ಚಾಮರಾಜನಗರ: ಜಿಲ್ಲೆಯಲ್ಲಿ ಕಡಲೆಕಾಯಿ ಜೊತೆಗೆ ಮಾಗಳಿ ಬೇರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ವಾಹನ ಜಪ್ತಿ ಮಾಡಲಾಗಿದ್ದು ಸುಮಾರು 1,750 ಕೆ.ಜಿ. ಬೇರನ್ನ ವಶಕ್ಕೆ ಪಡೆಯಲಾಗಿದೆ. ತಮಿಳುನಾಡು ಮೂಲದ ಸೆಂಥಿಲ್ ಕುಮಾರ್(43), ಮುರುಗೇಶ್(41) ಬಂಧಿತ ಆರೋಪಿಗಳು.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಜಾಗೇರಿ ಗ್ರಾಮದ ಶಾಂತಿನಗರ ಸಮೀಪ ಘಟನೆ ನಡೆದಿದ್ದು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದಿಂದ ದಾಳಿ ನಡೆದಿದೆ. ಕೊಳ್ಳೇಗಾಲದ ಸಿಐಡಿ ಅರಣ್ಯ ಸಂಚಾರಿ ದಳದಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಮಾಗಳಿ ಬೇರು..?
ದಕ್ಷಿಣ ಭಾರದಲ್ಲಿ ಕಂಡುಬರುವ ಮಾಗಳಿ ಹಂಬುಗಳ ಬೇರುಗಳಲ್ಲಿ ಔಷಧೀಯ ಗುಣಗಳಿವೆ ಎನ್ನಲಾಗಿದೆ. ಇವು ಬೇಲಿಗಳಿಗೆ ಅಂಟಿಕೊಂಡತೆ ಬೆಳೆಯುವ ಹಂಬು. ಇದರ ಬೇರುಗಳಿಗೆ ಭಾರೀ ಬೇಡಿಕೆಯೂ ಇದ್ದು ಕೆಜಿಗೆ 100 ರೂವರೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುವವರೂ ಇದ್ದಾರೆ. ಅವೈಜ್ಞಾನಿಕ ಸಂಗ್ರಹದಿಂದಾಗಿ ಈ ಬಳ್ಳ ಅಳಿವಿನಂಚಿಗೆ ಬಂದಿದ್ದು ಅರಣ್ಯ ಇಲಾಖೆ ಈ ಹಿಂದೆ ಬೇರಿನ ಸಂಗ್ರಹವನ್ನು ನಿಷೇಧಿಸಿದೆ.

ಆಯುರ್ವೇದ ಮತ್ತು ನಾಟಿ ಔಷಧಿಗಳಲ್ಲಿ ಈ ಬೇರನ್ನ ಬಳಸುವುದಿದೆ. ಅಜೀರ್ಣ, ಗರ್ಭಾಶಯದ ತೊಂದರೆ, ಸಂಧಿವಾತ, ಚರ್ಮರಗ, ನಿಶ್ಯಕ್ತಿ, ಹಿಮೋಗ್ಲೋಬೀನ್ ಕೊರತೆ ಇತ್ಯಾದಿ ಖಾಯಿಲೆಗಳಿಗೆ ಈ ಬೇರಿನಿಂದ ಮಾಡಿದ ಮದ್ದು ಉಪಯುಕ್ತ ಎನ್ನಲಾಗಿದೆ.

The post 1,750 ಕೆ.ಜಿ. ಮಾಗಳಿ ಬೇರು ಸಾಗಿಸ್ತಿದ್ದವ್ರು ಅಂದರ್.. ಈ ಬೇರಿನ ವಿಶೇಷತೆ ಏನು..? appeared first on News First Kannada.

Source: newsfirstlive.com

Source link