18 ವರ್ಷಗಳ ಬಳಿಕ ಪ್ರದರ್ಶನಗೊಂಡ ‘ವರ್ಷಂ’ ಚಿತ್ರ; ಅಭಿಮಾನಿಗಳ ಪ್ರೀತಿಗೆ ಭಾವುಕರಾದ ತ್ರಿಷಾ – varsham released after 18 years trisha is overwhelmed by the love of her fans


‘ಪ್ರಭಾಸ್​’ 20 ವರ್ಷಗಳ ಸಿನಿ ಪಯಣದ ಸಂಭ್ರಮಕ್ಕಾಗಿ ಹೈದರಾಬಾದ್​ನ ಥಿಯೇಟರ್​ನಲ್ಲಿ 2004 ರಲ್ಲಿ ತೆರೆಕಂಡ ‘ವರ್ಷಂ’ ಚಿತ್ರವನ್ನು 18 ವರ್ಷಗಳ ಬಳಿಕ ಪ್ರದರ್ಶನ ಮಾಡಲಾಗಿದೆ.

ನಟಿ ‘ತ್ರಿಷಾ’ (trishA)ಅವರ ಹದಿನೆಂಟು ವರ್ಷದ ಹಿಂದಿನ ತೆಲುಗು ಸಿನಿಮಾ ‘ವರ್ಷಂ‘ ಥಿಯೇಟರ್​ನಲ್ಲಿ ಇತ್ತೀಚೆಗೆ ಪ್ರದರ್ಶಿಸಲಾಯಿತು. ಪ್ರಭಾಸ್​ ಅವರ 20 ವರ್ಷಗಳ ಸಿನಿ ಪಯಣವನ್ನು ಸಂಭ್ರಮಿಸಲು ಈ ಸಿನಿಮಾವನ್ನು ಪ್ರದರ್ಶಿಸಲಾಗಿದೆ. ವರ್ಷಂ ಸಿನಿಮಾದ ಬಗ್ಗೆ ಅಭಿಮಾನಿಗಳ ಪ್ರತಿಕ್ರಿಯೆಯಿಂದ ತ್ರಿಷಾ ಭಾವುಕರಾದರು. ‘ಹದಿನೆಂಟು ವರ್ಷಗಳ ಬಳಿಕ ಮತ್ತೆ ನನ್ನ ಹೃದಯ ತುಂಬಿದೆ, ಇದು ನನ್ನ ಮೊದಲ ತೆಲುಗು ಚಿತ್ರ, ನಿಮ್ಮ ಈ ಅಭಿಮಾನ, ಸಿನಿಮಾಗಳು ಎಂದೆಂದಿಗೂ ಶಾಶ್ವತ ಎಂದು ತೋರಿಸಿದೆ’ ಎಂದಿದ್ದಾರೆ.

ಇನ್ನು ಈ ಸಿನಿಮಾವನ್ನು ನಿರ್ದೇಶಕ ವೀರು ಪೋಟ್ಲ ಅವರು ನಿರ್ದೇಶಿಸಿದ್ದು, ಈ ಸಿನಿಮಾದಲ್ಲಿ ಪ್ರಭಾಸ್​ ಮತ್ತು ತ್ರಿಷಾ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರೇಮಿಗಳ ಕುರಿತದಾದ ಕಥೆ ಇದಾಗಿದ್ದು, 2004 ರಲ್ಲಿ ಬಹುದೊಡ್ಡ ಯಶಸ್ಸು ಕಂಡ ಈ ಸಿನಿಮಾ ಬರೊಬ್ಬರಿ 175 ದಿನಗಳಿಗಿಂತ ಹೆಚ್ಚು ಕಾಲ ಥಿಯೇಟರ್​ನಲ್ಲಿ ಪ್ರದರ್ಶನಗೊಂಡಿತ್ತು. ಈ ಸಿನಿಮಾವನ್ನ ನಂತರ ತಮಿಳಿನಲ್ಲಿ ‘ಮಝೈ'(2005) ಹಾಗೂ ಹಿಂದಿಯಲ್ಲಿ ‘ಬಾಘಿ'(2016) ರಲ್ಲಿ ರಿಮೇಕ್​ ಮಾಡಲಾಯಿತು.

TV9 Kannada


Leave a Reply

Your email address will not be published.