ಬೆಂಗಳೂರು: ರಾಜ್ಯದಲ್ಲಿ ಕೋವ್ಯಾಕ್ಸಿನ್ ಲಸಿಕೆ ಸದ್ಯಕ್ಕೆ ಇಲ್ಲ, ಎರಡನೇ ಡೋಸ್ ಪಡೆಯಬೇಕಾದ ಫಲಾನುಭವಿಗಳಿಗೆ ಶೀಘ್ರದಲ್ಲೇ ಒದಗಿಸಲಾಗುತ್ತದೆ ಅಂತ ಸರ್ಕಾರ ಭರವಸೆ ನೀಡಿದೆ. ಕೊರೊನಾ ವ್ಯಾಕ್ಸಿನೇಷನ್ ಬಗ್ಗೆ ಉಂಟಾಗಿರುವ ಗೊಂದಲಗಳ ಬಗ್ಗೆ ಸುತ್ತೋಲೆ ಹೊರಡಿಸಿ ಸ್ಪಷ್ಟನೆ ನೀಡಿದೆ.

45 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್

  • ಕೋವಿಶೀಲ್ಡ್​ ಮೊದಲನೇ ಡೋಸ್​: ನಗರ ಪ್ರದೇಶಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಆನ್​ಲೈನ್ ಮೂಲಕ ನೋಂದಣಿ ಮಾಡಿಕೊಂಡವರಿಗೆ ವ್ಯಾಕ್ಸಿನ್ ನೀಡಲಾಗುವುದು.
  • ಕೋವಿಶೀಲ್ಡ್​ ಎರಡನೇ ಡೋಸ್​: ಹತ್ತಿರದ ಕೋವಿಡ್-19 ಲಸಿಕಾ ಕೇಂದ್ರಕ್ಕೆ‌ ನೇರವಾಗಿ ಹೋಗಿ ತೆಗೆದುಕೊಳ್ಳಬಹುದು.
  • ಕೋವ್ಯಾಕ್ಸಿನ್ ಮೊದಲ ಡೋಸ್​: ಸದ್ಯಕ್ಕೆ ಲಭ್ಯ ಇರುವುದಿಲ್ಲ.
  • ಕೋವ್ಯಾಕ್ಸಿನ್ ಎರಡನೇ ಡೋಸ್​: ಎರಡನೇ ಡೋಸ್ ಪಡೆಯಬೇಕಾದ ಫಲಾನುಭವಿಗಳಿಗೆ ಎಸ್ಎಂಎಸ್ ಮೂಲಕ ಮಾಹಿತಿ ಸಿಗಲಿದೆ. ಎಸ್ಎಂಎಸ್​ನಲ್ಲಿ ತಿಳಿಸಲಾದ ಲಸಿಕಾ ಕೇಂದ್ರಕ್ಕೆ‌ ತೆರಳಿ ಲಸಿಕೆಯನ್ನ ಪಡೆಯಬಹುದು.

18-44 ವರ್ಷದವರಿಗೆ ಲಸಿಕೆ

  • ಸದ್ಯಕ್ಕೆ ಲಭ್ಯವಿರುವುದಿಲ್ಲ
  • ಆದರೆ ರಾಜ್ಯ ಗುರುತಿಸಿರುವ ಕೋವಿಡ್ -19 ಮುಂಚೂಣಿ ಕಾರ್ಯಕರ್ತರಿಗೆ/ ದುರ್ಬಲ ಗುಂಪಿನವರಿಗೆ ಮತ್ತು ಆದ್ಯತೆ ಗುಂಪಿನವರಿಗೆ ಆಯಾ ಗುಂಪಿನ ನಿಯೋಜಿತ ನೋಡಲ್ ಅಧಿಕಾರಿಗಳು ಲಸಿಕೆ ನೀಡುವ ದಿನ ಮತ್ತು ಸಮಯವನ್ನ ತಿಳಿಸುತ್ತಾರೆ.

ನಿನ್ನೆಯಿಂದ 18 ರಿಂದ 44 ವರ್ಷದೊಳಗಿನ‌ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ‌ ನೀಡೋದಾಗಿ‌  ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮೂಲಕ ಮಾಹಿತಿ‌ ನೀಡಿದ್ರು. 2 ಲಕ್ಷ ಡೋಸ್ ಬರ್ತಿದ್ದು ವ್ಯಾಕ್ಸಿನೇಷನ್ ಪುನರಾರಂಭ ಮಾಡೋದಾಗಿ ಮಾಹಿತಿ ನೀಡಿದ್ರು. ಆದರೆ ಒಂದೇ ದಿನಕ್ಕೆ ಸರ್ಕಾರ ತನ್ನ ನಿರ್ಧಾರವನ್ನ ಬದಲಿಸಿದೆ.

The post 18-44 ವರ್ಷದವರಿಗೆ ಸದ್ಯಕ್ಕೆ ಲಸಿಕೆ ಲಭ್ಯವಿಲ್ಲ -ಹೊಸ ಸುತ್ತೋಲೆ ಹೊರಡಿಸಿದ ಸರ್ಕಾರ appeared first on News First Kannada.

Source: newsfirstlive.com

Source link