನ್ನೊಂದು ಕಡೆ ಹೋಗಿ ಬಿಡುತ್ತಿದ್ದ. ಬರೋದು ಗೊತ್ತಾಗ್ತಾಯಿರಲಿಲ್ಲ. ಹೋಗೋದು ಗೊತ್ತಾಗ್ತಾಯಿರಲಿಲ್ಲ. ಯಾವಾಗ ಬರ್ತಾನೆ. ಎಲ್ಲಿಂದ ಬರ್ತಾನೆ ಅನ್ನೋದು ಕೂಡ ತಿಳಿತಿರಲಿಲ್ಲ. ಲಾಕ್ ಡೌನ್ ಸಡಿಲಿಕೆ ಆದಮೇಲೆ ಮತ್ತೆ ಎನಿ ಟೈಮ್ ಬರ್ತಾನಂತೆ. ಹಾಗಾದ್ರೆ ಯಾರವನು? ಬಂದು ಹೋಗೋದ್ರೊಳಗೆ ಏನ್ ಮಾಡ್ತಾನೆ? ಅದನ್ನ ಕೇಳಿದ್ರೆ ನೀವು ಫುಲ್ ಅಲರ್ಟ್​ ಆಗ್ತೀರಾ.

ಈಗೇನಿದ್ರೂ ಲಾಕ್​ಡೌನ್​ ಸಡಿಲಿಕೆ ಆಗಿರೋ ವಿಚಾರನೇ ಎಲ್ಲಾ ಕಡೆ ಸದ್ದು ಮಾಡ್ತಾಯಿರೋದು. ಅನ್​ಲಾಕ್ ಮಾಡ್ತಿವಿ ಅಂತಾ ಸರ್ಕಾರ ಘೋಷಣೆ ಮಾಡುತ್ತಿದ್ದಂತೆ ಸಂಬಂಧ ಪಟ್ಟ ಎಲ್ಲಾ ಇಲಾಖೆಗಳು ತಮ್ಮದೇ ಆದ ರೀತಿಯಲ್ಲಿ ಸಿದ್ದತೆಗಳನ್ನ ಮಾಡಿಕೊಳ್ಳಲು ಆರಂಭಿಸಿತ್ತು. ಅದೇ ಬಸ್​​ಗಳು ಓಡಾಟಕ್ಕೂ ಮುನ್ನ ಅದ ಎಫ್ ಸಿ ಚೆಕ್ ಮಾಡ್ತಾರಲ್ಲ ಹಾಗೆ. ಅದೇ ರೀತಿ ಪೊಲೀಸ್ ಇಲಾಖೆಯಲ್ಲಿಯೂ ಕೂಡ ಎಲ್ಲಾ ರೀತಿಯ ಸಿದ್ದತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಸಿದ್ಧತೆ ಮಾಡಿಕೊಳ್ಳುವಾಗಲೇ ಒಂದು ಅಚ್ಚರಿ ಬಿಳಿಸೋ ಸುದ್ದಿ ಹೊರ ಬಿದ್ದಿದ್ದು.

ಲಾಕ್​​ಡೌನ್​ ಸಂದರ್ಭದಲ್ಲಿ ಎಲ್ಲವೂ ಸ್ತಬ್ಧಗೊಂಡಿತ್ತು. ಅದೇ ರೀತಿ ಕ್ರೈಮ್​ ರೇಟ್​​ನಲ್ಲಿ ಸಾಕಷ್ಟು ಇಳಿಮುಖ ಆಗಿತ್ತು. ಎಲ್ಲೋ ಅಲ್ಲೊಂದು ಇಲ್ಲೊಂದು ಕೇಸ್​​ಗಳು ಆಗ್ತಾಯಿತ್ತು. ಅದನ್ನ ಬಿಟ್ಟರೆ ಎಲ್ಲದಕ್ಕೂ ಫುಲ್ ಸ್ಟಾಪ್ ಬಿದ್ದಿತ್ತು. ಆದ್ರೆ ಅನ್​ಲಾಕ್​​ನಿಂದ ಗೂಡು ಸೇರಿಕೊಂಡಿರೋ ಕಿಲಾಡಿಗಳು ಹೊರಗಡೆ ಬರೋ ಸಾಧ್ಯತೆ ದಟ್ಟವಾಗಿದೆ. ಅದೇ ಕಾರಣಕ್ಕಾಗಿ ಪೊಲೀಸ್ ಅಧಿಕಾರಿಗಳು ಮೀಟಿಂಗ್ ಮಾಡಿ ಲಾಕ್​ಡೌನ್​ಗೂ ಮುನ್ನ ಯಾವೆಲ್ಲ ಪ್ರಕರಣಗಳು ಆಗಿತ್ತು, ಅದರಲ್ಲಿ ಯಾವ ಪ್ರಕರಣ ಬಾಕಿ ಇದೆ ಅನ್ನೋದರ ಬಗ್ಗೆ ಮಾಹಿತಿ ಕಲೆ ಹಾಕೋಕೆ ಮುಂದಾಗಿತ್ತು ಇಲಾಖೆ. ಹೀಗೆ ಕೆಲ ಫೈಲ್​​ಗಳನ್ನ ಓಪನ್ ಮಾಡಿ ಅದರ ಬಗ್ಗೆ ಸ್ಟಡಿ ಮಾಡೋಕೆ ಮುಂದಾದಗ ಒಂದೇ ಒಂದು ಫೈಲ್ ಮಾತ್ರ ಇಲಾಖೆಗೆ ಅಚ್ಚರಿ ಮೂಡಿಸಿತ್ತು.

ಈಗ ನಿಮಗೆ ಅನ್ನಿಸುತ್ತಿರಬೋದು ಯಾಕೆ ಪೊಲೀಸರಿಗೆ ಅಷ್ಟೊಂದು ಅಚ್ಚರಿ ಕಾದಿತ್ತು ಅಂತಾ. ಅದಕ್ಕೊಂದು ಕಾರಣಕ್ಕಾಗಿ ಪೊಲೀಸರಿಗೆ ಅಚ್ಚರಿ ಆಗಿತ್ತು ಅನ್ನೋ ಮಾಹಿತ ಲಭ್ಯವಾಗಿದೆ. ಪೊಲೀಸರೇ ಅಚ್ಚರಿ ಆಗ್ತಾರೆ ಇದ್ಯಾವುದೋ ದೊಡ್ಡ ಗ್ಯಾಂಗ್ ಬಗ್ಗೆ ಇರಬೇಕು ಅಥವಾ ದೊಡ್ಡ ಪ್ರಕರಣವೇ ಇರಬಹುದು ಅಂತಾ ಅನ್ನಿಸುತ್ತಿರಬೋದು. ಆದ್ರೆ ಇದು ದೊಡ್ಡ ಗ್ಯಾಂಗ್ ಅಲ್ಲಾ ಬದಲಾಗಿ ದೊಡ್ಡ ಪ್ರಕರಣವೇ..

ಏಕಾಂಗಿ ಹೋರಾಟಕ್ಕೆ ಪೊಲೀಸ್ ಇಲಾಖೆ ಶಾಕ್​​

ಹೌದು.. ಇಲ್ಲಿ ಗ್ಯಾಂಗ್ ಇಲ್ಲಾ ಬದಲಾಗಿ ಒಬ್ಬನ ಏಕಾಂಗಿ ಹೋರಾಟಕ್ಕೆ ಪೊಲೀಸ್ ಇಲಾಖೆ ಶಾಕ್ ಆಗಿದೆ. ಯಾವಾಗ ಆತನ ವಿಚಾರವನ್ನ ತುಳಿದುಕೊಳ್ಳಲು ಕೆಲ ಪೊಲೀಸರು ಮುಂದಾದ್ರೋ ಆಗಲೇ ನೋಡಿ ಕೆಲವೊಂದು ಅಚ್ಚರಿ ವಿಚಾರಗಳು ಪೊಲೀಸರಿಗೆ ಗೊತ್ತಾಗಿದ್ದು.

40 ಪೊಲೀಸ್ ಠಾಣೆ, 70 ಕಡೆ ಕೃತ್ಯ

ಹೌದು .. ಮೊದಲಿಗೆ ಈ ಸಿಸಿಟಿವಿ ಫುಟೇಜ್ ಅನ್ನ ಒಮ್ಮೆ ನೋಡಿಕೊಂಡು ಬಿಡಿ. ಈಗ ನಿಮಗೆ ಅನ್ನಿಸಿರಬೋದು. ಈತ ಚೈನ್ ಸ್ನ್ಯಾಚರ್ ಅನ್ನೋದು. ಹೌದು ಇವತ್ತು ಪೊಲೀಸ್ ಇಲಾಖೆ ತಲೆ ಕೆಡಿಸಿಕೊಂಡಿರೋದು ಈತನಿಗೋಸ್ಕರಾನೇ. ಯಾಕಂದ್ರೆ ಈತ ಮಾಡಿರೋ ಪ್ರಕರಣಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆದುಕೊಂಡು ಹೋಗುತ್ತಲೇ ಇದೆ. ನೀವು ನಂಬದೇ ಇದ್ದರೂ ಒಬ್ಬನೇ ಏಕಾಂಗಿಯಾಗಿ ಯಾರ ಸಪೋರ್ಟ್ ಇಲ್ಲದೆ ಸುಮಾರು ಬೆಂಗಳೂರಿನ 40 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ 70 ಕಡೆ ತನ್ನ ಕೃತ್ಯವನ್ನ ಎಸಗಿ ಎಸ್ಕೇಪ್ ಆಗಿದ್ದಾನೆ.

ಎರಡು ವರ್ಷಗಳಿಂದ ಕೃತ್ಯದಲ್ಲಿ ಭಾಗಿ

2019 ರಿಂದ ಬೆಂಗಳೂರಿನ ನಾನಾ ಭಾಗಗಳಲ್ಲಿ ಹೀಗೆ ಬಂದು ಹಾಗೆ ತನ್ನ ಕೈಚಳಕವನ್ನ ತೋರಿಸಿ ಮಂಗಮಾಯ ಆಗುತ್ತಿದ್ದ. ಹೀಗೆ ಕಳೆದ ಎರಡು ವರ್ಷಗಳಿಂದ ಸುಮಾರು 70 ಕ್ಕೂ ಹೆಚ್ಚು ಚೈನ್ ಸ್ನ್ಯಾಚ್ ಪ್ರಕರಣಗಳಲ್ಲಿ ಈತನ ಕೈವಾಡ ಇದ್ಯಂತೆ. ಯಾಕಂದ್ರೆ ಮೋಡಸ್ ಅಪರೆಂಡಿ ಒಂದೇ ತರ ಇದ್ದಿರೋದ್ರಿಂದ ಈತನೇ ಮಾಡಿರೋದು ಅನ್ನೋದು ಪೊಲೀಸ್ ಇಲಾಖೆಗೆ ಬಹುತೇಕ ಖಚಿತವಾಗಿದೆ. ಈತ ಒಬ್ಬನ ಕೈವಾಡವೇ ಇದು ಅನ್ನೋದು ಪೊಲೀಸರಿಗೆ ಪತ್ತೆ ಹಚ್ಚೋದು ದೊಡ್ಡ ವಿಚಾರವೇನಿಲ್ಲ. ಆದ್ರೆ

ಒಮ್ಮೆಯೂ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳದ ಕಿಲಾಡಿ

2019 ರಿಂದ ಬೆಂಗಳೂರಿನ ನಾನಾ ಪೊಲೀಸ್ ಠಾಣೆ ವ್ಯಾಪ್ತಿಗಳನ್ನ ತನ್ನ ಕೈಚಳಕವನ್ನ ತೋರಿಸಿ ಎಸ್ಕೇಪ್ ಆಗಿರೋ ಈತ ಒಂದು ದಿನಕ್ಕೂ ಪೊಲೀಸರ ಕೈಗೆ ತಗ್ಲಾಕ್ಕೊಂಡಿಲ್ಲವಂತೆ. ಅಷ್ಟೇ ಯಾಕೆ ಸಾರ್ವಜನಿಕರ ಕೈಗೂ ಕೂಡ ಈತ ಸಿಕ್ಕಿಹಾಕಿಕೊಂಡಿಲ್ಲವಂತೆ. ಇದೇ ಕಾರಣಕ್ಕಾಗಿ ಲಾಕ್​ಡೌನ್ ಸಡಿಲಿಕೆ ಆದ ಮೇಲೆ ಪೊಲೀಸರು ಯಾರನ್ನ ಹಿಡಿಬೇಕು ಅಂತಾ ಕೆದಕೋಕೆ ಹೋದಾಗ ಆತನ ಜನ್ಮ ಬಯಲಾಗಿರೋದು.

ಎಲ್ಲಿಯವನು ಈ ಖರ್ತರ್ನಾಕ್ ಕಿಲಾಡಿ

ಈ ಪ್ರಶ್ನೆಗೆ ಉತ್ತರವನ್ನ ಕಂಡುಕೊಳ್ಳಲು ಪೊಲೀಸರ ಈ ಹಿಂದೆ ಮುಂದಾಗಿದ್ದರು. ಆಗಲೇ ನೋಡಿ ಆತ ಪಕ್ಕದ ರಾಜ್ಯ ತಮಿಳುನಾಡಿನ ಹೊಸೂರಿನವನು ಅನ್ನೋದು ಗೊತ್ತಾಗಿದ್ದು. ಹೊಸೂರಿನಿಂದ ಬೆಂಗಳೂರಿಗೆ ಬಂದು ಏರಿಯಾ ಏರಿಯಾಗಳಲ್ಲಿ ಸುತ್ತಾಡಿ ಒಬ್ಬಂಟಿಯಾಗಿ ಓಡಾಡುತ್ತಿರೋ ಮಹಿಳೆಯರ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನ ಕಿತ್ತಿಕೊಂಡು ಪರಾರಿಯಾಗುತ್ತಿದೆ. ಈತನ ಬಗ್ಗೆ ಮಾಹಿತಿಯನ್ನ ಪೊಲೀಸರು ಕೆಲ ಹಾಕೋದಕ್ಕೆ ಮುಂದಾದಗ ಆಗಲೇ ನೋಡಿ ಈತ ಹೊಸೂರು ಮೂಲದವನು ಅನ್ನೋದು ತಿಳಿದು ಬಂದಿದ್ದು.

ಬರುತ್ತಿದ್ದದ್ದು ಹೇಗೋ? ಕೃತ್ಯ ಮಾತ್ರ ಬೈಕ್​ನಲ್ಲಿ ..

ತಮಿಳುನಾಡು ರಾಜ್ಯದಿಂದ ಬೆಂಗಳೂರಿಗೆ ಎಂಟ್ರಿ ಕೊಡುತ್ತಿದ್ದ ಕಿಲಾಡಿ, ಬೆಂಗಳೂರಿಗೆ ಬರುತ್ತಿದ್ದಂತೆ ಆತನ ಕೈಗೆ ಪಲ್ಸರ್​ ಬೈಕ್ ಸಿಕ್ಕಿ ಬಿಡುತ್ತಿತ್ತು. ಅದನ್ನೆ ಎತ್ತಿಕೊಂಡು ಹೋಗಿ ಕೃತ್ಯವನ್ನ ವೆಸಗುತ್ತಿದ್ದ. ಆದ್ರೆ ಈತ ಬರುತ್ತಿದ್ದದ್ದು ಹೊಸುರಿನಿಂದ ಅನ್ನೋದು ಗೊತ್ತಿದ್ದರು ಕೂಡ ಆತ ಹೇಗೆ ಬರುತ್ತಿದ್ದ ಅನ್ನೋದು ಮಾತ್ರ ಇಲ್ಲಿಯವರೆಗು ಗೊತ್ತಾಗಿಲ್ಲ. ಅಲ್ಲದೇ ಬೆಂಗಳೂರಿಗೆ ಬಂದ ಬಳಿಕೆ ಈತ ಓಡಾಡುತ್ತಿದ್ದದ್ದೇ ಬ್ಲಾಕ್ ಕಲರ್ ಪಲ್ಸರ್​ ಬೈಕ್​ನಲ್ಲಿ. ಆದ್ರೆ ಈ ಬೈಕ್ ಹೇಗೆ ಈತನ ಕೈಗೆ ಸಿಗುತ್ತಿತ್ತು ಅನ್ನೋದೆ ಕೂತುಹಲ.

ಕೃತ್ಯವೆಸಗಿ ಬೈಕ್​ ಎಲ್ಲೆಂದರಲ್ಲೇ ನಿಲ್ಲಿಸುತ್ತಿದ್ದ

ಹೌದು.. ಹೊಸೂರಿನಿಂದ ಬಂದು ಬೆಂಗಳುರಿನಲ್ಲಿ ತನ್ನ ಕೈ ಚಳಕ ತೋರಿಸುತ್ತಿದ್ದ ಆ ಕಿಲಾಡಿ ನಂತರ ಕೃತ್ಯ ವೆಸಗಿ ವಾಪಸ್ ತೆರಳುವಾಗ ಬೈಕ್ ಅನ್ನ ಎಲ್ಲಂದರಲ್ಲೇ ಪಾರ್ಕ್ ಮಾಡಿ ಮತ್ತೆ ವಾಪಸ್ ತನ್ನ ಊರು ಸೇರಿಕೊಳ್ಳುತ್ತಿದ್ದ. ಆದ್ರೆ ಒಂದು ಕಡೆ ಒಂದು ಪಾರ್ಕ್ ಮಾಡಿದ ಮೇಲೆ ಮತ್ತೊಂದು ಬಾರಿ ಅದೇ ಜಾಗದಲ್ಲಿ ಬೈಕ್ ಅನ್ನ ಪಾರ್ಕ್ ಮಾಡುತ್ತಿರಲಿಲ್ಲ. ಇದು ಪೊಲೀಸರಿಗೆ ಒಂದು ಲೆಕ್ಕಚಾರದಲ್ಲಿ ತಲೆ ನೋವು ತಂದಿಟ್ಟಿರೋದಂತು ಸತ್ಯ.

ಕೃತ್ಯಕ್ಕೊಂದು ಬೈಕ್ ನಂಬರ್ ಪ್ಲೇಟ್ ಚೇಂಜ್​

ಇನ್ನು ಈತನ ಬಗ್ಗೆ ಮಾಹಿತಯನ್ನ ಕಲೆ ಹಾಕಿದ್ದ ಪೊಲೀಸರಿಗೆ ಕೃತ್ಯ ನಡೆದ ಜಾಗದಲ್ಲಿದ್ದ ಕೆಲ ಸಿಸಿಕ್ಯಾಮೆರಾಗಳ ದೃಶ್ಯಾವಳನ್ನ ಪಡೆದುಕೊಂಡು ಪರಿಶೀಲನೆ ನಡೆಸಿದ್ದರು. ಏನಾದ್ರೂ ಕ್ಲೂ ಸಿಕ್ಕಿ ಬಿಡುತ್ತೆ ಅಂದುಕೊಂಡಿದ್ದ ಪೊಲೀಸರಿಗೆ ಅಲ್ಲೂ ಅಚ್ಚರಿಯೊಂದು ಕಾದಿತ್ತು. ಅದು ಏನಂದ್ರೆ ಒಂದು ಬಾರಿ ಬೈಕ್ ನಲ್ಲಿ ಒಂದು ನಂಬರ್ ಪ್ಲೇಟ್ ಅನ್ನ ಹಾಕಿಕೊಂಡು ಬರುತ್ತಿದ್ದ ಕಿಲಾಡಿ, ಕೃತ್ಯ ಮಗಿದ ಬಳಿ ನಂಬರ್ ಪ್ಲೇಟ್ ಅನ್ನ ಚೇಂಜ್ ಮಾಡುತ್ತಿದ್ದ. ಅಂದ್ರೆ ದಿನಕ್ಕೆ ಮೂರು ಕಡೆ ಚೈನ್ ಸ್ನ್ಯಾಚ್ ಮಾಡಿದ್ರೂ ಕೂಡ ಮೂರು ಬಾರಿ ಬೈಕ್​ ನಂಬರ್​ ಪ್ಲೇಟ್​ ಚೇಂಜ್ ಮಾಡುತ್ತಿದ್ದ. ಇದು ಒಂದೇ ಏರಿಯಾದಲ್ಲಿ ಮೂರು ಕಡೆ ಒಂದೇ ದಿನ ಕೃತ್ಯ ನಡೆದಿತ್ತು. ಆಗ ಮೂರು ಕಡೆಯ ಸಿಸಿಕ್ಯಾಮೆರಾ ದೃಶ್ಯಗಳನ್ನ ಪಡೆದುಕೊಂಡು ಪರಿಶೀಲನೆ ನಡೆಸಿದ್ದಾಗ ಈ ವಿಚಾರ ಬಹಿರಂಗ ಗೊಂಡಿತ್ತು. ಅಲ್ಲದೇ ಬೇರೆ ಬೇರೆ ಕಡೆ ವಿಚಾರಣೆ ಮಾಡಿದಾಗ ವ್ಯಕ್ತಿ ಅವನೇ, ಬೈಕ್ ಅದೇ ನಂಬರ್​ ಪ್ಲೇಟ್​ಗಳು ಚೇಂಜ್ ಆಗಿತ್ತು. ಇದು ತನಿಖೆಯ ಸಂದರ್ಭದಲ್ಲಿ ಪೊಲೀಸರಿಗೆ ತಿಳಿದು ಬಂದಿದೆ.

ಬೈಕ್ ರೇಸರ್ ರೀತಿಯಲ್ಲಿ ಬೈಕ್ ಓಡಿಸುತ್ತಿದ್ದ

ಇನ್ನು ಈತ ಯಾಕೆ ಯಾರ ಕೈಗೂ ಸಿಗುತ್ತಿರಲಿಲ್ಲ ಅನ್ನೋದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕೋದಕ್ಕೆ ಮುಂದಾಗಿದ್ದರು. ಆಗಲೇ ನೋಡಿ ಆತನನ್ನ ದೂರದಿಂದಲೇ ನೋಡಿದ್ದ ಪೊಲೀಸರು ಮಾಹಿತಿಯನ್ನ ನೀಡಿದ್ದರು. ಆತ ಹೀಗೆ ಬಂದು ಹಾಗೆ ಕೃತ್ಯವನ್ನ ವೆಸಗಿ ಎಸ್ಕೇಪ್ ಆಗ್ತಾಯಿದ್ದನಂತೆ. ಕೃತ್ಯವೆಸಗುತ್ತಿದ್ದಂತೆ ಬೈಕ್ ಸ್ಪೀಡ್ ಎಷ್ಟಿರುತ್ತೊ ಅಷ್ಟೇ ಸ್ಪೀಡ್​​ ಆಗಿ ಬರುತ್ತಿದ್ದನಂತೆ. ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಮಿನಿಮಮ್ 100 ಕಿಮಿ ವೇಗದಲ್ಲಿ ಬಂದು ಹೋಗುತ್ತಿದ್ದನಂತೆ. ಹೇಳಬೇಕು ಅಂದ್ರೆ ಬೈಕ್ ರೇಸ್​ನಲ್ಲಿ ಯಾವ ರೀತಿ ರೇಸರ್​ಗಳು ಓಡಿಸುತ್ತಾರೋ ಹಾಗೆ ಈತ ಸಿಟಿಯಲ್ಲಿ ಬೈಕ್ ಓಡಿಸುತ್ತಿದ್ದನಂತೆ.

ಎರಡು ಬಾರಿ ಲೊಕೇಷನ್ ಪತ್ತೆ ಆದ್ರೂ ಲಾಕ್ ಆಗಲಿಲ್ಲ

ಹೌದು. ಲಾಕ್​ಡೌನ್​ ಮುನ್ನ ಆತನನ್ನ ಹೇಗಾದ್ರು ಮಾಡಿ ಲಾಕ್ ಮಾಡಲೇ ಬೇಕು ಅಂತಾ ಪಣ ತೊಟ್ಟ ಪೊಲೀಸರು ಹೇಗೋ ಮಾಡಿ ಆತನ ಎರಡು ಮೊಬೈಲ್ ನಂಬರ್ ಅನ್ನ ಪಡೆದುಕೊಂಡಿದ್ದರು. ಆಗ ಅದರ ಆಧಾರದ ಮೇಲೆ ಲೊಕೇಶನ್ ಟ್ರೇಸ್​ ಔಟ್ ಮಾಡೋದಕ್ಕೆ ಮುಂದಾಗಿದ್ದರು. ಆಗ ಹೇಗೋ ಮಾಡಿ ಸುಮಾರು ದಿನಗಳ ಬಳಿಕ ಎರಡು ನಂಬರ್​ಗಳ ಲೊಕೇಶನ್ ರೀಚ್ ಆಗಿತ್ತು. ಒಂದು ಹೊಸೂರು ಬಾರ್ಡರ್​​ ಬಳಿ ಇನ್ನೊಂದು ತುಮಕೂರಿನ ಬಳಿ. ಆಗ ಎರಡು ಲೊಕೇಶನ್​ಗೆ ಹೋಗಿ ನೋಡೋಷ್ಟರಲ್ಲಿ ಆತ ಎಲ್ಲಿಂದ ಎಸ್ಕೇಪ್ ಆಗಿಬಿಟ್ಟಿದ್ದನಂತೆ.

164 ಪೊಲೀಸ್ ಠಾಣೆಗಳಿಗೆ ಫೋಟೋ ರವಾನೆ

ಹೌದು. ಈಗ ಲಾಕ್​ಡೌನ್ ಸಡಿಲಿಕೆ ಆಗಿರೋದ್ರಿಂದ ಮತ್ತೆ ಈತ ತನ್ನ ಕೈಚಳ ತೊರಿಸೋಕೆ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಡಬೋದು ಅನ್ನೋ ಕಾರಣಕ್ಕಾಗಿ, ಬೆಂಗಳೂರು ನಗರದಲ್ಲಿರೋ 164 ಪೊಲೀಸ್ ಠಾಣೆಗಳಿಗೆ ಸಿಸಿಕ್ಯಾಮೆರಾದಲ್ಲಿ ಸೆರೆ ಸಿಕ್ಕಿದ್ದ ಫೋಟೋವನ್ನ ಕಳುಹಿಸಿಕೊಟ್ಟಿದ್ದಾರೆ. ಈತನಿಗಾಗಿ ಎಲ್ಲಾ ಪೊಲೀಸರು ಮಾಹಿತಿಯನ್ನ ಕಲೆ ಹಾಕಿ,ಮ ಯಾವುದೇ ಗಳಿಗೆಯಲ್ಲಿ ಬೇಕಾದ್ರೂ ಈತ ಎಂಟ್ರಿ ಕೊಡಬೋದು ಅಂತಾ ಎಚ್ಚರಿಕೆಯನ್ನ ಕೊಟ್ಟಿದ್ದಾರೆ.

ವೀಕ್ಷಕರೇ ಒಂದಲ್ಲ ಎರಡಲ್ಲ ಸುಮಾರು 70 ಕೇಸ್​​ಗಳು ಸರಗಳ್ಳತನ್ನದಲ್ಲೇ ಭಾಗಿಯಾಗಿರೋ ಎನ್​​ಎಸ್​​​ 200 ಪಲ್ಸರ್​​ ರೈಡರ್​​ ಕಮ್ ಚೈನ್ ಸ್ನ್ಯಾಚರ್ ಯಾರು ಅನ್ನೋದೇ ಇಲ್ಲಿಯವರೆಗೂ ಗೊತ್ತೆ ಆಗಿಲ್ಲವಂತೆ. ಕೇವಲ ಸಿಸಿಕ್ಯಾಮೆರದಲ್ಲಿ ಸೆರಿಯಾಗಿರೋ ದೃಶ್ಯದಿಂದ ಮಾತ್ರ ಇಟ್ಟುಕೊಂಡು ಸದ್ಯ ಆತನಿಗಾಗಿ ಸರ್ಚಿಂಗ್ ಅಂಡ್ ವಾಚಿಂಗ್ ಶುರು ಆಗಿದೆ.

ಎರಡು ವರ್ಷ, 40 ಪೊಲೀಸ್ ಠಾಣೆ, 70 ಕೇಸ್​​​, ಇಷ್ಟಾದ್ರೂ ಆತ ಸಿಕ್ಕಿಲ್ಲ ಅಂದಮೇಲೆ ನಿಜಕ್ಕೂ ಆತ ಕಿಲಾಡಿಯೋಂಕಾ ಕಿಲಾಡಿಯೇ ಇರಬೇಕು. ಸದ್ಯ ಆತನಿಗಾಗಿ ಪೊಲೀಸರ್ ವಾಚಿಂಗ್ ಶುರು ಮಾಡಿದ್ದು, ನಿಮ್ಮ ಏರಿಯಾಗೂ ಎನಿ ಟೈಮ್ ಎಂಟ್ರಿ ಕೋಡಬೋದು. ಸೋ ಅಲರ್ಟ್​​ ಆಗಿರಿ.

The post 164 ಸ್ಟೇಷನ್​ಗಳಿಗೆ ಈತನ ಫೋಟೋ ಕಳಿಸಲಾಗಿದೆ.. ಯಾರು ಈ ಖತರ್ನಾಕ್..? appeared first on News First Kannada.

Source: newsfirstlive.com

Source link