ದಾವಣಗೆರೆ: ಯುವಕರಿಂದ ಲಸಿಕೆಗೆ ಬೇಡಿಕೆ ಹೆಚ್ಚಿದೆ. ಸರ್ಕಾರ ಅವಕಾಶ ಕೊಟ್ಟರೆ 18 ರಿಂದ 44 ವರ್ಷದವರಿಗೂ ಲಸಿಕೆ ನೀಡುತ್ತೇವೆ ಅಂತ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪ ಹೇಳಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ಈಗಾಗಲೆ ನಮ್ಮ‌ ಸ್ವಂತ ಖರ್ಚಿನಲ್ಲಿ ಸುಮಾರು ನಾಲ್ಕು ಕೋಟಿ ರೂಪಾಯಿ ವೆಚ್ಚ ಮಾಡಿ 45 ವರ್ಷ ಮೇಲ್ಪಟ್ಟವರಿಗೆ 60 ಸಾವಿರ ಡೋಸ್ ಕೊವಿಶೀಲ್ಡ್ ಕೊಡಲಾಗುತ್ತಿದೆ. 18 ರಿಂದ 44 ವರ್ಷದವರಿಗೆ ಖಾಸಗಿಯವರು ಲಸಿಕೆ ಪೂರೈಸಲು ಸರ್ಕಾರ ಕೆಲ ನಿರ್ಬಂಧಗಳನ್ನ ಹಾಕಿದೆ ಎಂದರು.

ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಕೊಡಿ ಎಂದು ಕೇಳುತ್ತಾರೆ. ಸರ್ಕಾರ ನಿರ್ಬಂಧಗಳನ್ನ ತೆರವುಗೊಳಿಸಿದರೆ ದಾವಣಗೆರೆ ಜಿಲ್ಲೆಯ ಜನತೆಗೆ ನಮ್ಮ ಸ್ವಂತ ಖರ್ಚಿನಲ್ಲಿ ಲಸಿಕೆ ನೀಡಲಾಗುವುದು ಎಂದು ಶಾಮನೂರ ಶಿವಶಂಕರಪ್ಪ ತಿಳಿಸಿದರು.

The post ’18-44 ವರ್ಷದವ್ರಿಗೂ ಸ್ವಂತ ಖರ್ಚಲ್ಲಿ ಫ್ರೀ ಲಸಿಕೆ ಕೊಡಲು ರೆಡಿ.. ಆದ್ರೆ’ appeared first on News First Kannada.

Source: newsfirstlive.com

Source link