ಗದಗ: 18 ವರ್ಷ ಮೇಲ್ಪಟ್ಟವರಿಗೆ ಮೇ 1ರಿಂದ ಲಸಿಕೆ ಹಾಕಲ್ಲ. ಇನ್ನೂ ಒಂದು ವಾರ ಮುಂದೂಡುವ ಸಾಧ್ಯತೆ ಇದೆ ಅಂತ ಸಚಿವ ಸಿ.ಸಿ‌ ಪಾಟೀಲ್ ಹೇಳಿದ್ದಾರೆ. ನಗರದ ಜಿಲ್ಲಾ ಆಡಳಿತ ಭವನದಲ್ಲಿ ಸಿ.ಎಂ ಜೊತೆ ವಿಡಿಯೋ ಕಾನ್ಫರೆನ್ಸ್ ಹಾಗೂ ಅಧಿಕಾರಿಗಳ ಸಭೆ ನಂತರ ಮಾತನಾಡಿದ ಅವರು, ಇಡೀ ರಾಜ್ಯಾದ್ಯಂತ 18 ವರ್ಷ ಮೆಲ್ಪಟ್ಟವರಿಗೆ ಲಸಿಕೆ ನೀಡುವುದು ತಡವಾಗಲಿದೆ ಎಂದರು.

1 ಮತ್ತು 2 ನೇ ಹಂತದ ಲಸಿಕೆ ವಿತರಣೆ ಮುಗಿಯಬೇಕಿದೆ. ಅಷ್ಟರಲ್ಲಿ ಇನ್ನಷ್ಟು ಡೋಸ್ ಸಂಗ್ರಹಿಸಿ ಮುಂದೆ ದಿನಾಂಕ ನಿಗದಿಯಾದ ನಂತರ ಲಸಿಕೆ ನೀಡಲಾಗುತ್ತದೆ ಎಂದು ಸಿ.ಸಿ ಪಾಟೀಲ್ ಹೇಳಿದರು. ಹಾಗೇ ಕೊರೊನಾ ಪಾಸಿಟಿವ್ ಬಂದ ಎಲ್ಲರಿಗೂ ರೆಮ್ಡೆಸಿವಿರ್ ಇಂಜೆಕ್ಷನ್ ಕೊಡೋದಿಲ್ಲ. ಅವಶ್ಯಕತೆ ಇದ್ದವರಿಗೆ ಮಾತ್ರ ಕೊಡಿ ಅಂತ ವೈದ್ಯರಿಗೆ ಆಗ್ರಹಿಸಿದರು.

ಗದಗ ಜಿಲ್ಲೆ ಸರ್ಕಾರಿ ಆಸ್ಪತ್ರೆಯಲ್ಲಿ ರೆಮ್ಡೆಸಿವಿರ್ ಕೊರತೆ ಇಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಕೊರತೆ ಇದೆ. ಜಿಲ್ಲೆಯಲ್ಲಿ 650 ಕೋವಿಡ್ ಸೋಂಕಿತರಿದ್ದಾರೆ. 182 ಜನ ಜಿಮ್ಸ್ ಸೇರಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರೆ, 72 ಜನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  467 ಜನ ಹೋಮ್ ಐಸೋಲೇಶನ್ನಲ್ಲಿ‌ದ್ದಾರೆ. ಗದಗ ಜಿಲ್ಲೆಯಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಇಲ್ಲ. ಕೋವಿಡ್ ಕೇರ್ ಕೇಂದ್ರದಲ್ಲಿ 700 ಹಾಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯ ಎಲ್ಲಾ ಸರ್ಕಾರಿ ‌ಆಸ್ಪತ್ರೆಗಳಲ್ಲಿ 500 ಹಾಸಿಗೆ ವ್ಯವಸ್ಥೆ ಇದ್ದು, ಇನ್ನೂ 200 ಹೆಚ್ಚುವರಿ ಹಾಸಿಗೆ ವ್ಯವಸ್ಥೆಗೆ ಸಿದ್ದತೆ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ 150 ಹಾಸಿಗೆ ವ್ಯವಸ್ಥೆ ಇದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ರು. ಈ ಸಂದರ್ಭದಲ್ಲಿ ಎಮ್.ಎಲ್.ಸಿ ಎಸ್.ವಿ ಸಂಕನೂರ, ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು, ಎಸ್.ಪಿ ಯತೀಶ್ ಹಾಗೂ ಜಿ.ಪಂ ಮುಖ್ಯಾಧಿಕಾರಿ ಉಪಸ್ಥಿತರಿದ್ದರು.

ನ್ಯೂಸ್​ಫಸ್ಟ್​ ಕಳಕಳಿ : ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ. ಮಾಸ್ಕ್ ಧರಿಸಿ, ಸೋಶಿಯಲ್ ಡಿಸ್ಟನ್ಸ್ ಕಾಪಾಡಿ. ಕೈ ತೊಳೆಯುತ್ತಿರಿ. ಮತ್ತು ಮೇ 1 ರಿಂದ 18ರ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಅರ್ಹರಾಗಿದ್ದು ರೆಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ https://www.cowin.gov.in/  ಇಲ್ಲಿಗೆ ಭೇಟಿ ಕೊಟ್ಟು ನೊಂದಣಿ ಮಾಡಿಕೊಳ್ಳಿ. ಮತ್ತೊಂದು ಮುಖ್ಯ ಸಂಗತಿ ಗಮನಿಸಿ CoWin ಆ್ಯಪ್ ಸಾರ್ವಜನಿಕರಿಗೆ ಅಲ್ಲ. ಹೀಗಾಗಿ ಕಡ್ಡಾಯವಾಗಿ ವೆಬ್​ಸೈಟ್​ನಲ್ಲಿಯೇ ನೊಂದಾಯಿಸಿಕೊಳ್ಳಬೇಕು.

The post 18 ವರ್ಷ ಮೇಲ್ಪಟ್ಟವ್ರಿಗೆ ಮೇ 1ರಿಂದ ಲಸಿಕೆ ಹಾಕಲ್ಲ, 1 ವಾರ ಮುಂದೂಡುವ ಸಾಧ್ಯತೆ -ಸಚಿವ ಸಿ.ಸಿ‌ ಪಾಟೀಲ್ appeared first on News First Kannada.

Source: newsfirstlive.com

Source link