ಚೆನ್ನೈ: ಇತ್ತೀಚೆಗೆ ತಮಿಳುನಾಡಿನ ಎಐಎಡಿಎಂಕೆ ಪಕ್ಷ ಮಾಜಿ ಸಿಎಂ ದಿ. ಜಯಲಲಿತಾ ಆಪ್ತೆ ಶಶಿಕಲಾ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂಬ ಕಾರಣಕ್ಕೆ 18 ಎಮ್​ಎಲ್​ಎಗಳನ್ನ ಪಕ್ಷದಿಂದ ಕಿತ್ತುಹಾಕಿತ್ತು. ಈ ಹಿನ್ನೆಲೆ ಕಿಡಿಕಾರಿರುವ ಶಶಿಕಲಾ ಎಐಎಡಿಎಂಕೆ ನಾಯಕರಿಗೆ ಪರೋಕ್ಷ ವಾರ್ನಿಂಗ್ ಕೊಟ್ಟಿದ್ದಾರೆ.

ಎಮ್​ಎಲ್​ಎಗಳನ್ನ ಪಕ್ಷದಿಂದ ಅನರ್ಹಗೊಳಿಸಿದ್ದು ಅನಗತ್ಯ ನಡೆ. ಅಮ್ಮ ಜಯಲಲಿತಾ ಅವರು ಅನಾರೋಗ್ಯಕ್ಕೊಳಗಾಗಿದ್ದಾಗ ಕಷ್ಟಪಟ್ಟು ಗೆದ್ದು ಬಂದವರು ಅವರು. ಈ ಸತ್ಯಾಂಶವನ್ನ ಅವರು ಮರೆತಿದ್ದಾರೆ. ಎಮ್​ಎಲ್​ಎಗಳನ್ನು ಡಿಸ್​ಕ್ವಾಲಿಫೈ ಮಾಡುವ ಮೂಲಕ ದೊಡ್ಡ ಮಿಸ್ಟೇಕ್ ಮಾಡಿದೆ ಎಂದು ಎಚ್ಚರಿಸಿದ್ದಾರೆ.

ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ಪಕ್ಷ ಇದರಿಂದಾಗುವ ಪರಿಣಾಮವನ್ನ ಮರೆತಿದೆ.. ಪಕ್ಷದ ನಾಯಕರು ವಿಧೇಯತೆ ಕಳೆದುಕೊಂಡಿದ್ದರಿಂದಲೇ ಚುನಾವಣೆಯಲ್ಲಿ ಸೋಲನುಭವಿಸಬೇಕಾಯ್ತು ಎಂದು ಕಿಡಿಕಾರಿದ್ದಾರೆ. ಎಐಎಡಿಎಂಕೆ ಮಾರ್ಟಿ ಮೂರು ಬಾರಿಗೆ ಅಧಿಕಾರ ನಡೆಸಬಹುದಿತ್ತು ಅಂತಲೂ ಇದೇ ವೇಳೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶಶಿಕಲಾಗೆ ಶಾಕ್; ಪಕ್ಷದ 16 ಪ್ರಮುಖರನ್ನ ಉಚ್ಛಾಟಿಸಿದ AIADMK

ಸದ್ಯದ ಪಕ್ಷದ ನಾಯಕರು ಪಕ್ಷದವರನ್ನೇ ಮಲತಾಯಿಯಂತೆ ನೋಡುತ್ತಿದ್ದಾರೆ. ನಾನು ಎಐಎಡಿಎಂಕೆಯ 1.5 ಕೋಟಿ ಕ್ಯಾಡ್ರೆಯನ್ನ ಕಾಪಾಡುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾರೆ.

The post 18 ಎಮ್​ಎಲ್​​ಎಗಳನ್ನ ಅನರ್ಹಗೊಳಿಸಿದ AIADMK.. ‘ಬಿಗ್ ಮಿಸ್ಟೇಕ್’ ಮಾಡಿದೆ ಎಂದ ಶಶಿಕಲಾ appeared first on News First Kannada.

Source: newsfirstlive.com

Source link