ಅವರದ್ದು ನಾಲ್ವರು ಹೆಣ್ಣು ಮಕ್ಕಳಿದ್ದ ಬಡ ಕುಟುಂಬ. ಬಡತನವಿದ್ರೂ ಮನೆಯಲ್ಲಿ ಸಂತೋಷಕ್ಕೇನು ಕೊರತೆ ಇರ್ಲಿಲ್ಲ. ಇಬ್ಬರು ಹೆಣ್ಮಕ್ಕಳ ಮದುವೆಯಾದ ನಂತರ ಹೆತ್ತವರು ಕೂಡ ಸಂತಸದಿಂದಲೇ ದಿನ ದೂಡ್ತಿದ್ರು. ಆದ್ರೆ ಆನಂದಭಾಷ್ಪ ಹರಿಸಬೇಕಾದ ಕಣ್ಣಲ್ಲಿ ಇದೀಗ ಕಣ್ಣೀರ ಧಾರೆ ಹರಿಯುತ್ತಿದೆ. ಅದ್ಕೆ ಕಾರಣವಾಗಿದ್ದು ಹದಿನೇಳೇ ದಿನದ ಅಂತರದಲ್ಲಿ ನಡೆದ ಇಬ್ಬರು ಸುಂದರ ಸಹೋದರಿಯರ ಸಾವು.

ಅದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ, ಬೆಳಗೊಂಡ್ಲು ಎನ್ನುವ ಗ್ರಾಮ. ಆ ಗ್ರಾಮದ ಕಾಫಿ ತೋಟದ ಕಾರ್ಮಿಕ ಉದಯ್ ಹಾಗೂ ಅನಿತಾ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳು. ಆ ನಾಲ್ವರ ಪೈಕಿ ಇಬ್ಬರು ಹೆಣ್ಣು ಮಕ್ಕಳು ಅದಾಗ್ಲೆ ಮದುವೆಯಾಗಿ ಗಂಡನ ಮನೆಯ ಹೊಸ್ತಿಲು ತುಳಿದಿದ್ರು. ಮೊದಲ ಮಗಳು ಸೌಂದರ್ಯ, ಮತ್ತೊಬ್ಬಳು ಐಶ್ವರ್ಯ.

ಒಬ್ಬರು ಸೌಂದರ್ಯ ಮತ್ತು ಮತ್ತೊಬ್ಬರು ಐಶ್ವರ್ಯ. ಹೆಸರಿಗೆ ತಕ್ಕಂತೆ ಇಬ್ಬರು ಕೂಡ ಸೌಂದರ್ಯವಾಗಿಯೂ ಇದ್ದರು. ಒಬ್ಬರಿಗಿಂತ ಮತ್ತೊಬ್ಬರು ಸುಂದರಿಯರೇ. ಹೆತ್ತವರ ಅಂಗಳದಲ್ಲೇ ಬೆಳೆದು ಗಂಡನ ಮನೆ ಸೇರಿಕೊಂಡಿದ್ದರು. ಹೇಳ್ಬೇಕು ಅಂದ್ರೆ ಯಾರು ಶತ್ರುಗಳಿರ್ಲಿಲ್ಲ. ಇರಲಿಲ್ಲ ಅನ್ನೋದಕ್ಕಿಂತ ಯಾರೊಂದಿಗೆ ಹಗೆತನವನ್ನ ಬೆಳೆಸಿಕೊಂಡಿರಲಿಲ್ಲ. ಮೇಲ್ನೋಟಕ್ಕೆ ಕುಟುಂಬ ಕಲಹ ಕೂಡ ಇರ್ಲಿಲ್ಲ. ವೈರತ್ವ ಇಲ್ಲ, ದುಷ್ಮನ್ ಗಳಿಲ್ಲ. ಇಷ್ಟಿದ್ರು ಕೂಡ ಅಕ್ಕ ತಂಗಿ ಇಬ್ಬರು ಒಬ್ಬರಾದ ಮೇಲೆ ಒಬ್ಬರಂತೆ ಇಹಲೋಕ ತ್ಯಜಿಸಿದ್ದರು.

17 ದಿನಗಳಲ್ಲಿ ಅಕ್ಕ-ತಂಗಿ ಆತ್ಮಹತ್ಯೆ
ಎಸ್​​​.. ಇದೇ ಕಾರಣಕ್ಕೆ ಈಗ ಹಲವು ಅನುಮಾನಗಳು ಹುಟ್ಟಿಕೊಂಡಿರೋದು. ಅಕ್ಕ ಆತ್ಮಹತ್ಯೆ ಮಾಡಿಕೊಂಡ 17 ದಿನಕ್ಕೆ ತಂಗಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯಾಕೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ತನಿಖೆಯ ವೇಳೆ ತಿಳಿದು ಬಂದಿದ್ದೇನು? ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿದೆ. ಅದ್ರೆ ಆ ಪ್ರಶ್ನೆಗಳಿಗೆ ಉತ್ತರವನ್ನ ಹುಡುಕುತ್ತ ಹೋದಾಗ ಕೆಲ ಉತ್ತರ ಸಿಕ್ಕಿದೆ.

ಅಕ್ಕ-ತಂಗಿಯರು ಆತ್ಮಹತ್ಯೆಗೆ ಶರಣಾಗಿದ್ದು ಗಂಡಂದಿರ ಮನೇಲಿ
ವಿಚಾರ ಏನು ಅಂದ್ರೆ ಅಕ್ಕ ತಂಗಿ ಇಬ್ಬರಿಗೂ ಮದುವೆ ಆಗಿ ಇನ್ನೂ ಒಂದು ವರ್ಷ ಆಗ್ಲಿಲ್ಲ. ಅಕ್ಕ ಸೌಂದರ್ಯ ತಾನು ಪ್ರೀತಿಸಿದವನನ್ನೇ ಕೈ ಹಿಡಿದ್ರೆ, ಐಶರ್ಯ ಮಾತ್ರ ಹಿರಿಯರ ಆಶೀರ್ವಾದದೊಂದಿಗೆ ಹಸೆಮಣೆ ಏರಿದ್ಲು. ಚಿಕ್ಕ ವಯಸ್ಸಿಗೆ ಅಕ್ಕ ತಂಗಿ ಇಬ್ಬರು ಹಸೆಮಣೆ ಏರಿ ಗಂಡನ ಮನೆ ಸೇರಿ ಒಂದು ವರ್ಷ ಕಳೆಯೋದ್ರೊಳಗೆ, 17 ದಿನಗಳ ಅಂತರದಲ್ಲಿ ಆತ್ಮಹತ್ಯೆ ಮಾಡಿಕೊಂಡು ಬಿಟ್ಟಿದ್ದಾರೆ. ಅಚ್ಚರಿಯ ಸಂಗತಿ ಏನಂದ್ರೆ ಮನೆಯವರ ವಿರೋಧದ ನಡುವೆಯೂ ಸೌಂದರ್ಯ ಪ್ರೀತಿಸಿದವನ ಕೈ ಹಿಡಿದಿದ್ದಳು.

ಫೇಸ್ ಬುಕ್ ನಲ್ಲಿ ಸೌಂದರ್ಯ ಹೃದಯ ಕದ್ದಿದ್ದು ಯಾರು?
ಆರಂಭದಲ್ಲಿ ಫೇಸ್ಬುಕ್ನಲ್ಲಿ ಪರಿಚಯ ನಂತರ ಪ್ರಣಯ

ಮೊದಲ ಸೌಂದರ್ಯಗೆ ಅದೊಬ್ಬ ವ್ಯಕ್ತಿ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ. ಹೊಸನಗರ ತಾಲೂಕು ಕರಿಮನೆ ಹೋಬಳಿಯ ಕಾಡಿಗ್ಗೇರಿ ನಿವಾಸಿ ಉಮೇಶ್​ಎಂಬಾತನ ಜೊತೆ ಸೌಂದರ್ಯಗೆ ಸ್ನೇಹವಾಗಿತ್ತು. ಇವರ ಸ್ನೇಹ ಮುಂದೆ ಪ್ರೀತಿಯಾಗಿ ತಿರುಗಿತ್ತು. ಇಬ್ಬರ ನಡುವೆ ಪರಸ್ಪರ ಬಿಟ್ಟಿಲಾರದಷ್ಟು ನಂಟು ಬೆಳೆದಿದೆ. ಸೌಂದರ್ಯ ತನ್ನ ಪ್ರೀತಿಯ ವಿಷಯವನ್ನು ಮನೆಯಲ್ಲಿ ಪ್ರಸ್ತಾಪ ಮಾಡಿದ್ಳು. ಇಬ್ಬರ ಜಾತಿ ಬೇರೆ ಬೇರೆಯಾದ ಕಾರಣ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು.

ಮನೆಯಲ್ಲಿ ವಿರೋಧ ವ್ಯಕ್ತವಾದ್ರೂ ಸೌಂದರ್ಯ ಮಾತ್ರ ಸುಮ್ಮನಾಗ್ಲಿಲ್ಲ. ಮನೆಯವರ ವಿರೋಧದ ನಡುವೆಯು ತಾನು ಪ್ರೀತಿಸಿದವನ್ನೆ ಕೈ ಹಿಡಿದಿದ್ಳು. ಇದ್ರಿಂದ ಫೇಸ್ ಬುಕ್ ಎಂಬ ದುನಿಯಾದಲ್ಲಿ ಪರಿಚಯ ಮದುವೆ ಎಂಬ ಮುದ್ರೆವೊತ್ತಿತ್ತು. ಸೌಂದರ್ಯ ಮತ್ತು ಉಮೇಶ್ ಕಳೆದ ನವೆಂಬರ್ ನಲ್ಲಿ ಹೆತ್ತವರ ವಿರೋಧದ ನಡುವೆ ಮದುವೆಯಾದ್ರು. ಆ ಹೆತ್ತವರು ಮಾತ್ರ ವಿಶಾಲ ಮನಸ್ಸಿನಿಂದ ತಮ್ಮ ಮಗಳಿಗೆ ಶುಭ ಹಾರೈಸಿದ್ರು. ಎಲ್ಲೇ ಇದ್ರೂ ಚೆನ್ನಾಗಿರ್ಲಪ್ಪ ಎಂದು ಆಶಿಸಿದ್ರು.

ಮನೆಯವರ ವಿರೋಧದ ನಡುವೆ ಮದುವೆಯಾದ್ರೂ ಸೌಂದರ್ಯ ಸಂಸಾರದ ಬಂಡಿ ಸುಖಕರವಾಗಿಯೇ ಸಾಗ್ತಿತ್ತು. ಈ ನಡುವೆ ಉದಯ್ ಹಾಗೂ ಅನಿತಾ ದಂಪತಿ ಮತ್ತೊಬ್ಬಳು ಮಗಳು ಐಶರ್ಯಾ ಮದುವೆ ಕೂಡ ಮಾಡ್ಸಿದ್ದಾರೆ. ಐಶ್ವರ್ಯಾ ಮಾತ್ರ ಹಿರಿಯರ ಆಶಿರ್ವಾದದೊಂದಿಗೆ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದಿದ್ಳು. ಇಬ್ಬರ ಮದುವೆ ಮಾಡಿ ಕೊಟ್ಟ ಖುಷಿಯಲ್ಲಿದ್ದಾಗಲೇ ಜೂನ್ 8 ರಂದು ಸೌಂದರ್ಯ ಹೆತ್ತವರಿಗೆ ಬರ ಸಿಡಿಲು ಬಡಿದಂತ್ತಾಗಿತ್ತು. ಯಾಕಂದ್ರೆ ಹಿರಿಯ ಮಗಳ ಮೃತದೇಹ ಆತ್ಮಹತ್ಯೆ ಮಾಡಿದ ರೀತಿಯಲ್ಲಿ ಗಂಡನ ಮನೆಯಲ್ಲಿ ಪತ್ತೆಯಾಗಿತ್ತು.

ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಐಶ್ವರ್ಯ ಮೃತದೇಹ ಪತ್ತೆ
ವರದಕ್ಷಿಣೆಗಾಗಿ ಮಡದಿಯನ್ನ ಗಂಡನೇ ಮಸಣ ಸೇರಿಸಿದ್ನಾ?
ಏನಿದು ಸುಂದರಿ ಸೌಂದರ್ಯಾಳ ಸಾವಿನ ಅಸಲಿ ರಹಸ್ಯ?

ಜೂನ್ 8 ರಂದು ಐಶ್ವರ್ಯ ತನ್ನ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ಳು. ಐಶ್ವರ್ಯ ಸಾವಿನ ಸುತ್ತಾ ನೂರೊಂದು ಅನುಮಾನಗಳ ಸರಮಾಲೆಯೇ ಹುಟ್ಟಿಕೊಂಡಿದೆ. ಐಶ್ವರ್ಯ ಆತ್ಮಹತ್ಯೆಯಲ್ಲ ಕೊಲೆ ಎಂದು ಅದಾಗ್ಲೆ ಐಶ್ವರ್ಯ ಪೋಷಕರು ಮಹಿಳಾ ಠಾಣೆಯ ಮೆಟ್ಟಿಲು ಕೂಡ ಹತ್ತಿದ್ದಾರೆ. ಗಂಡನೇ ವರದಕ್ಷಿಣೆಗಾಗಿ ಆಕೆಯನ್ನು ಕೊಂದಿದ್ದಾನೆಂದು ಐಶ್ವರ್ಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಇವೆಲ್ಲದರ ನಡುವೆ ಜೂನ್ 10 ರಂದು ಕುಟುಂಬಸ್ಥರು ಕಣ್ಣೀರಿನೊಂದಿಗೆ ಹಿರಿಯ ಮಗಳಿಗೆ ವಿದಾಯ ಹೇಳಿದ್ದಾರೆ. ಜೂ.10 ರಂದು ನಡೆದ ಐಶ್ವರ್ಯ ಅಂತ್ಯಕ್ರಿಯೆಯಲ್ಲಿ ಮಗಳು ಸೌಂದರ್ಯ ಕೂಡ ತನ್ನ ಗಂಡನೊಂದಿಗೆ ಬಂದು ಪಾಲ್ಗೊಂಡಿದ್ಳು. ಕುಟುಂಬವಿಡೀ ಐಶ್ವರ್ಯಳನ್ನ ಕಳೆದುಕೊಂಡ ಶೋಕದಲ್ಲಿತ್ತು. ಮನೆಯಿಡೀ ನೋವಿನ ವಾತಾವರಣ. ಮದುವೆಯಾದ ಒಂದು ವರ್ಷ ತುಂಬುವುದರೊಳಗೆ ಮಗಳು ಸಾವಿನ ಮನೆ ಸೇರಿದ್ರೆ ಹೇಗಾಗ್ಬೇಡ ಹೇಳಿ..? ಐಶ್ವರ್ಯಾ ನೆನಪಲ್ಲೇ ಹೆತ್ತವರು ಕೂಡ ನೋವಿನಲ್ಲೇ ದಿನದೂಡ್ತಿದ್ರು. ಇಂತಹ ಹೊತ್ತಲ್ಲೇ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಐಶ್ವರ್ಯಾಳನ್ನ ಕಳ್ಕೊಂಡ ನೋವಿನಲ್ಲಿದ್ದ ಹೆತ್ತವರ ಕಿವಿಗೆ ಮತ್ತೊಂದು ಸಾವಿನ ಸುದ್ದಿ ಅಪ್ಪಳಿಸಿದೆ.

ಐಶ್ವರ್ಯ ಸಾವಿನ ಎರಡು ವಾರದೊಳಗೆ ಸೌಂದರ್ಯ ಸಾವು
ಸೌಂದರ್ಯ ಮೃತದೇಹ ಕೂಡ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಐಶ್ವರ್ಯಳನ್ನು ಕಳ್ಕೊಂಡ ದುಃಖದಲ್ಲಿದ್ದ ಪೋಷಕರ ಕಿವಿಗೆ ಕೇವಲ ಹದಿನೇಳೇ ದಿನದ ಹಂತರದಲ್ಲಿ ಸೌಂದರ್ಯ ಸಾವಿನ ಸುದ್ದಿ ಕೂಡ ಬಿದ್ದಿತ್ತು. ಐಶ್ವರ್ಯ ಇಹಲೋಕ ತ್ಯಜಿಸಿ 17 ದಿನ ಕಳೆಯುವುದರೊಳಗೆ ಕಾಡಿಗೇರಿಯಲ್ಲಿದ್ದ ಹಿರಿಯ ಮಗಳು ಸೌಂದರ್ಯ ಕೂಡ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ಳು. ಮೂರೇ ವಾರದ ಅಂತರದಲ್ಲಿ ತಮ್ಮ ಇಬ್ಬರು ಮಕ್ಕಳ ಸಾವಿನ ಸುದ್ದಿ ಕೇಳುತ್ತಿದ್ದಂಗೆ ಹೆತ್ತವರು ಕುಸಿದು ಬಿದ್ದಿದ್ದಾರೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಹೆತ್ತವರ ನೋವು ಹೇಗಿರ್ಬೇಡ ಹೇಳಿ..?

ಸೌಂದರ್ಯಳದ್ದು ಕೂಡ ಆತ್ಮಹತ್ಯೆಯಲ್ಲ ಕೊಲೆ ಎಂದು ಸೌಂದರ್ಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸೌಂದರ್ಯಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಆತ್ಮ ಹತ್ಯೆ ಎಂದು ಬಿಂಬಿಸಲು ಫ್ಯಾನ್ ​ಗೆ ನೇಣು ಹಾಕಿದ್ದಾರೆಂದು ಮೃತಳ ತಂದೆ ಉದಯ್ ಆರೋಪ ಮಾಡಿದ್ದಾರೆ.

ಬೇರೆ ಜಾತಿ ಎಂಬ ಕಾರಣಕ್ಕೆ ನನ್ನ ಮಗಳಿಗೆ ಹಿಂಸೆ ನೀಡಿದ್ದಾರೆ. ಅಲ್ಲದೆ ಉಮೇಶನಿಗೆ ಬೇರೊಂದು ಮದುವೆ ಮಾಡಲು ನಿರ್ಧರಿಸಿದ್ದರು. ಸೌಂದರ್ಯಳನ್ನ ಆಕೆಯ ಗಂಡನ ಮನೆಯವ್ರು ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡಿ ಕೊಲೆಗೈದಿದ್ದಾರೆಂದು ಆರೋಪಿಸಿ ಹೆತ್ತವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಹದಿನೇಳು ದಿನದ ಅಂತರದಲ್ಲಿ ನಡೆಯಿತು ಎರಡು ಮರಣ?
ಏನಿದು ಇಬ್ಬರು ಅಂದಾಗಾತಿಯರ ಸಾವಿಗೆ ಅಸಲಿ ಕಾರಣ?

ಹೆತ್ತವರು ತಮ್ಮ ಮಕ್ಕಳಿಗೆ ಏನೂ ಕಡ್ಮೆ ಇಲ್ಲ ಎಂಬಂತೆ ಕೂಲಿ ಮಾಡ್ತಾ ಸಾಕ್ತಿದ್ರು. ಇಬ್ಬರು ಮಕ್ಕಳನ್ನ ಮದುವೆ ಮಾಡಿಯೂ ಕೊಟ್ಟಿದ್ರು. ಆದ್ರೆ ವಿಧಿಯಾಟವೋ ಅಥವಾ ಗಂಡನ ಮನೆಯವರು ವರದಕ್ಷಣೆಯ ಆಸೆಗೆ ಬಲಿಯಾದ್ರಾ? ಗೊತ್ತಿಲ್ಲ. ಇಬ್ಬರು ಹೆಣ್ಮಕ್ಕಳು ಇದೀಗ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ಪೊಲೀಸರು ಇದೀಗ ಅಕ್ಕ ತಂಗಿಯರ ಸಾವಿನ ಹಿಂದಿನ ಕಾರಣವನ್ನ, ಅಸಲಿತ್ತನ್ನು ಹುಡುಕುವ ಪ್ರಯತ್ನದಲ್ಲಿದ್ದಾರೆ.

ಒಟ್ಟಿನಲ್ಲಿ ಸುಂದರಿಯರಿಬ್ಬರ ಜೀವನ ಅರಳುವ ಮುನ್ನವೇ ಬಾಡಿ ಹೋಗಿವೆ. ಬಾಳಿ ಬದುಕಬೇಕಾದ ಮಕ್ಕಳಿಬ್ಬರು ಸಾವಿನ ಮನೆ ಸೇರಿದ್ದಾರೆ. ಅಕ್ಕ ತಂಗಿಯರ ಸಾವಿನ ಅಸಲಿಯತ್ತು ಶೀಘ್ರವೇ ಹೊರ ಬರಲಿ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಐಶ್ವರ್ಯಾ ಹಾಗೂ ಸೌಂದರ್ಯ ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ. ಪೊಲೀಸ್ ತನಿಖೆಯಿಂದಲೇ ಆತ್ಮಹತ್ಯೆಯ ಅಸಲಿ ರಹಸ್ಯ ಹೊರಬರಬೇಕಾಗಿದೆ.

ಎರಡು ಜೀವ, ಸುಂದರ ಜೀವನ.. ಆದ್ರೆ ಸುಂದರ ಜೀವನಕ್ಕೆ ಅದ್ಯಾವ ವಕ್ರದೃಷ್ಟಿ ಬಿತ್ತೋ ಗೊತ್ತಿಲ್ಲ. ಸುಂದರವಾದ ಅಕ್ಕ ತಂಗಿಯರಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಅಂತಾ ಹೇಳಲಾಗ್ತಾಯಿದೆ. ಈ ನಡುವೆ ಕೊಲೆ ಅನ್ನೋ ಆರೋಪ ಕೇಳಿ ಬಂದಿದೆ. ಆದ್ರೆ ಅದು ಯಾವ ಕಾರಣ ಇರಬಹುದು ಅನ್ನೋದು ತನಿಖೆಯಿಂದ ಮಾತ್ರ ತಿಳಿದು ಬರಬೇಕಿದೆ.

The post 17 ದಿನದ ಅಂತರದಲ್ಲಿ ಅಕ್ಕ-ತಂಗಿ ಮರಣ.. ಇಬ್ಬರು ಅಂದಗಾತಿಯರ ಸಾವಿಗೆ ಏನು ಅಸಲಿ ಕಾರಣ? appeared first on News First Kannada.

Source: newsfirstlive.com

Source link