ಲಂಡನ್: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ವಿಶ್ವಟೆಸ್ಟ್ ಚಾಂಪಿಯನ್‍ಶಿಪ್ ಟ್ರೋಫಿಗಾಗಿ ಕಾದಾಟ ಆರಂಭವಾಗಿದೆ. ಈ ನಡುವೆ ಭಾರತ ತಂಡ ನ್ಯೂಜಿಲೆಂಡ್ ತಂಡದ ವಿರುದ್ಧ ಕಳೆದ 18 ವರ್ಷಗಳಿಂದ ಐಸಿಸಿ ಆಯೋಜಿಸುವ ಪ್ರತಿಷ್ಠಿತ ಟೂರ್ನಿಗಳಲ್ಲಿ ಮುಗ್ಗರಿಸಿದೆ. ಈ ಬಾರಿ ಭಾರತ, ನ್ಯೂಜಿಲೆಂಡ್ ವಿರುದ್ಧ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ.

ಭಾರತ ತಂಡ 2003ರಲ್ಲಿ ಐಸಿಸಿಯ ಏಕದಿನ ವಿಶ್ವಕಪ್‍ನಲ್ಲಿ ಕೀವಿಸ್ ತಂಡವನ್ನು ಸೋಲಿಸಿತ್ತು. ಬಳಿಕ 2007, 2016 ಮತ್ತು 2019ರಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಶರಣಾಗಿದೆ. ಅದರಲ್ಲೂ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತದ ಸೋಲು ಅಭಿಮಾನಿಗಳಲ್ಲಿ ಈಗಲೂ ಕಾಡುತ್ತಿದೆ. ಇದನ್ನೂ ಓದಿ: WTC ಫೈನಲ್ ಭಾರತ, ನ್ಯೂಜಿಲೆಂಡ್ ತಂಡದ ವೇಗಿಗಳ ಬಲಾಬಲ

ಐಸಿಸಿ ಟ್ರೋಫಿಗಳ ಪಂದ್ಯಾಟಗಳಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಈವರೆಗೆ ಒಟ್ಟು 11 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಭಾರತ 3 ಬಾರಿ ಜಯಗಳಿಸಿದರೆ, ನ್ಯೂಜಿಲೆಂಡ್ 8 ಬಾರಿ ಭಾರತ ವಿರುದ್ಧ ಮೇಲುಗೈ ಸಾಧಿಸಿದೆ. ಭಾರತ ತಂಡ ಕೀವಿಸ್ ವಿರುದ್ಧ 2003 ಮತ್ತು 1987ರ ಏಕದಿನ ವಿಶ್ವಕಪ್‍ನಲ್ಲಿ ಮಾತ್ರ ಜಯ ಸಾಧಿಸಿದೆ. ಬಳಿಕ ನಡೆದ ಎಲ್ಲಾ ಪಂದ್ಯಗಳಲ್ಲಿ ಸೋಲಿನ ಕಹಿ ಅನುಭವಿಸಿದೆ. ಈ ಎಲ್ಲಾ ಸೋಲಿನ ಸೇಡನ್ನು ಈ ಬಾರಿ ತೀರಿಸುವ ತವಕದಲ್ಲಿ ಭಾರತ ತಂಡವಿದೆ. ಇದನ್ನೂ ಓದಿ: ಕೊಹ್ಲಿ, ವಿಲಿಯಮ್ಸನ್ ನಾಯಕತ್ವ ರೆಕಾರ್ಡ್ – ಯಾರು ಬೆಸ್ಟ್ ?

ಭಾರತ ಫೈನಲ್‍ಗೇರಿದ್ದು ಹೇಗೆ?
ಕೊರೊನಾದಿಂದಾಗಿ ಹಲವು ಕ್ರಿಕೆಟ್ ಸರಣಿಗಳು ರದ್ದುಗೊಂಡಿತು. ಹಾಗಾಗಿ ಐಸಿಸಿ ಹೊಸ ಮಾನದಂಡ ರೂಪಿಸಿತು. ಇದರ ಅನ್ವಯ ಭಾರತ ತಂಡ ಒಟ್ಟು 6 ಸರಣಿಗಳಲ್ಲಿ 17 ಪಂದ್ಯಗಳನ್ನು ಆಡಿ 12 ಪಂದ್ಯದಲ್ಲಿ ಗೆದ್ದು, 4 ರಲ್ಲಿ ಸೋತು, 1 ಪಂದ್ಯ ಡ್ರಾಗೊಂಡು, 520 ಅಂಕಗಳನ್ನು ಗಳಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಫೈನಲ್ ಪ್ರವೇಶಿಸಿತು.

12 ಕೋಟಿ ಬಹುಮಾನ
ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‍ನಲ್ಲಿ ಗೆಲ್ಲುವ ತಂಡ 1.6 ಮಿಲಿಯನ್ ಡಾಲರ್(ಅಂದಾಜು 12 ಕೋಟಿ ರೂಪಾಯಿ) ಬಹುಮಾನವಾಗಿ ಪಡೆದರೆ. ಸೋತ ತಂಡ 6 ಕೋಟಿ ರೂಪಾಯಿ ಪಡೆಯಲಿದೆ. ಒಂದು ವೇಳೆ ಪಂದ್ಯ ಡ್ರಾಗೊಂಡರೆ ಎರಡು ತಂಡಗಳು ಬಹುಮಾನ ಮೊತ್ತವನ್ನು ಸರಿಸಮಾನವಾಗಿ ಹಂಚಿಕೊಳ್ಳಲಿದೆ.

The post 18 ವರ್ಷಗಳಿಂದ ಐಸಿಸಿ ಟೂರ್ನಿಯಲ್ಲಿ ಕೀವಿಸ್ ವಿರುದ್ಧ ಭಾರತ ಗೆದ್ದಿಲ್ಲ – ಈ ಬಾರಿ ಗೆಲುವು ಯಾರಿಗೆ? appeared first on Public TV.

Source: publictv.in

Source link